Advertisement

ಅಕ್ರಮ ವಸ್ತು ಜಪ್ತಿ ದಾಖಲೆ: 4,658 ಕೋಟಿ ರೂ. ಜಪ್ತಿ 75 ವರ್ಷಗಳ ಇತಿಹಾಸದಲ್ಲೇ ಗರಿಷ್ಠ

01:14 AM Apr 16, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಮಾ. 1ರಿಂದ ಎ. 13ರ ವರೆಗೆ ಚುನಾವಣ ನೀತಿ ಸಂಹಿತೆ ಜಾರಿ ತಂಡಗಳು ದೇಶಾದ್ಯಂತ ಬರೋಬ್ಬರಿ 4,658 ಕೋಟಿ ರೂ. ಮೌಲ್ಯದ ಚುನಾವಣ ಅಕ್ರಮ ವಸ್ತುಗಳನ್ನು ಜಪ್ತಿ ಮಾಡಿವೆ. ವಿಶೇಷವೆಂದರೆ ಇಷ್ಟು ಬೃಹತ್‌ ಮೊತ್ತದ ಅಕ್ರಮ ಸರಕು ಜಪ್ತಿ ಮಾಡಿರುವುದು ದೇಶದ ಲೋಕಸಭೆ ಚುನಾವಣೆಯ ಇತಿಹಾಸದಲ್ಲಿ ಅಂದರೆ, 75 ವರ್ಷಗಳಲ್ಲಿ ಇದೇ ಮೊದಲು ಎಂದು ಚುನಾವಣ ಆಯೋಗ ತಿಳಿಸಿದೆ.

Advertisement

ಮಾ. 1ರಿಂದ ಈಚೆಗೆ ಪ್ರತೀ ದಿನ ಸರಾಸರಿ 100 ಕೋಟಿ ರೂ. ಮೌಲ್ಯದ ಅಕ್ರಮಗಳನ್ನು ಅಧಿಕಾರಿಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆ ವೇಳೆ ಎಲ್ಲ ಹಂತಗಳೂ ಸೇರಿ ಒಟ್ಟು 3,475 ಕೋಟಿ ರೂ. ಮೌಲ್ಯದ ಅಕ್ರಮ ಸರಕುಗಳನ್ನು ಜಪ್ತಿ ಮಾಡಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಮೊದಲ ಹಂತದ ಚುನಾವಣೆಗೆ ಮುನ್ನವೇ 4,658 ಕೋಟಿ ರೂ. ಮೌಲ್ಯದ ಅಕ್ರಮ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಈ ಪೈಕಿ 395 ಕೋಟಿ ರೂ. ನಗದು ರೂಪ ದಲ್ಲಿ ಸಿಕ್ಕರೆ, 489 ಕೋಟಿ ರೂ. ಮೌಲ್ಯದ 3.58 ಕೋಟಿ ಲೀಟರ್‌ ಮದ್ಯ, 1,142 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳು, 562 ಕೋಟಿ ರೂ. ಮೌಲ್ಯದ ಅಮೂಲ್ಯ ಲೋಹ ವಶಪಡಿಸಿಕೊಳ್ಳಲಾಗಿದೆ.

ಒಟ್ಟು ಜಪ್ತಿ ಮಾಡಿದ ಸರಕುಗಳ ಪೈಕಿ ಶೇ. 45ರಷ್ಟು ಮಾದಕ ದ್ರವ್ಯಗಳಾಗಿದ್ದು, ಮೌಲ್ಯ 2,069 ಕೋಟಿ ರೂ. ಎಂದು ಆಯೋಗ ಮಾಹಿತಿ ನೀಡಿದೆ.

ಸರಕಾರಿ ನೌಕರರ ವಿರುದ್ಧವೂ ಕ್ರಮ
ಚುನಾವಣ ಪ್ರಚಾರದಲ್ಲಿ ನಿಯಮ ಬಾಹಿರ ವಾಗಿ ರಾಜಕಾರಣಿಗಳಿಗೆ ನೆರವಾಗುತ್ತಿದ್ದ ಸುಮಾರು 106 ಮಂದಿ ಸರಕಾರಿ ನೌಕರರ ವಿರುದ್ಧ ಕಠಿನ ಕ್ರಮ ಕೈಗೊಂಡಿರುವುದಾಗಿ ಆಯೋಗ ತಿಳಿಸಿದೆ.

Advertisement

ರಾಜಸ್ಥಾನದಲ್ಲಿ ಅತೀ ಹೆಚ್ಚು
ಅತೀ ಹೆಚ್ಚು ಅಂದರೆ 779 ಕೋಟಿ ರೂ. ಮೌಲ್ಯದ ಅಕ್ರಮ ವಸ್ತು ಜಪ್ತಿ ಯಾಗಿರುವುದು ರಾಜಸ್ಥಾನದಲ್ಲಿ. ಗುಜರಾತಿ ನಲ್ಲಿ 605 ಕೋಟಿ ರೂ. ಮತ್ತು ಮಹಾ ರಾಷ್ಟ್ರ ದಲ್ಲಿ 431 ಕೋಟಿ ರೂ. ಮೌಲ್ಯದ ಅಕ್ರಮ ಪತ್ತೆಯಾಗಿದ್ದು, ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ. ಇಎಸ್‌ಎಂಎಸ್‌ ಪೋರ್ಟಲ್‌ನಿಂದಾಗಿಯೇ ಇಷ್ಟು ಅಕ್ರಮ ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದು ಆಯೋಗ ಹೇಳಿದೆ.

ಮದ್ಯ ಜಪ್ತಿ: ದೇಶದಲ್ಲೇ ಕರ್ನಾಟಕ ಗರಿಷ್ಠ
ಬೆಂಗಳೂರು: ರಾಜ್ಯದಲ್ಲಿ ಭಾರೀ ಪ್ರಮಾಣ ದಲ್ಲಿ ಚುನಾವಣ ಅಕ್ರಮ ಪ್ರಕರಣಗಳು ಪತ್ತೆಯಾಗು ತ್ತಿದ್ದು, ಅಕ್ರಮ ಮದ್ಯ ಜಪ್ತಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದ ಕಳಂಕ ರಾಜ್ಯಕ್ಕೆ ಅಂಟಿದೆ. ಅತೀ ಹೆಚ್ಚು ಚುನಾವಣ ಅಕ್ರಮ ವಸ್ತು ಪತ್ತೆ ಆಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಎ. 13ರ ವರೆಗೆ 281.43 ಕೋಟಿ ರೂ. ಮೌಲ್ಯದ ಅಕ್ರಮ ವಸ್ತು ಪತ್ತೆಯಾಗಿದೆ. ದೇಶದಲ್ಲೇ ಭಾರೀ ಚುನಾವಣ ಅಕ್ರಮ ಪತ್ತೆ ಆಗಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ 6ನೇ ಸ್ಥಾನ ಪಡೆದಿದೆ.

ರಾಜ್ಯದಲ್ಲಿ 124.33 ಕೋ.ರೂ. ಮೌಲ್ಯದ 1.30 ಕೋಟಿ ಲೀ. ಮದ್ಯ ಜಪ್ತಿ ಮಾಡ ಲಾಗಿದ್ದು, ಇದು ದೇಶದಲ್ಲೇ ಅತೀ ಹೆಚ್ಚು. ದೇಶವಿಡೀ ಜಪ್ತಿ ಆಗಿರುವ ಅಕ್ರಮ ಗಳಲ್ಲಿ ರಾಜ್ಯದ ಪಾಲು ಶೇ. 6ರಷ್ಟಿದೆ.

 

Advertisement

Udayavani is now on Telegram. Click here to join our channel and stay updated with the latest news.

Next