Advertisement

ಲಾಬಿ ಮಾಡುವ ಜಾಯಮಾನ ನನ್ನದಲ್ಲ

12:48 PM Apr 20, 2018 | |

ನಂಜನಗೂಡು: ಟಿಕೆಟ್‌ಗಾಗಿ ಲಾಬಿ ಮಾಡುವ ಜಾಯಮಾನ ತಮ್ಮದಲ್ಲ, ತಾವು ಪಕ್ಷದ ಟಿಕೆಟ್‌ಗಾಗಿ ಯಾರಿಗೂ ಶಿಫಾರಸು ಮಾಡಿಲ್ಲವೆಂದು ಮಾಜಿ ಸಚಿವ ಶ್ರೀನಿವಾಸ್‌ ಪ್ರಸಾದ್‌ ಹೇಳಿದರು. ತಾಲೂಕು ಬಿಜೆಪಿ ಹಮ್ಮಿಕೊಂಡಿದ್ದ 2018ರ ಚುನಾವಣಾ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.

Advertisement

ತನ್ನನ್ನೆಚುನಾವಣೆಗೆ ನಿಲ್ಲಲು ಒತ್ತಾಯಿಸಿದರೂ ನಾನು ನಿರಾಕರಿಸಿದೆ. 2013ರ ಚುನಾವಣೆಯಲ್ಲೇ ನಾನು ಈ ನಿರ್ಧಾರ  ತೆಗೆದುಕೊಂಡಿದ್ದು ಅದಕ್ಕೆ ಬದ್ಧನಾಗಿರುವೆ. ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡುವ ಜವಾಬ್ದಾರಿ ಮಾತ್ರ ತಮ್ಮದು ಎಂದು ಹೇಳಿದ್ದೇನೆ. ಟಿಕೆಟ್‌ ಅಥವಾ ಹುದ್ದೆಗಾಗಿ ಲಾಬಿ ಮಾಡುವ ಜಾಯಮಾನ ತಮ್ಮದಲ್ಲ ಎಂದು ಹೇಳಿದರು. 

ಪಕ್ಷ ನಿರ್ಧಾರ: ವಿವಿಧ ಕೋನಗಳಿಂದ ಸರ್ವೆ ನಡೆಸಿ ಪಕ್ಷದ ಅಭ್ಯರ್ಥಿಗಳನ್ನು ಎಲ್ಲಡೆ ಕಣಕ್ಕಿಳಿಸಿದೆ. ತಪ್ಪು ಗೃಹಿಕೆಯಿಂದ ತಮ್ಮ ಮೇಲೆ ಆರೋಪಿಸುತ್ತಿದ್ದಾರೆ. ಅಳಿಯನಿಗೆ ಟಿಕೆಟ್‌ ನೀಡಿ ಎಂದು ತಾವು ಯಾರಲ್ಲಿಯೂ ಕೇಳಿಲ್ಲ. ಇಲ್ಲಿ ಹೆಚ್ಚಿನ ಆಕಾಂಕ್ಷಿಗಳೂ ಇರಲಿಲ್ಲ ಎಂದು ಮೇಲಿನ ಆರೋಪಗಳನ್ನು ತಳ್ಳಿಹಾಕಿದರು. ನಂಜನಗೂಡು ಅತ್ಯಂತ ಸೂಕ್ಮವಾದ ಕ್ಷೇತ್ರವಾಗಿದ್ದು, ತಮ್ಮ ಅಧಿಕಾರದ ಅವಧಿಯುದ್ದಕ್ಕೂ ತಾವು ಇಲ್ಲಿನ ಶಾಂತಿ ನೆಮ್ಮದಿ ಕದಡದಂತೆ ನೋಡಿಕೊಂಡ ತೃಪ್ತಿ ತಮ್ಮದಾಗಿದೆ ಎಂದರು. 

ಉಪಚುನಾವಣೆ ಸೋಲಿನ ಬಗ್ಗೆ ಮಾತನಾಡಿದ ಶ್ರೀನಿವಾಸ್‌ ಪ್ರಸಾದ್‌, ಪೊಲೀಸ್‌ ಅಧಿಕಾರಿಗಳ ವಾಹನದಲ್ಲಿ ಆಡಳಿತ ಪಕ್ಷ ಹಣ ಸಾಗಿಸಿತು. ಚುನಾವಣಾ ಸಿಬ್ಬಂದಿ ಕೆಂಪಯ್ಯನವರ ಅಧಿಕಾರದ ಬ್ರಿಗೇಡ್‌ ಮುಂದೆ ಮೂಕ ಪ್ರೇಕ್ಷಕಾಗಿದ್ದರಿಂದ ಇಲ್ಲಿ ಪಕ್ಷ ಸೋಲು ಕಾಣುವಂತಾಯಿತು ಎಂದು ತಮ್ಮ ಸೊಲಿನ ವಿಷೆÉàಷಣೆ ಮಾಡಿದರು. 

ಮನೆ ಮನಗೆ ಕಾಂಗ್ರೆಸ್‌ ಎಂದರೆ ಇಲ್ಲಿನ ಸಂಸದರ ಪಾಲಿಗೆ ಪ್ರತಿ ಮನೆಗೆ ಹಣ ತಲುಪಿಸು ಎಂದೇ ಅರ್ಥ ಎಂದ ಶ್ರೀನಿವಾಸ್‌ ಪ್ರಸಾದ್‌, ಚುನಾವಣೆಯಲ್ಲಿ ಹಣ ವಿತರಿಸಲು ಇಲ್ಲಿನ ಸಂಸದರು ಅತ್ಯಂತ ಸಮರ್ಥರು ಎನ್ನುತ್ತ ಧ್ರುವನಾರಾಯಣರ ಹೆಸರೇಳದೆ ಕಟುಕಿದರು.

Advertisement

ಬಿಜೆಪಿ ಬಲಾಡ್ಯ: ಮಿನಿ ವಿಧಾನಸೌಧ, ಬಸ್‌ ನಿಲ್ದಾಣ, ಬಹುಕೋಟಿ ವೆಚ್ಚದ 124 ಗ್ರಾಮಗಳ ಕುಡಿಯುವ ನೀರು, ಪದವಿ ಕಾಲೇಜುಗಳಿಗೆ ಯಾರು ಕಾರಣ ಎಂದು ಪ್ರಶ್ನಿಸಿದ ಅವರು, ಇಲ್ಲಿ ಬಿಜೆಪಿ ಅತ್ಯಂತ ಬಲಾಡ್ಯವಾಗಿದೆ. ನಾವೆಲ್ಲ ಸೇರಿ ಇಲ್ಲಿ ಕಮಲ ಅರಳಿಸಿ ಇತಿಹಾಸ ಸೃಸ್ಟಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು. 

ಸಮೀಕ್ಷೆ ಮಾಡಿಯೇ ಟಿಕೆಟ್‌: ಬಿಜೆಪಿ ಅಭ್ಯರ್ಥಿ ಹರ್ಷವರ್ಧನ ಮಾತನಾಡಿ, ತಾವು ಯಾರದೇ ಲಾಬಿಯಿಂದ ಅಭ್ಯರ್ಥಿಯಾಗಿಲ್ಲ. ಪಕ್ಷ ತನ್ನದೇ ಆದ ಕೋನಗಳಿಂದ ಎಲ್ಲಾ ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಿದೆ. ಅಭ್ಯರ್ಥಿಗಳ ಪಕ್ಷ ಸಂಘಟನೆ, ಕಾರ್ಯವೈಖರಿ ಗುರುತಿಸಿಯೇ ತಮ್ಮನ್ನು ಆಯ್ಕೆ ಮಾಡಿದೆ. ಇಲ್ಲಿನ ಶಾಸಕರ ಒಂದು ವರ್ಷದ ಆಡಳಿತ ವೈಖರಿಯನ್ನು ಕಾಣಲು ಪಟ್ಟಣದ ರಾಷ್ಟ್ರಪತಿ ರಸ್ತೆಯೊಂದೇ ಸಾಕು. ನಂಜನಗೂಡು ಜನತೆಯ ಸೇವೆ ಮಾಡಲು ಕಂಕಣ ಬದ್ಧನಾಗಿರುವೆ.ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಜಿಪಂ ಸದಸ್ಯೆ ಮಂಗಳ, ಮಾಜಿ ಸದಸ್ಯ ಚಿಕ್ಕರಂಗನಾಯಕ, ಎಸ್‌.ಕೆಂಪಣ್ಣ, ಎನ್‌.ಸಿ.ಬಸವಣ್ಣ, ಸೋಮಣ್ಣ, ಸಿದ್ದರಾಜು, ಮಮತಾ, ತಾಲೂಕು ಬಿಜೆಪಿ ಅಧ್ಯಕ್ಷ ಕೆಂಡಗಣ್ಣಪ್ಪ, ಪಕ್ಷದ ಮುಖಂಡರಾದ ಕುಂಬರಳ್ಳಿ ಸುಬ್ಬಣ್ಣ, ಆನಂದ, ಸುಧಾ, ಮಹೇಶ, ನಿಯಾಜ್‌ ಅಹಮದ್‌, ವಿನಯ ಕುಮಾರ್‌, ಪ್ರೇಮಾ, ಬಸವರಾಜು, ಪದ್ಮನಾಭರಾವ್‌, ಡಾ.ಶೈಲಾ, ದೊರೆಸ್ವಾಮಿ, ಮಹದೇವಸ್ವಾಮಿ ಇತರರಿದ್ದರು. ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಬಿಜೆಪಿ ಸೇರಿದರು. 

Advertisement

Udayavani is now on Telegram. Click here to join our channel and stay updated with the latest news.

Next