ಬಜಪೆ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಅಂಗಡಿಯೊಂದರಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ತಾಲೂಕು ಮೊಗರು ಗ್ರಾಮದ ತಾರೆಮಾರ್ ಎಂಬಲ್ಲಿ ಗಂಜಿಮಠ ಕಡೆಯಿಂದ ಮುತ್ತೂರು ಕಡೆಗೆ ಹಾದು ಹೋಗಿರುವ ರಸ್ತೆಯ ಬದಿಯಲ್ಲಿರುವ ಜಯಾನಂದ ಕುಲಾಲ್ ಅವರ ಅಂಗಡಿಯಲ್ಲಿ ಮದ್ಯ ಅಕ್ರಮವಾಗಿ ಮಾರಾಟ ಮಾಡುತ್ತಿದ್ದುದು ಡಿ. 27ರಂದು ಪತ್ತೆಯಾಗಿದೆ.
ಪ್ರಕರಣ ಸಂಬಂಧ ಬಜಪೆ ಪೊಲೀಸ್ ಠಾಣೆಯ ಎಸ್‌ಐ ಕುಮಾರೇಶನ್ ಅವರು ಅಂಗಡಿ ಮಾಲಕ ಜಯಾನಂದ ಕುಲಾಲ್(48)ರನ್ನು ಬಂಧಿಸಿದ್ದಾರೆ. ಅಂಗಡಿಯ ಒಳಗಡೆ ಶೋಕೇಸ್‌ನ ಅಡಿಯಲ್ಲಿ ಒಂದು ಪ್ಲಾಸ್ಟಿಕ್ ಕವರಿನಲ್ಲಿದ್ದ 90 ಎಂಎಲ್‌ನ ಒಟ್ಟು 24 ಮದ್ಯದ ಟೆಟ್ರಾ ಸ್ಯಾಚೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮದ್ಯ ಮಾರಾಟದ ಬಗ್ಗೆ ಅಂಗಡಿ ಮಾಲಕರಿಗೆ ಯಾವುದೇ ಪರವಾನಿಗೆ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.