Advertisement

ತಗೋಳೆ ತಗೋಳೇ,ನನ್ನೇ ತಗೋಳೇ!

09:07 AM May 22, 2019 | Sriram |

ಈ ಜಗತ್ತಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ಮನಃಸ್ಥಿತಿ. ಹಾಗಾಗಿ, ಪ್ರತಿಯೊಬ್ಬರೂ ತಮ್ಮ ಅರಿವಿಗೆ ಬಂದಿದ್ದನ್ನಷ್ಟೇ ವಿದ್ಯಾರ್ಥಿಗಳ ಮುಂದಿಡುತ್ತಾರೆ ಮತ್ತು ಹೇರುತ್ತಾರೆ. ಹಣ ಕೊಡುವ ಓದು ಮೇಲು, ಬೇಗ ಜೀವನವನ್ನು ಸೆಟ್ಲು ಮಾಡುವ ಓದು ಶ್ರೇಷ್ಠ ಎನ್ನುವ ಫೀಲ್‌ ಹುಟ್ಟಿಸುತ್ತಾರೆ…

Advertisement

ಈಗೀಗ ವಿಚಿತ್ರ ನಂಬಿಕೆಯೊಂದು ವಿದ್ಯಾರ್ಥಿಗಳ ನಿದ್ದೆಗೆಡಿಸುತ್ತಿದೆ. ಸೈನ್ಸ್‌ ಹೆಚ್ಚು ಆರ್ಟ್ಸ್ ಕಡಿಮೆ ಅನ್ನೋ ಮೆಂಟಾಲಿಟಿಯವರ ಟಾರ್ಚರ್‌ ಅದು. “ಸೈನ್ಸ್‌ ಬುದ್ಧಿವಂತರಿಗೆ, ಆರ್ಟ್ಸ್ ದಡ್ಡರಿಗೆ’  ಅನ್ನೋ ಒಂದು ಅಲಿಖೀತ ಸಂವಿಧಾನವನ್ನು ಬರೆದು, ಅದನ್ನು ಮಕ್ಕಳ ಮೇಲೆ ಹೇರುತ್ತಲೇ ಇರುತ್ತಾರೆ. ಮಕ್ಕಳು ಗಲಿಬಿಲಿಗೊಳ್ಳುತ್ತಾರೆ. ಆಗ ವಿದ್ಯಾರ್ಥಿ, “ಅಯ್ಯೋ! ಮುಂದೇನು?’ ಎಂದು ತಲೆಮೇಲೆ ಕೈಹೊತ್ತು ಕೂರುತ್ತಾನೆ. ಕವಲು ದಾರಿಯಲ್ಲಿ ನಿಂತು ಕಣ್‌ ಕಣ್‌ ಬಿಡುತ್ತಾನೆ. ತೊಂಭತ್ತರಷ್ಟು ಅಂಕ ಪಡೆದವನಿಗೆ ಸಾಹಿತ್ಯ ಓದುವ ಆಸೆ ಇದ್ದರೂ ಎಳೆದುಕೊಂಡು ಹೋಗಿ ಲ್ಯಾಬಿನೊಳಗೆ ನೂಕುವುದು ಈಗಿನ ಜಮಾನ.

ಸೈನ್ಸ್‌ಗೆ ಭಾವರಸಗಳಿಲ್ವೇ?
ಮತ್ತೆ ಕೆಲವರಿದ್ದಾರೆ, “ಲ್ಯಾಬ್‌ನಿಂದ ಬರುವ ಕೆಟ್ಟ ವಾಸನೆಯೇ ಸೈನ್ಸು’, “ರಸಭಾವಗಳು ಇಲ್ಲದ್ದು. ಅದೆಂಥ ಓದು’ ಎನ್ನುವ ಕೀಳು ಭಾವದ ವ್ಯಾಖ್ಯಾನ ಅವರದ್ದು. ಈ ಜಗತ್ತಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ಮನಃಸ್ಥಿತಿ. ಹಾಗಾಗಿ, ಪ್ರತಿಯೊಬ್ಬರೂ ತಮ್ಮ ಅರಿವಿಗೆ ಬಂದಿದ್ದನ್ನಷ್ಟೇ ವಿದ್ಯಾರ್ಥಿಗಳ ಮುಂದಿಡುತ್ತಾರೆ ಮತ್ತು ಹೇರುತ್ತಾರೆ. ಹಣ ಕೊಡುವ ಓದು ಮೇಲು, ಬೇಗ ಜೀವನವನ್ನು ಸೆಟ್ಲು ಮಾಡುವ ಓದು ಶ್ರೇಷ್ಠ ಎನ್ನುವ ಫೀಲ್‌ ಹುಟ್ಟಿಸುತ್ತಾರೆ. ಅದು ನಿಜಕ್ಕೂ ತಪ್ಪು. ಕೋರ್ಸಿನ ಶ್ರೇಷ್ಠತೆ ಅದು ಕೊಡುವ ಕೆಲಸದಲ್ಲಿ ಇಲ್ಲ, ತರುವ ಹಣದಲ್ಲೂ ಇಲ್ಲ. ಅದನ್ನು ಬದುಕಿಗೆ ಒಗ್ಗಿಸಿಕೊಳ್ಳುವುದರಲ್ಲಿದೆ. ಶಿಕ್ಷಣವೆಂದರೆ, ಹಣವಲ್ಲ ಬದುಕು.

ಆರ್ಟ್ಸ್ ? ಸೈನ್ಸೋ..?
ಆ ವಿಚಾರವನ್ನು ವಿದ್ಯಾರ್ಥಿಗಳಿಗೆ ಬಿಟ್ಟುಬಿಡಿ. ವಿದ್ಯಾರ್ಥಿಯ ಮುಂದಿನ ಆಸಕ್ತಿ, ಗುರಿಗಳೇನು ಅನ್ನೋದು ಆತನಿಗಲ್ಲದೇ, ಬೇರಾರಿಗೂ ತಿಳಿಯೋದಿಲ್ಲ. ಎರಡರಲ್ಲೂ ಬದುಕಿದೆ. ಸೈನ್ಸ್‌ ತೆಗೆದುಕೊಂಡು, ಮೂವತ್ತು ಮಾರ್ಕ್‌ ಪಡೆದು ಪಾಸಾದರೆ, ಯಾರೂ ಕರೆದು ಕೆಲಸ ಕೊಡೋದಿಲ್ಲ. ಯಾವುದು ಓದಿ¤ದೀನಿ ಅನ್ನುವುದಕ್ಕಿಂತ ಹೇಗೆ ಓದಿ¤ದೀನಿ ಅನ್ನೋದೂ ಮುಖ್ಯವಾಗುತ್ತೆ. ಹಾಗಂತ, ಆರ್ಟ್ಸ್ ತೆಗೆದುಕೊಂಡವನು, ಕೈಲಾಗದವರೂ ಅಲ್ಲ. ಬದುಕಿಗೆ ಎರಡೂ ಬೇಕು. ಇವೆರಡು ಬದುಕಿನ ನಾಣ್ಯದ ಎರಡು ಮುಖಗಳು.

ಆರ್ಟ್ಸ್ ಸೊಗಸಾದ ಚಿತ್ರಗಳನ್ನು ರೂಪಿಸಿದರೆ, ಮಂದ ದೃಷ್ಟಿಯವರಿಗೆ ಅದು ಚೆನ್ನಾಗಿ ಕಾಣಿಸುವಂತೆ ಸೈನ್ಸ್‌ ಕನ್ನಡಕ ರೂಪಿಸುತ್ತದೆ. ಆರ್ಟ್ಸ್ ಒಂದೊಳ್ಳೆ ಸಿನಿಮಾವನ್ನು ಮಾಡಿದರೆ, ಸೈನ್ಸ್‌ ಮಾಡಿದ ಟಿವಿಯಲ್ಲಿ ಅದನ್ನು ನೋಡಿ, ಶಿಳ್ಳೆ ಹೊಡೆಯುತ್ತೇವೆ. ಆರ್ಟ್ಸ್ ಒಂದು ಹಾಡನ್ನು ಕಟ್ಟಿದರೆ, ಸೈನ್ಸ್‌ ರೂಪಿಸಿದ ಮೊಬೈಲಿಂದ, ಇಯರ್‌ಫೋನ್‌ನಿಂದ ಅದನ್ನು ಕೇಳಿ ಎಂಜಾಯ್‌ ಮಾಡುತ್ತೇವೆ. ಈಗ ಹೇಳಿ ಯಾವುದು ಹೆಚ್ಚು? ಆಟೊÕàì, ಸೈನ್ಸೋ?

Advertisement

ಸೈನ್ಸ್‌ ಓದಿಗೆ ಹೆಚ್ಚು ವ್ಯಾಪಕತೆ ಇದೆ ಎಂದು ಬಿಂಬಿಸಲಾಗುತ್ತಿದೆ. ಆರ್ಟ್ಸ್ ಓದು ವ್ಯರ್ಥವೆಂದು ಸಾರಲಾಗುತ್ತಿದೆ. ಎಲ್ಲವೂ ಬರೀ ಬೊಗಳೆ. ಪ್ರತಿಯೊಂದಕ್ಕೂ ಅದರದೇ ಆದ ವಿಶಿಷ್ಟತೆ ಇದೆ. ಅದನ್ನು ಬಳಸಿಕೊಂಡು ಬೆಳೆಯುವ ಚಾಕಚಕ್ಯತೆ, ಆಸಕ್ತಿ ನಮ್ಮಲ್ಲಿ ಇರಬೇಕಷ್ಟೇ!

ವಿದ್ಯಾರ್ಥಿಯೇ ಅಂತಿಮ
ಎಸ್ಸೆಸ್ಸೆಲ್ಸಿಯಲ್ಲಿ ನಲವತ್ತು ಪರ್ಸೆಂಟು ತೆಗೆದುಕೊಂಡವನಿಗೆ ಡಾಕ್ಟರ್‌ ಆಗುವ ಯೋಗ್ಯತೆ ಇಲ್ಲ ಅನ್ನೋದು ಸರಿಯಲ್ಲ. ಆ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳಿಗಿಂತ ಅವುಗಳನ್ನು ಹೊರತುಪಡಿಸಿ ಅವನಿಗೆ ಹೆಚ್ಚು ತಿಳಿದಿರಬಹುದು. ಯಾವುದು ಓದಬೇಕು ಅನ್ನೋದಕ್ಕೆ ಮಾರ್ಕ್‌ ಮಾತ್ರವೇ ಮುಖ್ಯ ಆಗಿರುವುದಿಲ್ಲ. ವಿದ್ಯಾರ್ಥಿಯ ಆಸಕ್ತಿಯೂ ಮುಖ್ಯ. ಅವನ ಸಾಮರ್ಥ್ಯವೂ ಅಷ್ಟೇ ಮುಖ್ಯ. ನೀವು ಬೇಕಾದರೆ ಪಕ್ಕದಲ್ಲಿ ಕುಳಿತು, ಆ ಕೋರ್ಸುಗಳ ಸಾಧಕ  ಬಾಧಕಗಳ ಬಗ್ಗೆ ಸಲಹೆ ನೀಡಬಹುದಷ್ಟೇ. ಹೆಚ್ಚೆಂದರೆ, ಆಯ್ಕೆಗಳನ್ನು ಮುಂದಿಡಬಹುದಷ್ಟೇ. ವಿದ್ಯಾರ್ಥಿ ತನಗೆ ಬೇಕಾಗಿರೋದನ್ನು ಆರಿಸಿಕೊಳ್ಳಲಿ.

ಆರ್ಟ್ಸ್ ಓದಿದವ ಬದುಕಿದ್ದ…
ಒಂದಾನೊಂದು ಕಾಡಿನಲ್ಲಿ ಇಬ್ಬರು ಗೆಳೆಯರು ನಡೆದು ಹೋಗುತ್ತಿದ್ದರು. ಒಬ್ಬ ಸೈನ್ಸ್‌ ಓದಿಕೊಂಡವ, ಇನ್ನೊಬ್ಬ ಆರ್ಟ್ಸ್. ಆ ದಾರಿಯಲ್ಲಿ ಸತ್ತ ಹುಲಿಯೊಂದರ ಅಸ್ತಿಪಂಜರ ಕಾಣುÕತ್ತೆ. ಸೈನ್ಸ್‌ ಓದಿದವನು “ಇದು ಹುಲಿ, ಅದರ ಎಲ್ಲ ಮೊಳೆಗಳನ್ನೂ ಜೋಡಿಸಿ ಅದಕ್ಕೆ ಪ್ರಾಣ ಕೊಡೋದು ಗೊತ್ತು. ಅದನ್ನು ಸೈನ್ಸ್‌ ನನಗೆ ಕಲಿಸಿದೆ’ ಅಂದ. ಆರ್ಟ್ಸ್ ಹುಡುಗನಿಗೆ, ಹುಲಿಯ ಕತೆಗಳು ಗೊತ್ತಿದ್ದವು. ಅದರ ಆಕ್ರಮಣದ ಬಗ್ಗೆ ನಾನಾ ಕತೆಗಳನ್ನು ಓದಿದ್ದ. ಅವನ ಮಾತು ಕೇಳದೇ, ಸೈನ್ಸ್‌ ಓದಿದವ ಹುಲಿಗೆ ಪ್ರಾಣಬರಿಸಿದ! ಎದ್ದು ಬಂದ ಹುಲಿ, ಅವನನ್ನು ತಿಂದು ಹಾಕಿತು! ಆರ್ಟ್ಸ್ ಹುಡುಗ ಬದುಕಿದ್ದ!

– ಸದಾಶಿವ್‌ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next