ವಾಷಿಂಗ್ಟನ್: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್ ಬುಕ್, ಯೂಟ್ಯೂಬ್ ಖಾತೆಗೆ ಮರು ಪ್ರವೇಶ ಮಾಡಿದ್ದಾರೆ. 2 ವರ್ಷದ ಬಳಿಕ ಮತ್ತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.
ಶುಕ್ರವಾರ ಟ್ರಂಪ್ ಫೇಸ್ ಬುಕ್, ಯೂಟ್ಯೂಬ್‌ನಲ್ಲಿ “ಐ ಆಮ್ ಬ್ಯಾಕ್” (“I’M BACK!”.) ಎಂದು ಫೋಸ್ಟ್ ವೊಂದನ್ನು ಹಾಕಿದ್ದಾರೆ. ಇನ್ನು ಯೂಟ್ಯೂಬ್ ನಲ್ಲಿ 2016 ರ ಚುನಾವಣೆ ಗೆದ್ದ ಬಳಿಕ ಕೊಟ್ಟ ವಿಕ್ಟರಿ ಭಾಷಣದ 12 ಸಕೆಂಡ್ ಕ್ಲಿಪಿಂಗ್ ನ್ನು ಹಾಕಿದ್ದಾರೆ.
76 ವರ್ಷದ ಟ್ರಂಪ್ ತಮ್ಮ ಫೇಸ್ ಬುಕ್ ನಲ್ಲಿ 34 ಮಿಲಿಯನ್ ಫಾಲೋವರ್ಸ್ ನ್ನು ಹೊಂದಿದ್ದಾರೆ. ಯೂಟ್ಯೂಬ್ ನಲ್ಲಿ 2.67 ಮಿಲಿಯನ್ ಗೂ ಹೆಚ್ಚಿನ ಸಬ್ ಸ್ಕ್ರೈಬರ್ಸ್ ನ್ನು ಹೊಂದಿದ್ದಾರೆ.
ಜನವರಿ 21, 2021 ರಂದು ಅಮೆರಿಕಾದ ಸಂಸತ್ ಕಾಂಗ್ರೆಸ್ ಮೇಲೆ ಟ್ರಂಪ್ ಬೆಂಬಲಿಗರು ದಾಳಿ ನಡೆಸಿದ್ದರು. ಇದನ್ನು ಟ್ರಂಪ್ ಬೆಂಬಲಿಸಿ, ಪ್ರಚೋದನೆ ನೀಡಿದ್ದರು. ಈ ಕಾರಣದಿಂದ ಅವರು ಫೇಸ್ ಬುಕ್ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಅವರ ಖಾತೆಯ ಮೇಲೆ ನಿರ್ಬಂಧ ಹೇರಲಾಗಿತ್ತು.
ಕಳೆದ ನವೆಂಬರ್ ನಲ್ಲಿ ಎಲಾನ್ ಮಸ್ಕ್ ಟ್ರಂಪ್ ಅವರ ಟ್ವಿಟರ್ ಖಾತೆ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿದ್ದರು. ಆದರೆ ಟ್ರಂಪ್ ಇದುವರೆಗೂ ಅದರಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ.