Advertisement

ನನಗೂ ಸಿಎಂ ಆಗುವ ಕನಸಿದೆ: ಎಂ.ಬಿ. ಪಾಟೀಲ

06:00 AM Nov 02, 2017 | Team Udayavani |

ವಿಜಯಪುರ: “ರಾಜಕೀಯದಲ್ಲಿ ಸಂಸದ, ಶಾಸಕ, ಸಚಿವ ನಾಗಿರುವ ನಾನು ಭವಿಷ್ಯದಲ್ಲಿ ಸಿಎಂ ಆಗುವ ಕನಸು ಹೊಂದಿ ದ್ದೇನೆ’ ಎಂದು ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ.ಪಾಟೀಲ ಮನದಾಳದ ಮಾತು ಹೊರ ಹಾಕಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಲಿದ್ದಾರೆ. ಅವರ ಬಳಿಕ ಸಿಎಂ ಆಗುವ ಸರದಿ ನನ್ನದೇ ಎಂದಿದ್ದಾರೆ. ಸಿಎಂ ಆಗುವ ಹಂಬಲ ಹೊಂದಿರುವುದು ದುರಾಸೆಯಲ್ಲ. ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ರಾಜಕೀಯ ಅ ಧಿಕಾರದ ಹಂಬಲ ಇರುವಂತೆ ನನಗೂ ಇದ್ದು, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು

Advertisement

Udayavani is now on Telegram. Click here to join our channel and stay updated with the latest news.

Next