Advertisement

ನೀವು ದೂರ ತಳ್ಳಿದಷ್ಟೂ ನಾನು ಹತ್ರಾನೇ ಇರ್ತೀನಿ!

07:30 AM Apr 03, 2018 | |

ನಾನು ಬ್ಯಾಂಕ್‌ ಬ್ಯಾಲೆನ್ಸ್‌ ವಿಷಯದಲ್ಲಿ ಮಿಡ್ಲ್ ಕ್ಲಾಸ್‌ ಹುಡುಗ. ಆದರೆ, ಪ್ರೀತಿಯ ವಿಷಯಕ್ಕೆ ಬಂದರೆ ಸಿಕ್ಕಾಪಟ್ಟೆ ಶ್ರೀಮಂತ. ನೀವು ಪ್ರೀತಿಗೆ ಬೆಲೆ ಕೊಡ್ತೀರೋ ಅಥವಾ ದುಡ್ಡೇ ಮುಖ್ಯ ಅಂತೀರೋ… ಸಂಕೋಚ ಇಲೆª ಹೇಳಿºಡ್ರಿ…

Advertisement

ಹಾಯ್‌ ಫ್ರೆಂಡ್‌,
ಅಲ್ಲಾ ಕಣ್ರಿ, ನಾನು ಎಷ್ಟು ವಿನಯದಿಂದ ಕೇಳಿದ್ರೂ ನೀವು ನನ್‌ ಮಾತಿಗೆ ಬೆಲೆ ಕೊಡ್ಲಿಲ್ಲ ಅಲ್ವಾ? ಸರಿ ಬಿಡಿ. ನನ್‌ ಸ್ನೇಹ ಮಾಡೋದು ನಿಮ್ಗೆ ಇಷ್ಟ ಇಲ್ಲ ಅನ್ಸುತ್ತೆ. ಆ ದೇವ್ರಿಗೂ ನನ್‌ ಮೇಲೆ ಹೊಟ್ಟೆಕಿಚ್ಚು ಇಬೇìಕು. ನನ್‌ ಮಾತನ್ನ ನೀವು ಅದ್ಯಾವಾಗ ಸೀರಿಯಸ್‌ ಆಗಿ ತಗೊಳ್ತೀರೋ ಗೊತ್ತಿಲ್ಲ. ನಿಮ್ಗೆ ಯಾಕೆ ನನ್‌ ಮೇಲೆ ಅಷ್ಟು ಸಿಟ್ಟು ಅಂತಾನೂ ಗೊತ್ತಾಗ್ತಿಲ್ಲ. ನನ್ನದೇನಾದ್ರೂ ತಪ್ಪಿದ್ರೆ ನೇರಾನೇರ ಹೇಳ್ಬಿಡಿ. ಅದು ಬಿಟ್ಟು ಯಾಕೆ ಈ ಥರ ಮನಸ್ಸಿಗೆ ನೋವು ಮಾಡ್ತೀರಾ? 

ಫೇಸ್‌ಬುಕ್‌ನಲ್ಲಿ ರಿಕ್ವೆಸ್ಟ್‌ ಕಳ್ಸಿದ್ರೆ ಆಕ್ಸೆಪ್ಟ್ ಮಾಡ್ಲಿಲ್ಲ. ನೀವು ರಿಕ್ವೆಸ್ಟ್‌ ಅಕ್ಸೆಪ್ಟ್ ಮಾಡ್ತೀರಾ ಅಂತ ಎಷ್ಟು ಖುಷಿಯಾಗಿದ್ದೆ ಗೊತ್ತಾ? ಅಲ್ಲ, ನಿಮ್ಮ ಮನ್ಸು ಯಾವಾಗ ಹೆಂಗೆ ಅಂತ ಗೊತ್ತೇ ಆಗಲ್ಲ ಕಣ್ರಿ. ನೀವೇ ಮುಂದಾಗಿ ಒಂದ್ಸಲ ಮೆಸೇಜ್‌ ಮಾಡ್ತೀರ, ಆಮೇಲೆ ಇದ್ದಕ್ಕಿದ್ದಂಗೆ ಸೈಲೆಂಟ್‌ ಆಗಿಬಿಡ್ತೀರ. ಆಮೇಲೆ ನಿಮ್ಗೆ ಜಪ್ಪಯ್ಯ ಅಂದ್ರೂ ನನ್ನ ನೆನಪಾಗಲ್ಲ! ಒಂದು ತಿಳ್ಕೊಳಿ, ನೀವು ಎಷ್ಟೇ ನನ್ನಿಂದ ದೂರ ಆಗೋಕೆ ಟ್ರೆ„ ಮಾಡಿದ್ರೂ ನಾನು ನಿಮ್‌ ಹತ್ತಿರಾನೇ ಇರ್ತೀನಿ. ಹೆಚ್ಚೆಂದರೆ ನೀವು ನನ್ನ ಬ್ಲಾಕ್‌ ಮಾಡೊದು. ಬಟ್‌ ನನ್‌ ಮನಸ್ಸಿನಿಂದ ನಿಮ್ಮನ್ನ ಡಿಲೀಟ್‌ ಮಾಡೋಕೆ ಯಾರಿಂದಲೂ ಸಾಧ್ಯ ಇಲ್ಲ. 

ಓಹ್‌! ನೀವು ಸ್ಟೇಟಸ್‌ ಏನಾದ್ರೂ ಲೆಕ್ಕ ಹಾಕ್ತಿದ್ದೀರಾ? ಹೌದು ಫ್ರೆಂಡ್‌, ನಾನು ನಿಮ್ಮಷ್ಟು ಶ್ರೀಮಂತ ಹಿನ್ನೆಲೆಯಿಂದ ಬಂದವನಲ್ಲ. ಆದ್ರೆ ನಿಜ ಹೇಳ್ತಿನಿ ಕೇಳಿ. ಹಣ ನೋಡಿ ಬರೋ ಸ್ನೇಹ ಯಾವತ್ತೂ ಕೊನೆಯವರೆಗೆ ಉಳಿದಿರೋ ಉದಾಹರಣೆಯೇ ಇಲ್ಲ ಈ ದುನಿಯಾದಲ್ಲಿ. ಯಾವತ್ತೋ ಒಂದು ದಿನ ತಿಳಿದೋ, ತಿಳಿಯದೆಯೋ ಮಾಡಿದ ತಪ್ಪಿಗೆ ಈ ಪರಿ ದ್ವೇಷ ಸಾದ್ಸೋದು ಯಾವ ನ್ಯಾಯ? 
ಮತ್ತೆ ನಿಮ್ಮವನೇ

ಪುರು

Advertisement
Advertisement

Udayavani is now on Telegram. Click here to join our channel and stay updated with the latest news.

Next