ಬಂಟ್ವಾಳ: ಅಕ್ರಮವಾಗಿ ಮದ್ಯ ಮಾರಾಟದ ದೃಷ್ಟಿಯಿಂದ ಸ್ಕೂಟರ್‌ನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ಆತನಿಂದ ಸಾಗಾಟ ಮಾಡುತ್ತಿದ್ದ ಮದ್ಯದ ಸ್ಯಾಚೆಟ್‌ಗಳು ಹಾಗೂ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳಿಗೆ ಗ್ರಾಮದ ಕಲ್ಪನೆ ನಿವಾಸಿ ಮೆಲ್ವಿನ್ ರೊಡ್ರಿಗಸ್ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯಾಗಿದ್ದು, ಬಂಟ್ವಾಳ ನಗರ ಪಿಎಸ್‌ಐ ರಾಮಕೃಷ್ಣ ಅವರು ನಲ್ಕೆಮಾರ್ ಭಾಗದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿದೆ. ಆತನ ಸ್ಕೂಟರಿನಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿ 90 ಎಂಎಲ್‌ನ ಎರಡು ಬ್ರಾಂಡ್‌ನ ತಲಾ 48 ಮದ್ಯದ ಸ್ಯಾಚೆಟ್ ಪತ್ತೆಯಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.