ಸಿಂಧನೂರು: ಅಕ್ರಮ ಮರಳು ದಂಧೆ ನಡೆದ ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ಹೋದ ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಮರಳು ಸಾಗಿಸುವ ವ್ಯಕ್ತಿಗಳು ವಾಗ್ವಾದ ನಡೆಸಿದ್ದಲ್ಲದೇ ಬೆದರಿಕೆವೊಡ್ಡಿದ ಘಟನೆ ನಡೆದಿದೆ. ಪೊಲೀಸರು ಅಷ್ಟೊತ್ತಿಗೆ ಸ್ಥಳಕ್ಕೆ ಭೇಟಿ ನೀಡಿದ್ದರಿಂದ ಸಿಬ್ಬಂದಿ ಅನಾಹುತದಿಂದ ಪಾರಾಗಿದ್ದಾರೆ.
ಏನಿದು ಘಟನೆ?: ಕಲ್ಲೂರು ಹಳ್ಳದಲ್ಲಿ ಮರಳು ಸಾಗಿಸುತ್ತಿದ್ದಾರೆಂಬ ಮಾಹಿತಿ ಗೊತ್ತಾಗಿ ಗುರುವಾರ ಬೆಳಗಿನ ಜಾವ 1.30ರ ಸುಮಾರಿಗೆ ಕಂದಾಯ ನಿರೀಕ್ಷಕ ಲಿಂಗರಾಜ್, ಗ್ರಾಮಲೆಕ್ಕಿಗ ಭೀಮನಗೌಡ ಮುಳ್ಳೂರು ಅಕ್ರಮ ಮರಳು ಸಾಗಿಸುವವರನ್ನು
ಹಿಡಿಯಲೆಂದು ಕಲ್ಲೂರ ಹಳ್ಳಕ್ಕೆ ಹೋಗಿದ್ದಾರೆ. ಅಲ್ಲಿ ಹಳ್ಳದಲ್ಲಿ ಮೂರು ಟ್ರಾÂಕ್ಟರ್‌ಗಳಿಗೆ ಅಕ್ರಮವಾಗಿ ಮರಳು ತುಂಬುತ್ತಿರುವುದು ಕಂಡು ಬಂದಿದೆ. ಅದನ್ನು ತಡೆಯಲು ಮುಂದಾಗುತ್ತಿದಂತೆ ಪರಾರಿಯಾಗಿದ್ದಾರೆ. ಅಲ್ಲಿಂದ ವಾಪಸ್ ಬರಬೇಕೆಂದಾಗ ಕಂದಾಯ ಸಿಬ್ಬಂದಿಯ ಬೈಕ್‌ನ ಪ್ಲಗ್ ಕಿತ್ತು ಹಾಕಿ, ಪಂಕ್ಚರ್ ಮಾಡಿರುವುದು ಗಮನಕ್ಕೆ ಬಂದಿದೆ. ಆಗ ಸ್ಥಳಕ್ಕೆ ಬಂದ ಕೆಲವರು ಜಗಳಕ್ಕಿಳಿದಿದ್ದಲ್ಲದೇ ಬೆದರಿಕೆ ಹಾಕಿದ್ದಾರೆ. ಅಷ್ಟೊತ್ತಿಗೆ ಪೊಲೀಸರು ಬಂದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಈ ಕುರಿತು ತಹಶೀಲ್ದಾರ್‌ಗೆ ಸಿಬ್ಬಂದಿಗೆ ಲಿಖಿತ ದೂರು ನೀಡಿದ್ದಾರೆ.
ರಕ್ಷಣೆಗೆ ಪೊಲೀಸರಿಗೆ ಮೊರೆ: ಪೊಲೀಸರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿ ಬಂದ ಕಂದಾಯ ಇಲಾಖೆ ಇಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ತೀವ್ರಗೊಳಿಸಿ ಇಬ್ಬರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಬೆದರಿಕೆ ಹಾಕಿದವರು ಯಾರು? ಪರಾರಿಯಾಗಿರುವ ಮೂರು ಟ್ರಾÂಕ್ಟರ್ ಗಳು ಯಾರಿಗೆ ಸೇರಿವೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ.