Advertisement

ಅಕ್ರಮ ಸಾಗಾಟಕ್ಕೆ ಬೇಕಿದೆ ಕಡಿವಾಣ

11:49 AM Aug 31, 2019 | Suhan S |

ಕನಕಗಿರಿ: ತಾಲೂಕು ವ್ಯಾಪ್ತಿಯ ನವಲಿ, ಯತ್ನಟ್ಟಿ, ಬುನ್ನಟ್ಟಿ, ಈಚನಾಳ, ಕರಡೋಣಿ ಭಾಗದಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

ಮರಳು ಮಾಫಿಯಾದಿಂದ ಸಮೀಪದ ನವಲಿ ಗ್ರಾಮದಲ್ಲಿ ಮರುಳಿನ ದಿಬ್ಬ ಕುಸಿತು ಮೂವರು ಮಕ್ಕಳು ಮೃತಪಟ್ಟಿರುವ ಘಟನೆ ಕುರಿತು ತನಿಖೆ ನಡೆಸುತ್ತಿದೆ. ಈ ಘಟನೆ ನಂತರ ಎಚ್ಚೆತ್ತುಕೊಂಡ ಸಂಘ-ಸಂಸ್ಥೆಗಳು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸುತ್ತೀವೆ.

ಕೇಂದ್ರಗಳು ನಾಮಮಾತ್ರಕ್ಕೆ: ಬುನ್ನಟ್ಟಿ ಗ್ರಾಮದ ಸಮೀಪದ ಭೂ ಮತ್ತು ಗಣಿ ಇಲಾಖೆ ವತಿಯಿಂದ ಎರಡು ಮರಳು ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಕಳೆದ ಒಂದು ವರ್ಷ ಹಿಂದೆ ಟೆಂಡರ್‌ ಕೂಡಾ ಮಾಡಲಾಗಿದೆ. ಈ ಕೇಂದ್ರಗಳು ನಾಮ ಮಾತ್ರಕ್ಕೆ ತೆರಯಲಾಗಿದೆ. ಡಿ.ಡಿ.ಯನ್ನು ನೀಡದೇ ಇರುವ ಕಾರಣ ಅಕ್ರಮ ಮರಳು ನಡೆಸವವರು ಮನ ಬಂದಂತೆ ಎಲ್ಲಿ ಅದರಲ್ಲಿ ಮರಳು ಸಾಗಿಸುತ್ತಿದ್ದಾರೆ.

ಕಾರ್ಯಪ್ರವೃತ್ತರಿಲ್ಲದ ಅಧಿಕಾರಿಗಳು: ಕಳೆದ ನಾಲ್ಕು ತಿಂಗಳ ಹಿಂದೆ ಅಕ್ರಮ ಮರಳು ಸಾಗಿಸುವ ಕುರಿತು ‘ಉದಯವಾಣಿ’ ವರದಿ ಮಾಡಿತ್ತು. ನಂತರ ತಹಶೀಲ್ದಾರ್‌ ರವಿ ಅಂಗಡಿ ಅವರು ಎಲ್ಲ ಇಲಾಖೆಗಳನ್ನು ಒಳಗೊಂಡ ಸಮಿತಿ ರಚಿಸಿದ್ದರು. ಪ್ರತಿ ದಿನವೂ ಒಬ್ಬರು ತಾಲೂಕಿನ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಗಸ್ತು ತಿರುಗುವಂತೆ ಸೂಚಿಸಿದರು. ಆದರೆ ಅಧಿಕಾರಿಗಳು ಮಾತ್ರ ಎಷ್ಟರ ಮಟ್ಟಿಗೆ ಕಾರ್ಯ ಪ್ರವೃತ್ತರಾದರೂ ಎಂಬುವುದು ಮಾತ್ರ ಯಾರಿಗೂ ತಿಳಿದಿಲ್ಲ.

ಸ್ಥಳಕ್ಕೆ ಭೇಟಿ ನೀಡದ ಶಾಸಕ: ಮೂವರು ಮಕ್ಕಳ ಮೃತಪಟ್ಟ ಘಟನೆ ನಡೆದು ಮೂರು ದಿನಗಳ ಕಳೆದರೂ ಘಟನಾ ಸ್ಥಳಕ್ಕೆ ಇದುವರೆಗೂ ಶಾಸಕ ಬಸವರಾಜ ದಢೇಸೂಗೂರು ಭೇಟಿ ನೀಡಿ ಪರಿಶೀಲಿಸಿಲ್ಲ. ಮೃತಪಟ್ಟ ಕುಟುಂಬದವರಿಗೆ ಇದುವರೆಗೂ ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಯಾವುದೇ ಪರಿಹಾರ ಕೂಡಿಸಲು ಶಾಸಕರು ಮುಂದಾಗಿಲ್ಲ.

Advertisement

ಎಲ್ಲಿ ಬೇಕಾದರಲ್ಲಿ ತೆಗ್ಗು ದಿನ್ನೆಗಳೇ: ತಾಲೂಕಿನ ಕೊನೆಯ ಭಾಗವಾದ ಯತ್ನಟ್ಟಿ ಮಾರ್ಗವಾಗಿ ಬುನ್ನಟ್ಟಿ, ಈಚನಾಳ, ನವಲಿ ಗ್ರಾಮದವರೆಗೆ ಹಳ್ಳವಿದೆ. ಹಳ್ಳದ ಅಕ್ಕಪಕ್ಕ ಇರುವ ಖಾಸಗಿ ಜಮೀನಗಳಲ್ಲಿ ಕೂಡಾ ಯೋಗ್ಯವಾದ ಮರಳು ಲಭ್ಯವಿದೆ. ಇದನ್ನೆ ಬಂಡವಾಳ ಮಾಡಿಕೊಂಡ ದಂಧೆಕೊರರು ಹಳ್ಳದ ಸುತ್ತಲೂ ಎಲ್ಲಿ ಬೇಕಾದರಲ್ಲಿ ತೆಗ್ಗುಗಳನ್ನು ಅಗೆದಿದ್ದಾರೆ. ಇವು ಕೂಡಾ ಬಲಿಗಾಗಿ ಕಾದು ಕುಳಿತಿವೆ. ಇವುಗಳನ್ನು ನೆಲ ಸಮ ಮಾಡುವವರು ಯಾರು ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.

 

•ಶರಣಪ್ಪ ಗೋಡಿನಾಳ

Advertisement

Udayavani is now on Telegram. Click here to join our channel and stay updated with the latest news.

Next