Advertisement

Maharashtra; ಶಿಂಧೆ ಶಿವಸೇನೆ ನಾಯಕಿ ಸೈನಾ ‘ಇಂಪೋರ್ಟೆಡ್‌ ಮಾಲ್‌’: ಸಂಸದ ವಿವಾದ

12:14 AM Nov 02, 2024 | Team Udayavani |

ಮುಂಬಯಿ: ಶಿಂಧೆ ಬಣದ ಶಿವಸೇನೆ ನಾಯಕಿ ಶೈನಾ ಎನ್‌.ಸಿ.ರನ್ನು “ಇಂಪೋರ್ಟೆಡ್‌ ಮಾಲ್‌’ ಎಂದು ಉದ್ಧವ್‌ ಶಿವಸೇನೆ ಬಣದ ಸಂಸದ ಅರವಿಂದ್‌ ಸಾವಂತ್‌ ಟೀಕಿಸಿದ್ದಾರೆ. ಈ ಹೇಳಿಕೆ ಭಾರೀ ವಿವಾದ ಎಬ್ಬಿಸಿದೆ. ಜತೆಗೆ ಅವರ ವಿರುದ್ಧ ಶೈನಾ ಚುನಾವಣ ಆಯೋಗಕ್ಕೆ ದೂರು ನೀಡಿದ್ದಾರೆ.

Advertisement

ಬಿಜೆಪಿ ಮಾಜಿ ನಾಯಕಿ ಶೈನಾ, ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬಣದ ಶಿವಸೇನೆ ಬಣಕ್ಕೆ ಸೇರಿ ಮುಂಬಾದೇವಿ ಇಂದ ಸ್ಪರ್ಧಿಸಿದ್ದಾರೆ. ಈ ಬಗ್ಗೆ ಲೇವಡಿ ಮಾಡಿರುವ ಸಂಸದ ಅರವಿಂದ್‌ “ಶೈನಾ ಜೀವನ ಬಿಜೆಪಿಯಲ್ಲಿ ಕಳೆದರು ಈಗ ಶಿಂಧೆ ಬಣಕ್ಕೆ ಪಕ್ಷಾಂತರ ಆಗಿದ್ದಾರೆ. ಬೆಲೆ ಇರುವುದು ಒರಿಜಿನಲ್‌ಗೆ ಮಾತ್ರ ಎಂದಿದ್ದಾರೆ.

ಸಾವಂತ್ ಅವರ ಹೇಳಿಕೆ ವಿರುದ್ಧ ಶೈನಾ, ನಾಗ್ಪಾಡಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಶಿವಸೇನಾ (ಯುಬಿಟಿ) ನಾಯಕರ ಮೌನವನ್ನು ಪ್ರಶ್ನಿಸಿದ್ದಾರೆ.ಅರವಿಂದ್ ಸಾವಂತ್ ನನ್ನನ್ನು ಹಿಂದೆ ಪ್ರಚಾರಕ್ಕೆ ಕರೆದೊಯ್ದರು ಮತ್ತು ಈಗ ನಾನು ಆಮದು ಮಾಡಿದ ಮಾಲ್?” ಎಂದು ಪ್ರಶ್ನಿಸಿದ್ದಾರೆ. “ನಾನು ನಿಮ್ಮ ಮಾಲ್ ಅಲ್ಲ”ಎಂದು ಕಿಡಿ ಕಾರಿದ್ದಾರೆ.

ಶೈನಾ ಎನ್‌ಸಿ ಅವರ ದೂರಿನ ಆಧಾರದ ಮೇಲೆ, ಸಾವಂತ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 79 (ಮಹಿಳೆಯರ ನಮ್ರತೆಯನ್ನು ಆಕ್ರೋಶಗೊಳಿಸುವ ಸಂಬಂಧ) ಮತ್ತು 356 (2) (ವ್ಯಕ್ತಿಯನ್ನು ಮಾನಹಾನಿ ಮಾಡುವ ಸಂಬಂಧ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next