ಧಿಕಾರಿಗಳು ಮತ್ತು ಸಹಾಯಕ ಕಮಿಷನರ್ ಅವರು ಅಕ್ರಮ ಮರಳುಗಾರಿಕೆ ತಡೆಯಲು ಸಂಚಾರಿ ದಳವನ್ನು ಮಾಡಿ ಗಸ್ತು ತಿರುಗುವಂತೆ ಆದೇಶಿಸಿದ್ದದ್ದರು. ಈ ಹಿನ್ನೆಲೆ ಮಧ್ಯರಾತ್ರಿ 1.30ರ ಸುಮಾರಿಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಗೋವಾ ನೋಂದಣಿಯ ಲಾರಿಯನ್ನು ವಶಕ್ಕೆ ಪಡೆಯುವಲ್ಲಿ ಗಸ್ತು ತಂಡ ಸಫಲವಾಗಿದೆ.
Advertisement
ಕಂದಾಯ ಇಲಾಖೆಯ ಆರ್‌ಐ ಅನಿಲ ಪರ್ವತ, ಗ್ರಾಪಂ ಕಾರ್ಯದರ್ಶಿ ಗಿರೀಶ ಬಿರಾದಾರ, ಎಎಸ್‌ಐ ಮಹಾಬಲೇಶ್ವರ ಗಡೆರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಬಗ್ಗೆ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆಂದು ತಿಳಿದು ಬಂದಿದೆ.