Advertisement

Hunsur: ಮುಂದುವರೆದ ಪೊಲೀಸರ ದಾಳಿ; ಅಕ್ರಮ ಪಟಾಕಿ ಪತ್ತೆ

03:07 PM Oct 22, 2023 | Team Udayavani |

ಹುಣಸೂರು: ತಾಲೂಕಿನ ಬಿಳಿಕೆರೆಯ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಟಾಕಿಯನ್ನು ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

Advertisement

ಖಚಿತ ಮಾಹಿತಿ ಮೇರೆಗೆ ಬಿಳಿಕೆರೆಯ ಬಜಾರ್ ರಸ್ತೆಯ ಮೂರ್ಕಣ್ಣ ಹಾಗೂ ಮಂಜುರವರಿಗೆ ಸೇರಿದ ದಿನಸಿ ಅಂಗಡಿಗಳ ಮೇಲೆ ಇನ್ಸ್‌ಪೆಕ್ಟರ್ ಲೋಲಾಕ್ಷಿ ಹಾಗೂ ರಾಜಸ್ವ ನಿರೀಕ್ಷಕ ಮಂಜು ನೇತೃತ್ವದಲ್ಲಿ ದಾಳಿ ನಡೆಸಿದ ವೇಳೆ ಕಳೆದ ವರ್ಷದ ಉಳಿದ ಪಟಾಕಿ ಪತ್ತೆಯಾಗಿದ್ದು, 130 ಕೆ.ಜಿ.ಯಷ್ಟು ವಿವಿಧ ಬ್ರಾಂಡಿನ ಪಟಾಕಿಯನ್ನು ವಶಕ್ಕೆ ಪಡೆದು ಇಬ್ಬರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next