Advertisement

ಚಿತ್ರೋತ್ಸವಕ್ಕೆ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ

04:14 PM Dec 04, 2020 | Suhan S |

ಹಿರಿಯ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಹೊಸಚಿತ್ರ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರ ಎರಡು ಪ್ರತಿಷ್ಟಿತ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. “ರೋಮ್‌’ ಮತ್ತು “ಢಾಕಾ’ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಏಷ್ಯನ್‌ ಮತ್ತು ಸ್ಪರ್ಧಾತ್ಮಕ ವಿಭಾಗಕ್ಕೆ ಈ ಚಿತ್ರ ಆಯ್ಕೆಯಾಗಿದೆ.

Advertisement

ಜಯಂತ್‌ ಕಾಯ್ಕಿಣಿ ಅವರ “ಹಾಲಿನ ಮೀಸೆ’ ಕಥೆಯನ್ನಾಧರಿಸಿದ ಈ ಚಿತ್ರಕ್ಕೆ ಗಿರೀಶ್‌ ಕಾಸರವಳ್ಳಿ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಗಿರೀಶ್‌ಕಾಸರವಳ್ಳಿ, “ಇದು ನಮ್ಮೆಲ್ಲರ ಸಂಕಟದಕಥೆ. ಇಲ್ಲೂ ಇರುವುದಕ್ಕೆ ಆಗುವುದಿಲ್ಲ. ಅಲ್ಲಿಯೂ ಕಷ್ಟ. ಇದನ್ನುಕಥೆ ಧ್ವನಿಸುತ್ತದೆ. ನಾಗರಾಜ ಎಂಬ ವ್ಯಕ್ತಿತ್ವವನ್ನು ಇಟ್ಟುಕೊಂಡು ಈ ಕಥೆ ಹೇಳಲಾಗುತ್ತಿದೆ. ಬಾಲ್ಯ ಮತ್ತು ಗೃಹಸ್ಥ ಹೀಗೆ ಎರಡು ಘಟ್ಟಗಳನ್ನು ಚಿತ್ರದಲ್ಲಿಹಿಡಿದಿಡಲಾಗಿದೆ. ಎರಡು ಘಟ್ಟದಕಥಾ ಹಂದರ ಈ ಚಿತ್ರದಲ್ಲಿದೆ. ಸುಖ ಮತ್ತು ನೆಮ್ಮದಿ ನಡುವಿನ ತೊಳಲಾಟದ ಸಂಘರ್ಷ ಈ ಕಥೆ ಇಲ್ಲಿದೆ.ಎಲ್ಲರಲ್ಲೂ ಒಂದಲ್ಲ ಒಂದು ಈ ರೀತಿಯ ಸಂಕಟಇರುವುದರಿಂದ ಸಾರ್ವತ್ರಿಕಮತ್ತು ಸಾರ್ವಕಾಲಿಕರೂಪವನ್ನು ಈ ಚಿತ್ರ ಪಡೆದುಕೊಳ್ಳುತ್ತದೆ’ ಎನ್ನುತ್ತಾರೆ.

“ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಚಿತ್ರಕ್ಕೆ ಹೆಚ್‌.ಎಂ ರಾಮಚಂದ್ರ ಹಾಲ್ಕೆರೆ ಛಾಯಾಗ್ರಹಣ, ಗುಣಶೇಖರ್‌ ಸಂಕಲನ, ಎಸ್‌.ಆರ್‌ ರಾಮಕೃಷ್ಣ ಸಂಗೀತವಿದೆ. “ಸಂಗಮ ಫಿಲಂಸ್‌’ ಬ್ಯಾನರ್‌ ಅಡಿಯಲ್ಲಿ ಎಸ್‌.ವಿ ಶಿವಕುಮಾರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next