Advertisement

ದೊಡ್ಡಮೇಟಿ ಕುರ್ಕೆಯಲ್ಲಿ ಪಡಿತರ ಅಕ್ಕಿ ದಾಸ್ತಾನು

05:40 PM Jun 05, 2022 | Team Udayavani |

ಅರಸೀಕೆರೆ: ಪಡಿತರ ಅಕ್ಕಿ ಅಕ್ರಮ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತಹಶೀ ಲ್ದಾರ್‌ ವಿಭಾ ವಿದ್ಯಾ ರಾಥೋಡ್‌ ನೇತೃತ್ವದ ತಂಡ ಶನಿವಾರ ಬೆಳಗ್ಗೆ ತಾಲೂಕಿನ ದೊಡ್ಡಮೇಟಿ ಕುರ್ಕೆ ಗ್ರಾಮದ ವರ್ತಕ ಹನುಮಂತಪ್ಪ ಎಂಬುವರ ಅಂಗ ಡಿ, ಗೋಡಾನ್‌, ತೋಟದ ಮನೆ ಹಾಗೂ ಕೋಳಿ ಫಾರಂ ಮೇಲೆ ದಾಳಿ ನಡೆಸುವ ಮೂಲಕ ಅಕ್ರಮ ವಾಗಿ ದಾಸ್ತಾನು ಮಾಡಿದ್ದ 7 ಲಾರಿಯಷ್ಟು ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳುವಲ್ಲಿ ಅಧಿಕಾರಿ ಗಳ ತಂಡ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದೆ.

Advertisement

ತಾಲೂಕಿನ ಕಣಕಟ್ಟೆ ಹೋಬಳಿ ದೊಡ್ಡಮೇಟಿ ಕುರ್ಕೆ ಗ್ರಾಮದಲ್ಲಿ ಸೋಪ್ಪನಹಳ್ಳಿ ರಸ್ತೆಯಲ್ಲಿ ಚಿಲ್ಲರೆ ಅಂಗಡಿ ವರ್ತಕನಾಗಿರುವ ಹನುಮಂತಪ್ಪ ಎಂಬ ವ್ಯಾಪಾರಿಯು ಅಂಗಡಿ ಸೇರಿದಂತೆ ತೋಟದ ಮನೆ ಗೋಡಾನ್‌ ಇನ್ನಿತರ ಕಡೆಗಳಲ್ಲಿ ಕಡೂರು, ಹೊಸದುರ್ಗ ಹಾಗೂ ಇನ್ನಿತರ ಕಡೆಗಳಿಂದ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರದಾರರಿಗೆ ನೀಡುವ ಅಕ್ಕಿಯನ್ನುಅಕ್ರಮವಾಗಿ, ತಂದು ದಾಸ್ತಾನು ಮಾಡಿದ್ದ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್‌ ವಿಭಾ ವಿದ್ಯಾ ರಾಥೋಡ್‌ ನೇತೃತ್ವದಲ್ಲಿ ಆಹಾರ ಇಲಾಖೆ ಶಿರಸ್ತೇದಾರ್‌ ಬಾಲಚಂದ್ರ, ಕಂದಾಯ ಇಲಾಖೆ ಅಧಿಕಾರಿ ಶಾಂತಕುಮಾರ್‌, ಗ್ರಾಮ ಲೆಕ್ಕಿಗ ಅಧಿಕಾರಿ ಸಿದ್ದಪ್ಪ ಹಾಗೂ ಗ್ರಾಮಾಂತರ ಪೊಲೀಸ್‌ ಠಾಣೆ ಸಬ್‌ ಇನ್ಸ್‌ ಪೆಕ್ಟರ್‌ ತಂಡ ವಿವಿಧ ಕಡೆಗಳಲ್ಲಿ ಏಕಾಎಕಿ ದಾಳಿಯನ್ನು ನಡೆಸಿದ್ದು, ಸುಮಾರು 7 ಲಾರಿಯಷ್ಟು ಪಡಿತರ ಅಕ್ಕಿ ಮೊಟೆಗಳನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದೆ.

ಸಂಜೆಯಾದರು ಇನ್ನು ಪತ್ತೆ ಕಾರ್ಯಚರಣೆ ಮುಂದುವರೆದಿರುವ ಕಾರಣ ತಾಲೂಕು ಆಡಳಿತ ವಶ ಪಡಿಸಿಕೊಂಡಿರುವ ಅಕ್ರಮ ಅಕ್ಕಿಯ ಮೌಲ್ಯವನ್ನು ಅಂದಾಜು ಮಾಡಿಲ್ಲ. ತೋಟದ ಮನೆ ಹಾಗೂ ಕೋಳಿ ಫಾರಂನಲ್ಲಿ ಕೂಡ ಪಡಿತರ ಅಕ್ಕಿ ಮೋಟೆಗಳ ದಾಸ್ತಾನು ಪತ್ತೇಯಾಗುತ್ತಿದ್ದು, ವಶ ಪಡಿಸಿಕೊಳ್ಳುವ ಅಕ್ಕಿಯನ್ನು ಪೊಲೀಸರು ವಶ ಪಡಿಸಿಕೊಂಡು ಪ್ರಕರಣವನ್ನು ದಾಖಲಿಸಲಾಗುತ್ತದೆ ಎನ್ನಲಾಗುತ್ತಿದ್ದು, ಆರೋಪಿ ವರ್ತಕ ಹನು ಮಂತಪ್ಪ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next