Advertisement
ಉಪ ಚುನಾವಣೆ ನಂತರದ ಪ್ರಥಮ ಹೃದಯ ಸ್ಪರ್ಷಿ ಸಭೆ ನಡೆದಿದೆ ಎಂದ ಅವರು, ಹೆಚ್ಚನ ಮತದಾರರು ಸ್ವಾಭಿಮಾನವನ್ನು ಬದಿಗೊತ್ತಿ ಸಿದ್ದರಾಮಯ್ಯನವರ ಹಣಕ್ಕೆ ಪ್ರಾಧಾನ್ಯತೆ ನೀಡಿದರು. ಆದರೆ, ಹಣ ತಿರಸ್ಕರಿಸಿ ತಮಗೆ ಮತ ನೀಡಿದ 65 ಸಾವಿರ ಜನತೆಗೆ ತಾವು ಅತ್ಯಂತ ಋಣಿಯಾಗಿರುವುದಾಗಿ ಹೇಳಿದರು.
Related Articles
Advertisement
ಹಣ ಹಂಚುವ ಲೋಕಸಭಾ ಸದಸ್ಯರು ಎಂದು ಟೀಕಿಸಿದ ಅವರು ಚುನಾವಣೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಹಣ ಹಂಚುವ ಸಾಮರ್ಥ್ಯ ನಮ್ಮ ಸಂಸರಿಗಲ್ಲದೆ ಇನ್ಯಾರಿಗಿದೆ ಎಂದು ಸಂಸದ ಧ್ರುವನಾರಾಯಣರ ಹೆಸರೇಳದೆ ತರಾಟೆಗೆ ತೆಗೆದುಕೊಂಡರು.
ತಮ್ಮನ್ನು ಸೋಲಿಸುವ ಭರದಲ್ಲಿ ಸಮಾಜದ ನಾಯಕರೆಲ್ಲಾ ಒಂದಾಗಿ ದಲಿತರ ಸ್ವಾಭಿಮಾನವನ್ನೇ ಹೊಸಕಿ ಹಾಕಿದ ಖರ್ಗೆ, ಪರಮೇಶ್ವರ ಸೇರಿದಂತೆ ದಲಿತ ನಾಯಕರುಗಳು ಎಂದ ಪ್ರಸಾದ ತಾವೇನು ಮಾಡುತ್ತಿದ್ದೇವೆ ಎಂದು ಯೋಚಿಸದೆ ಸಮುದಾಯವನ್ನೇ ಬಲಿಕೊಟ್ಟರೆಂದರು.
ಸಭೆ ಆಯೋಜಕ ದಯಾನಂದಮೂರ್ತಿ ಮಾತನಾಡಿದರು. ಜಿಪಂ ಸದಸ್ಯ ಸದಾನಂದ, ಮುಖಂಡರಾದ ಕುಂಬರಳ್ಳಿ ಸುಬ್ಬಣ್ಣ, ಹರ್ಷವರ್ಧನ, ಕೃಷ್ಣರಾಜಪುರದ ಸಿದ್ದಪ್ಪ, ಬಸವರಾಜು, ರಾಜಶೇಖರಮೂರ್ತಿ, ಸುರೇಶ, ಬಸವಣ್ಣ, ಶೇಖರ ಸೇರಿ 500ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರಿದ್ದರು.
ನನ್ನ ಪುಸ್ತಕದಲ್ಲಿ 2 ಭಾಗಗಳಿವೆ. ಬೂಸಾ ಚಳವಳಿಯಿಂದ ಉಪ ಚುನಾವಣೆವರೆಗಿನ ವಿಷಯಗಳಿವೆ. ಅಲ್ಲದೆ, ನಂಜನಗೂಡು ಉಪಚುನಾವಣೆಯಲ್ಲಿ ಸಮಾಜವಾದಿ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ನಾಯಕರು ನಡೆದುಕೊಂಡ ವಿವರಗಳನ್ನೂ ದಾಖಲಿಸಿ ಅವರ ಮುಖವಾಡವನ್ನು ಬಹಿರಂಗಪಡಿಸುವೆ. ಒಂದು ಭಾಗ ಈಗಾಗಲೆ ಮುದ್ರಣಕ್ಕೆ ಹೋಗಿದ್ದು ಇನ್ನೋಂದು ಭಾಗ ಕೆಲವೇ ದಿನಗಳಲ್ಲಿ ಮುದ್ರಣವಾಗಲಿದೆ.-ಶ್ರೀನಿವಾಸ ಪ್ರಸಾದ, ಬಿಜೆಪಿ ಮುಖಂಡ