Advertisement

ಐಎಂಎ: ಸಿಬಿಐ ಎಫ್ಐಆರ್‌

01:33 AM Sep 04, 2019 | mahesh |

ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರ ಮುಖ್ಯಸ್ಥ ಮನ್ಸೂರ್‌ ಖಾನ್‌, ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಆಗಿದ್ದ ಐಎಎಸ್‌ ಅಧಿಕಾರಿ ಬಿ.ಎಂ.ವಿಜಯ ಶಂಕರ್‌, ಉಪವಿಭಾಗಾ ಧಿಕಾರಿ ಎಲ್.ಸಿ ನಾಗರಾಜು ಸೇರಿ ಒಟ್ಟು 31 ಆರೋಪಿಗಳ ವಿರುದ್ಧ ಸಿಬಿಐ ಎಫ್ಐಆರ್‌ ದಾಖಲಿಸಿಕೊಂಡಿದೆ.

Advertisement

ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿ ಐಎಂಎ ಕಂಪನಿಯನ್ನು ಪರಿಗಣಿಸಿದ್ದು, ಎರ ಡನೇ ಆರೋಪಿಯನ್ನಾಗಿ ಐಎಂಎ ಮಾಲೀಕ ಮನ್ಸೂರ್‌ ಖಾನ್‌, 18ನೇ ಆರೋಪಿಯಾಗಿ ಎಲ್.ಸಿ ನಾಗರಾಜ್‌, 19ನೇ ಆರೋಪಿಯಾಗಿ ವಿಜಯ ಶಂಕರ್‌ ಅವರ ಹೆಸರನ್ನು ಎಫ್ಐಆರ್‌ನಲ್ಲಿ ಉಲ್ಲೇಖೀಸಲಾಗಿದೆ.

ನಿರ್ದೇಶಕರಾದ ನಿಜಾಮುದ್ದೀನ್‌, ನಾಸೀರ್‌ ಹುಸೇನ್‌, ನವೀದ್‌ ಅಹ್ಮದ್‌, ವಾಸಿಂ, ಅರ್ಷಾದ್‌ ಖಾನ್‌, ಅಪ್ಸರ್‌ ಪಾಷಾ, ದಾದಾಪೀರ್‌, ಶಾದಾಬ್‌ ಅಹ್ಮದ್‌ ಖಾನ್‌, ಇಸ್ರಾರ್‌ ಅಹ್ಮದ್‌ ಖಾನ್‌, ಪುಸೈಲ್ ಅಹ್ಮದ್‌, ಮೊಹ್ಮದ್‌ ಇದ್ರೀಸ್‌, ಉಸ್ಮಾನ್‌ ಅಬ್ರೇಜ್‌, ಸೈಯದ್‌ ಮುಜಾಹಿದ್‌, ಪಿ.ಡಿ ಕುಮಾರ್‌, ಮಂಜುನಾಥ್‌, ಸನಾವುಲ್ಲಾ, ರವಿ ನರಲೆ, ಮೊಹ್ಮದ್‌ ಅನೀಫ್ ಅಪ್ಸರ್‌ ಅಜೀಜಿ, ಮೊಹ್ಮದ್‌ ಅಕ್ಬರ್‌ ಷರೀಫ್, ಇಕ್ಬಾಲ್ ಖಾನ್‌, ಇಸ್ತಿಯಾಕ್‌ ಅಹ್ಮದ್‌, ಕಲೀಮುಲ್ಲಾ ಜಮಾಲ್, ಐಎಂಎ ಹೆಲ್ತ್ ಕೇರ್‌, ಐಎಂಎ ಜ್ಯುವೆಲರಿ, ಐಎಂಎ ಕ್ರೆಡಿಟ್ ಕೋ ಆಪ ರೇಟಿವ್‌ ಸೊಸೈಟಿ ಸೇರಿದಂತೆ ಮತ್ತಿತರರನ್ನು ಆರೋಪಿಗಳನ್ನಾಗಿ ಪರಿಗಣಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next