Advertisement
ತಾಲೂಕಿನ ಪಂಚವಳ್ಳಿ ಗ್ರಾಮದ ಸರ್ವೆ ನಂ 10 ರ ಜಮೀನಿನ ಬಾಡಿಗೆ ಸೆಡ್ ನಲ್ಲಿ ಇಂಡಸ್ರೀಯಲ್ ಯೂಸ್ ಎಂಬ ನಾಮಾಂಕಿತ ಹೊಂದಿದ ಸುಮಾರು 330 ಬ್ಯಾಗ್ ಯೂರಿಯಾ ರಸಗೊಬ್ಬರ ಹಾಗೂ 2250 ಚೀಲಗಳನ್ನು ವಿವಿಧ ಉದ್ದೇಶಗಳಿಗೆ ಮಾರಾಟ ಮಾಡಲು ಶೇಖರಿಸಿಟ್ಟಿದ್ದ ಕೇರಳ ಮೂಲದ ಲಾರಿ ಡ್ರೈವರ್ ಮೋಹೀನ್ ಅಬೂಕರ್ ಎಂಬಾತ ಸಿಕ್ಕಿಬಿದ್ದಿದ್ದು ಇದರ ಮಾಲೀಕ ಪೆರಂಬಾಡಿ ಹಂಸ ತಲೆ ಮರೆಸಿಕೊಂಡಿದ್ದು ಡ್ರೈವರ್ ಮೋಹಿನ್ ಅಬುಕರ್ ನನ್ನು ಬಂಧಿಸಿ ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿದೆ.
ಖಚಿತ ದೂರನ್ನು ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು, ಜಮೀನಿಗೆ ಧಾವಿಸಿ ದಾಸ್ತಾನು ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಯೂರಿಯಾ ರಸಗೊಬ್ಬರವನ್ನು ವಿವಿಧ ಉದ್ದೇಶಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಇಂಡಸ್ರೀಯಲ್ ಯೂಸ್ ಕಂಪನಿಯ ಯೂರಿಯವನ್ನು ಸಂಗ್ರಹಿಸಿ, ನೊಂದಣಿಯಾಗಿರದ ಕಂಪನಿ ಹೆಸರಿನಲ್ಲಿ ಮಾರಾಟ ಮಾಡಲು ಕಂಪನಿಗಳ ಹೆಸರನ್ನು ಅದಲು ಬದಲು ಮಾಡಿ ಮಾರಾಟ ಮಾಡಲು ತೀರ್ಮಾನಿಸಿದ್ದರು. ಈ ವಿಷಯ ತಿಳಿದ ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಡಾ.ವೈ.ಪ್ರಸಾದ್, ಹಾಗೂ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಕುಮಾರ್ ಹಾಗೂ ಕೃಷಿ ಅಧಿಕಾರಿ ಮಹೇಶ್, ಹೀತೇಶ್ ನೇತೃತ್ವದಲ್ಲಿ ದಾಳಿ ನಡೆಸಿ, ಕೆವಲ ಅರ್ಧ ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Related Articles
Advertisement