Advertisement

ನಿನ್ನನ್ನೇ ಧ್ಯಾನಿಸುತ್ತ ನಿಂತಲ್ಲೇ ನಿಂತಿರುತ್ತಿದ್ದೆ…

09:05 AM May 22, 2019 | Team Udayavani |

ಗುಳಿಗೆನ್ನೆಯ ಗೆಳೆಯ,
ನಿನ್ನೊಳಗೆ ನಾನಿದ್ದೆ ಎಂದು ತಿಳಿಯಲೇ ಇಲ್ಲ, ನನಗಾದರೂ ಹೇಗೆ ಹೊಳೆದೀತು? ಬಸ್‌ ನಿಲ್ದಾಣದಲ್ಲಿ ನನಗಾಗಿ ಅರಸುವಾಗ, ನಾನು ಕಾಣಿಸುತ್ತಲೇ ಸಾವಿರ ವ್ಯಾಟ್‌ ದೀಪದಂತೆ ಬೆಳಗುತ್ತಿದ್ದ ನಿನ್ನ ಕಂಗಳ ಕಾಂತಿ ನನ್ನನ್ನೇಕೆ ಸೆಳೆಯಲಿಲ್ಲ? ಜನ ಸಂದಣಿಯಿದ್ದ ಬಸ್ಸಿನಲ್ಲಿ, ನೀ ಕುಳಿತ ಜಾಗವ, ನಿಂತಿದ್ದ ನನಗೆ ಬಿಟ್ಟಾಗ ನಿನ್ನ ಹೃದಯದಲ್ಲಿ ನನಗಾಗಿ ಕಾದಿರಿಸಿದ್ದ ಸಿಂಹಾಸನ ನನಗೇಕೆ ಗೋಚರಿಸಲಿಲ್ಲ? ನಿನ್ನ ಮಿತ ಭಾಷೆಯ ಹಿಂದೆ ಅವಿತು ಕಾತರಿಸುತ್ತಿದ್ದ ತುಂಟಮನ ನನಗೇಕೆ ಅರಿವಾಗಲಿಲ್ಲ?

Advertisement

ನನಗೆ ತಿಳಿದದ್ದು ಒಂದೇ ವಿಷಯ, ನೀನು ಅತ್ಯಂತ ಸಭ್ಯ ಹುಡುಗ ಅನ್ನೋದು. ತುರ್ತಿಗೆ ಇರಲಿ’ ಅಂತ ಅವತ್ತು ನಿನ್ನ ಮೊಬೈಲ್‌ ನಂಬರ್‌ ಕೊಟ್ಟಾಗಲೂ, ಅದನ್ನು ನಾನು ವಿಶೇಷವೆಂದು ಪರಿಗಣಿಸಲಿಲ್ಲ.

ನಿನ್ನಲ್ಲೂ ಸಾವಿರಾರು ಆಸೆ, ಕನವರಿಕೆ ಇದೆಯೆಂದು ತಿಳಿದದ್ದು, ನಿನ್ನೆ ನನ್ನ ಹುಟ್ಟುಹಬ್ಬದ ಆಮಂತ್ರಣ ಸಂದೇಶವನ್ನು ಉಳಿದವರಿಗೆ ಕಳುಹಿಸಿದಂತೆ ನಿನಗೂ ತಲುಪಿಸಿದಾಗ. ಅಬ್ಟಾ, ಪೌರ್ಣಮಿಯ ಅಲೆಯಂತೆ ಒಂದೇ ರಭಸದಲ್ಲಿ ನನಗೆ ಕರೆ ಮಾಡಿ ಪ್ರೀತಿಯ ಬಾಗಿಲು ತೆರೆದೆಯಲ್ಲೋ?

I am lucky! ನಿನ್ನೊಳಗೆ ಎಷ್ಟೊಂದು ಮೃದುಭಾವಗಳು, ನನ್ನ ಕುರಿತು! ಬೇಕಿಲ್ಲ ಬೇರೇನೂ…ನಿನ್ನೆ ಕರೆ ಮುಗಿಸುವಾಗ ಏನಂದೆ? ನಾನು ದೂರ ದೂರ ಹೋಗುತ್ತಿದ್ದೆ ಎಂದೇ?… ಇಲ್ಲ, ನೀನು ನನ್ನನ್ನು ಸಮೀಪಿಸಲು ಹೆಜ್ಜೆ ಮುಂದೆ ಇಟ್ಟೇ ಇರಲಿಲ್ಲ, ಅಲ್ಲವೆ?
-ರಾಜಿ,ಬೆಂಗಳೂರು

ಕೆ.ವಿ. ರಾಜಲಕ್ಷ್ಮಿ

Advertisement
Advertisement

Udayavani is now on Telegram. Click here to join our channel and stay updated with the latest news.

Next