ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳು ಹಾಗೂ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.
Advertisement
ದೂರು ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಪೌರಾಡಳಿತ ಇಲಾಖೆಯಿಂದ ತನಿಖೆ ಹಾಗೂ ಪರಿಶೀಲನೆಗೆ ಮಾದೇವಯ್ಯ ಎಂಬುವರನ್ನು ನೇಮಿಸಿದ್ದು, ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಪುರಸಭೆ ವ್ಯಾಪ್ತಿಯ 8ನೇ ವಾರ್ಡ್‌ನಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನರಹಿತ ಬಡವರಿಗೆ ಕಳೆದ 20 ವರ್ಷಗಳ ಹಿಂದೆ 18/35ರ ಅಳತೆಯಲ್ಲಿ ಏಳು ಮಂದಿಗೆ ನಿವೇಶನ ಹಂಚಿ ಅವುಗಳಿಗೆ ಹಕ್ಕುಪತ್ರ ನೀಡಲಾಗಿತ್ತು. ಆದರೆ ಖಾತೆ ವಗೈರಿ ಮಾಡದೆ ಹಾಗೇ ಉಳಿದಿದ್ದವುಗಳ ಪೈಕಿ 4 ನಿವೇಶನಗಳನ್ನು ಅಕ್ರಮವಾಗಿ ಬೇರೇಯವರಿಗೆ ಇತ್ತೀಚೆಗೆ ಖಾತೆ ಮಾಡಿಸಿಕೊಟ್ಟಿರುವುದು ಬೆಳಕಿಗೆ ಬಂದಿತ್ತು ಎನ್ನಲಾಗಿದೆ. ಪ್ರತಿಭಟನೆ ಮಾಡಿದ್ದರು: ಆಶ್ರಯ ಯೋಜನೆಯಡಿಯಲ್ಲಿ ಪಡೆದಿದ್ದ ಮಂದಿ ಖಾತೆಗೋಸ್ಕರ ಅಲೆದು ಅಲೆದು ಕಚೇರಿ ಸುತ್ತಾಡಿದರೂ ಖಾತೆ ಮಾಡಿಸಿಕೊಳ್ಳಲಾಗದೆ, ಹಕ್ಕುಪತ್ರ ಪಡೆದವರು ಕಳೆದ ಒಂದು ವರ್ಷದಿಂದ ಖಾತೆ ಮಾಡಿ ಕೊಡಿ ಎಂದು ಅರ್ಜಿ ನೀಡಿ ಪುರಸಭೆ ಕಚೇರಿ ಮುಂದೆ ಪ್ರತಿಭಟನೆಯನ್ನೂ ಸಹ ಮಾಡಿದರು. ಆದರೆ, ಇದೀಗ ಕೆಲ ಮಂದಿಯದ್ದು ಪೌತಿಯಾಗಿದ್ದು, ಅವರ ಮಕ್ಕಳಿಗಾದರೂ ಖಾತೆ ಮಾಡಲಾಗದ ಪುರಸಭೆ ಅಧಿಕಾರಿಗಳು ಗೊತ್ತಿಲ್ಲದಂತಿದ್ದು, ಬೇರೆಯವರಿಗೆ ಅಕ್ರಮ ಖಾತೆ ಮಾಡಿಕೊಡಲಾಗಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಚಂದನ್ ನೇತೃತ್ವದಲ್ಲಿ ಆರೋಪಿಸಿ ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
Related Articles
Advertisement
ದೂರು ಹಿನ್ನೆಲೆ ಜಿಲ್ಲಾಡಳಿತ ವತಿಯಿಂದ ತನಿಖೆಗೆ ಬಂದಿದ್ದ ಪೌರಾಡಳಿತ ಇಲಾಖೆಯ ಅಧಿಕಾರಿ ಮಾದೇವಯ್ಯ ಸ್ಥಳ ಪರಿಶೀಲಿಸಿ ಮುಂದಿನ ಕ್ರಮಕ್ಕೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ವೇಳೆ ಚಂದನ್ ಇತರರಿದ್ದರು.