Advertisement

ಇ- ತಂತ್ರಜ್ಞಾನಕ್ಕೆ ಸೆಡ್ಡು: ಅಕ್ರಮವಾಗಿ ಪೆಟ್ರೋಲ್‌ ಕಳವು

06:33 PM Sep 13, 2020 | Suhan S |

ಕೊಟ್ಟಿಗೆಹಾರ: ಪೆಟ್ರೋಲ್‌ ಅಕ್ರಮ ಕಳ್ಳತನಕ್ಕೆ ಇ- ಲಾಕ್‌ ತಂತ್ರಜ್ಞಾನವನ್ನು ಬಳಸಿದ್ದರೂ ಕೂಡ ಪೆಟ್ರೋಲ್‌ ಟ್ಯಾಂಕರ್‌ ಚಾಲಕನೊಬ್ಬ ಇ- ಲಾಕ್‌ ತಂತ್ರಜ್ಞಾನಕ್ಕೆ ಸಡ್ಡು ಹೊಡೆದು ಅಕ್ರಮವಾಗಿ ಪೆಟ್ರೋಲ್‌ ತೆಗೆಯುತ್ತಿದ್ದ ಘಟನೆ ನಡೆದಿದೆ.

Advertisement

ಹಾಸನದ ಪೆಟ್ರೋಲ್‌ ಟಮಿರ್ನಲ್‌ನಿಂದ ಪೆಟ್ರೋಲ್‌ ತುಂಬಿಕೊಂಡು ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿಯ ಪೆಟ್ರೋಲ್‌ ಬಂಕ್‌ವೊಂದಕ್ಕೆ ಹೊರಟ ಟ್ಯಾಂಕರ್‌ ಚಾಲಕ ಆಲ್ದೂರು ಸಮೀಪದ ಕಣತಿ ಎಂಬಲ್ಲಿ ಅಂಗಡಿಯೊಂದಕ್ಕೆ ಟ್ಯಾಂಕರ್‌ನಿಂದ ಪೆಟ್ರೋಲ್‌ ತೆಗೆದು ಅಂಗಡಿಯೊಂದಕ್ಕೆ ಕೊಡುತ್ತಿದ್ದ. ಹಿಂಬದಿಯಿಂದ ಬಂದ ವಾಹನ ಸವಾರರೊಬ್ಬರು ಆ ಟ್ಯಾಂಕರನ್ನು ಹಿಂಬಾಲಿಸಿಕೊಂಡು ಬಂದಿದ್ದು ಆ ಟ್ಯಾಂಕರ್‌ ಮಾಗುಂಡಿಯ ಪೆಟ್ರೋಲ್‌ ಬಂಕ್‌ ವೊಂದಕ್ಕೆ ಬಂದು ನಿಂತಿದೆ.

ಆಗ ಸ್ಥಳೀಯರು ಪೆಟ್ರೋಲ್‌ ಬಂಕ್‌ ಮಾಲೀಕರಿಗೆ ವಿಚಾರ ತಿಳಿಸಿದ್ದು ಚಾಲಕನನ್ನು ವಿಚಾರಿಸಿದಾಗಪೆಟ್ರೋಲ್‌ ಅಕ್ರಮವಾಗಿ ತೆಗೆಯುತ್ತಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಇಂಡಿಯನ್‌ ಆಯಿಲ್‌ ಕಾಪೊìರೇಷನ್‌ ಸೇಲ್ಸ್‌ ಮ್ಯಾನೇಜರ್‌ ಜೋಶಿ ಸ್ಥಳಕ್ಕೆ ಆಗಮಿಸಿದರು. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪೆಟ್ರೋಲ್‌ ಅಕ್ರಮವಾಗಿ ತೆಗೆಯುವುದನ್ನು ತಡೆಯಲು ಇ- ಲಾಕ್‌ ತಂತ್ರಜ್ಞಾನ ಬಳಸಲಾಗುತ್ತಿದ್ದು ಹಾಸನದ ಪೆಟ್ರೋಲ್‌ ಟರ್ಮಿನಲ್‌ನಲ್ಲಿ ಪೆಟ್ರೋಲ್‌ ತುಂಬಿಕೊಂಡು ಟ್ಯಾಂಕರ್‌ ಹೊರಟ್ಟರೆ ಆಯಾ

ಪೆಟ್ರೋಲ್‌ ಬಂಕ್‌ನ್ನು ತಲುಪಿದ ನಂತವೆ ಇ- ಲಾಕ್‌ ತೆರೆಯುತ್ತದೆ. ಜಿಪಿಎಸ್‌ ಅಳವಡಿಸಿರುವ ಟ್ಯಾಂಕರ್‌ ಪೆಟ್ರೋಲ್‌ ಬಂಕ್‌ ತಲುಪದೆ ಪೆಟ್ರೋಲ್‌ ತೆಗೆಯಲು ಸಾದ್ಯವಿಲ್ಲ. ಆದರೆ ಇಲ್ಲಿ ಲಾಕ್‌ಗೆ ತ್ರೆಡ್‌ ಅಳವಡಿಸಿ ಅಕ್ರಮವಾಗಿ ಪೆಟ್ರೋಲ್‌ ತೆಗೆಯುತ್ತಿರುವುದು ಗಮನಕ್ಕೆ ಬಂದಿದ್ದು ಈ ಬಗ್ಗೆ ಕಂಪನಿಯ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next