Advertisement

ED 8ನೇ ಸಮನ್ಸ್ ಜಾರಿ; ಹೇಮಂತ್ ಸೊರೇನ್‌ಗೆ ಹಾಜರಾಗಲು ಗಡುವು

07:14 PM Jan 13, 2024 | Team Udayavani |

ರಾಂಚಿ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್‌ ಅವರಿಗೆ ಇಡಿ 8ನೇ ಸಮನ್ಸ್ ಜಾರಿ ಮಾಡಿದ್ದು, ಜನವರಿ 16 ರಿಂದ 20ರ ನಡುವೆ ಖುದ್ದು ಹಾಜರಾಗುವಂತೆ ಸೂಚನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

Advertisement

ಈ ಹಿಂದೆ ಸಮನ್ಸ್ ಜಾರಿಯಾದಾಗ ಹಾಜರಾಗಲು ವಿಫಲವಾದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಇಡಿ ಸೊರೆನ್ ಅವರನ್ನು ಕೇಳಿದ್ದು, ಕಳೆದ ತಿಂಗಳು, ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಸಮನ್ಸ್ ಜಾರಿ ಮಾಡಿತ್ತು.

ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಲು ಕೇಳಲಾಗಿದೆ. ಜಾರ್ಖಂಡ್‌ನಲ್ಲಿ ಮಾಫಿಯಾದಿಂದ ಭೂಮಿಯ ಮಾಲೀಕತ್ವದ ಅಕ್ರಮ ಬದಲಾವಣೆಯ ಬೃಹತ್ ದಂಧೆ ನಡೆಯುತ್ತಿದೆ” ಎಂದು ಆರೋಪಿಸಿ ಇಡಿ ತನಿಖೆ ನಡೆಸುತ್ತಿದೆ.

ಈ ಪ್ರಕರಣದಲ್ಲಿ 2011ರ ಬ್ಯಾಚ್‌ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಛಾವಿ ರಂಜನ್ ಸೇರಿದಂತೆ 14 ಜನರನ್ನು ಏಜೆನ್ಸಿ ಬಂಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next