ಹುಕ್ಕೇರಿ: 8 ಬಾರಿ ಶಾಸಕನಾಗಿ, ಸುಮಾರು 13 ವರ್ಷಗಳ ಕಾಲ ಸಚಿವನಾಗಿ ಸೇವೆ ಸಲ್ಲಿಸಿರುವ ಅನುಭವ ನನಗಿದೆ. ಭವಿಷ್ಯದ ದಿನಗಳಲ್ಲಿ ರಾಜ್ಯದ ಸಿಎಂ ಆಗುವ ಎಲ್ಲಾ ಅರ್ಹತೆ ಹೊಂದಿದ್ದೇನೆ. ಇಲ್ಲದಿದ್ದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ತಾವು ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.
ಅವರು ಪಟ್ಟಣ ಹೊರವಲಯದ ವಿಶ್ವರಾಜ ಭವನದಲ್ಲಿ ಸೋಮವಾರ ವಿಶ್ವನಾಥ ಹಾಗೂ ರಾಜೇಶ್ವರಿ ಕತ್ತಿ ದಂಪತಿ ಸ್ಮರಣಾರ್ಥ ಕೋವಿಡ್ ವಾರಿಯರ್ಸ್‌ಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶದ ಆರ್ಥಿಕತೆಯನ್ನು ಸರಿದೂಗಿಸಲು ಲಾಕ್‌ಡೌನ್ ಸಡಿಲುಗೊಳಿಸಿವೆ. ಆದರೆ ಜನರು ರಾಜ್ಯ ಕೋವಿಡ್ ಮುಕ್ತವಾಗಿದೆ ಎಂದು ಭಾವಿಸಿ ಅನಾವಶ್ಯಕವಾಗಿ ಅಲೆದಾಡಬಾರದು ಎಂದು ಕಿವಿಮಾತು ಹೇಳಿದರು.
ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ಮುಖಂಡರಾದ ಮಹಾವೀರ ನಿಲಜಗಿ, ವಿದ್ಯತ್ ಸಂಘದ ಅಧ್ಯಕ್ಷ ಬಸವರಾಜ ಮರಡಿ, ಅಶೋಕ ಪಟ್ಟಣಶೆಟ್ಟಿ, ಸತ್ಯೆಪ್ಪಾ ನಾಯಿಕ, ರಾಜು ಮುನ್ನೋಳಿ, ರಾಚಯ್ಯ ಹಿರೇಮಠ, ರಮೇಶ ಕುಲಕರ್ಣಿ, ಜಯಗೌಡ ಪಾಟೀಲ, ಮಂಜುನಾಥ ಪರಸನ್ನವರ, ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 600 ಕ್ಕೂ ಹೆಚ್ಚು ಅಂಗನವಾಡಿ, ಆಶಾ ಕಾರ್ಯಕರ್ತೆಯರು, ನರ್ಸ್‌ಗಳಿಗೆ ಆಹಾರ ಧ್ಯಾನಗಳ ಕಿಟ್ ವಿತರಿಸಲಾಯಿತು.