ಆನೇಕಲ್: ಬನ್ನೇರುಘಟ್ಟ ಶ್ರೀಚಂಪಕಧಾಮ ದೇವಾಲಯ ವ್ಯಾಪ್ತಿಯಲ್ಲಿನ ಸಂತೆ ಮೈದಾನ ಹರಾಜು ಪ್ರಕ್ರಿಯೆಯಲ್ಲಿ ನಿಯಮ ಬಾಹಿರ ಗುತ್ತಿಗೆ ನೀಡಿರುವುದು ಬೆಳಕಿಗೆ ಬಂದಿದ್ದು, ಕೂಡಲೆ ಇಲಾಖೆ ತನಿಖೆ ನಡೆಸಿ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಸ್ಥಳೀಯರು ಆಗ್ರಸಿದ್ದಾರೆ. ಕಳೆದ ನವೆಂಬರ್ 2 ರಂದು ದೇವಾಲಯ ಸುಪರ್ದಿಗೆ ಬರುವ ಸಂತೆ ಮೈದಾನದ ಹರಾಜು ಪ್ರಕ್ರಿಯೆ ನಡೆದಿದ್ದು, ಅಂದು ಅಂತಿಮ ಬಿಡ್‌ದಾರರಾಗಿ ಆನಂದ್ ಆಯ್ಕೆಯಾಗಿದ್ದರು.
ಹರಾಜು ಪ್ರಕ್ರಿಯೆ ನಿಯಮಗಳ ಪ್ರಕಾರ ಗುತ್ತಿಗೆ ಪಡೆದ ಒಟ್ಟು ಮೊತ್ತದ ಅರ್ಧ ಭಾಗ ಹಣವನ್ನು ಹರಾಜು ನಡೆಸಿದ ದಿನವೇ ದೇವಾಲಯದ ಕೋಶಾಧಿಕಾರಿಗಳಿಗೆ ತಲುಪಿಸ ಬೇಕಿತ್ತು. ಆದರೆ, ಅಂದು ಕೇವಲ ಒಂದು ಲಕ್ಷ ರೂ. ಕಟ್ಟಿದ್ದಾರೆಂಬ ಮಾಹಿತಿ ದೇವಾಲಯದ ಆಡಳಿತ ಮಂಡಳಿಯಿಂದಲೇ ತಿಳಿದು ಬಂದಿದೆ. ಇದರಿಂದ ಹರಾಜು ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂ ಸಿದಂತಾದೆ ಎನ್ನುವ ಆರೋಪ ಕೇಳಿ ಬಂದಿದೆ. ಎಂದು ಚಾಲೆಂಜ್ ಮಹೇಶ್ ಆರೋಪಿಸಿದ್ದಾರೆ.
ಶನಿವಾರ ಹರಾಜು ಪ್ರಕ್ರಿಯೆಯ ಬಳಿಕ ಗುತ್ತಿಗೆ ಪಡೆದವರು, ಭಾನುವಾರ ರಜೆ ದಿನ ಆಗಿದ್ದರಿಂದ ಸೋಮವಾರ 23 ಲಕ್ಷ ರೂ. ಹಣವನ್ನು ದೇವಾಲಯಕ್ಕೆ ಕಟ್ಟ ಬೇಕಿತ್ತು. ಆದರೆ ಅಂದು ಅಂತಿಮವಾಗಿ ಅವರು ಕೇವಲ 6,25000 ರೂ.ಉಳಿಕೆ ಹಣಕ್ಕೆ ಚೆಕ್ ನೀಡಿದ್ದರು. ಹರಾಜು ನಿಯಮಗಳಲ್ಲಿ ಚೆಕ್ ಪಡೆಯುವುದು ಸಹ ಕಾನೂನು ಬಾಹಿರವಾಗಿದ್ದು, ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಹರಾಜು ನಿಯಮಗಳನ್ನು ಗಾಳಿಗೆ ತೂರಿ ಮಂಗಳವಾರ ಸಂತೆ ಯಲ್ಲಿ ಸುಂಕ ಸಂಗಹ್ರಿಸಲು ಅನುಮತಿ ನೀಡಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆಂದು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಚಾಲೆಂಜ್ ಮಹೇಶ್ ತೀವ್ರವಾಗಿ ಕಿಡಿಕಾರಿದ್ದಾರೆ.
ಹರಾಜು ಪ್ರಕ್ರಿಯೆಯ ನಿಯಮಗಳನ್ನು ಮೀರಿರುವುದರ ಬಗ್ಗೆ ಕಾರ್ಯನಿರ್ವಾಣಾಧಿಕಾರಿ ಬಳಿ ವಿಚಾರಿಸಲು ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ, ಇತ್ತ ದೇವಾಲಯಕ್ಕೂ ಬಂದಿಲ್ಲ. ಅಷ್ಟೂ ಅಲ್ಲದೆ ಗುತ್ತಿಗೆ ಪಡೆದ ಆನಂದ್ ಅವರು ನೀಡಿದ್ದ ಚೆಕ್ ಸಹ ಬೌನ್ಸ್ ಆಗಿದ್ದರೂ, ಅವರ ವಿರುದ್ದ ಯಾವುದೇ ಕಾನೂನು ಕ್ರಮಗಳನ್ನು ಜರುಗಿಸದೆ ಕೃಷ್ಣಕುಮಾರ್ ಸುಮ್ಮನಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಕೃಷ್ಣಕುಮಾರ್ ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಕಳೆದ ವರ್ಷ ಗುತ್ತಿಯನ್ನು ಯಶಸ್ವಿಯಾಗಿ ನಡೆಸಿದ್ದ ಚೇತನ್ ಆಗ್ರಹಿಸಿದ್ದಾರೆ.
ಗುತ್ತಿಗೆ ಹರಾಜು ಪ್ರಕ್ರಿಯೆ ನಡೆದು 12 ದಿನಗಳಾದರೂ ನಿಯಮಗಳ ಪ್ರಕಾರ ದೇವಾಲಯದ ಖಾತೆಗೆ ಜಮೆಯಾಗ ಬೇಕಿದ್ದ ಹಣ ಸಂದಾಯವಾಗದೆ ಇದ್ದರೂ ಅಧಿಕಾರಿಗಳು ಮಾತ್ರ ನಿಯಮ ಮೀರಿರುವ ಗುತ್ತಿಗೆದಾರರ ವಿರುದ್ದ ಮೌನವಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಕೂಡಲೆ ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು, ದಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತರು ಭ್ರಷ್ಟ ಅಧಿಕಾರಿ ಕೃಷ್ಣ ಅವರನ್ನು ಅಮಾನತ್ತಿನಲ್ಲಿಟ್ಟು ತನಿಖೆಗೆ ಆದೇಶಿಸ ಬೇಕೆಂದು ಹರಾಜು ಪಕ್ರಿ›ಯೆಯಲ್ಲಿದ್ದ ಮೋಹನ್ ಒತ್ತಾಯಿಸಿದರು.
ಅಧಿಕಾರಿಗೆ ಸೂಚನೆ: ಬನ್ನೇರುಘಟ್ಟ ದೇವಾಲಯದಲ್ಲಿ ನಡೆದಿರುವ ಸಂತೆ ಹರಾಜು ಪ್ರಕ್ರೀಯೆಯಲ್ಲಿ ಹಾಗೂ ಸ್ಥಳೀಯರ ದೂರುಗಳ ವಿಚಾರವಾಗಿ ಅಧಿಕಾರಿಗಳ ಬಳಿ ಸ್ಪಷ್ಠನೆ ಕೇಳಾಗಿದೆ. ಅಲ್ಲದೆ ಈಗಾಗಲೆ ಹರಾಜು ಪ್ರಕ್ರಿಯೆಯಲ್ಲಿ ಭಾವಹಿಸಿ ಅಂತಿಮ ಬಿಡ್ ದಾರರು ಆರೂಕಾಲು ಲಕ್ಷ ರೂ ಕಟ್ಟಿರುವುದರಿಂದ ಅವರನ್ನು ಕರೆದು ಕೂಡಲೆ ಬಾಕಿ ಹಣ ಕಟ್ಟಲು ಸೂಚಿಸಲು ಅಧಿಕಾರಿಗಳಿ ತಿಳಿಸಲಾಗಿದೆ ಎಂದು ತಹಸೀಲದ್ದಾರ ದಿನೇಶ್ ತಿಳಿಸಿದರು . ಹೆಚ್ಚು ಬಿಡ್ ಕೂಗಿರುವ ಬಿಡ್ ದಾರರಿಗೆ ಅಂತಿಮ ಅವಕಾಶ ನೀಡಿಲಾಗುವುದು ಆಗಲೂ ಕಟ್ಟಿಲ್ಲವಾದರೆ ಎರಡನೇ ಬಿಡ್ ದಾರರಿಗೆ ಅವಕಾಶ ನೀಡಲಾಗುವುದು ಎಂದು ಆನೇಕಲ್ ತಹಸೀಲ್ದಾರ್ ದಿನೇಶ್ ತಿಳಿಸಿದ್ದಾರೆ.
ಹರಾಜು ಮುಂದೂಡಿಕೆ: ಕಳೆದ 12 ದಿನಗಳಿಂದ ಸಂತೆ ಮೈದಾನದ ಹರಾಜು ನಲ್ಲಿ ಆಗುತ್ತಿರುವ ಗೊಂದಲಗಳ ನಡುವೆಯೂ ಚಪ್ಪಲಿ ಮತ್ತು ವಾಹನ ನಿಲ್ದಾಣದ ಇಂದು ಹರಾಜು ಕರೆಯಲಾಗಿತ್ತು. ಹರಾಜಿನಲ್ಲಿ ಭಾಗವಹಿಸಲು ಸಹ ಹಲವರು ಮುಂದೆ ಬಂದಿದ್ದರಾರೂ ಅಂತಿಮವಾಗಿ ಹರಾಜು ಮುಂದೂಡಲಾಗಿದೆ ಎಂಬ ಪತ್ರ ಗೋಡೆಗೆ ಹಾಕುತ್ತಿದ್ದನ್ನು ಗಮನಿಸಿದ ಸ್ಥಳೀಯರು ತೀವ್ರವಾಗಿ ಆಕ್ರೋಶಗೊಂಡು ಕಾರ್ಯನಿರ್ವಾಣಾಧಿಕಾರಿ ಮುಜರಾಯಿ ಇಲಾಖೆ ಇಲ್ಲಿ ಬೇಜಾಬ್ದಾರಿ ತನದಿಂದ ವರ್ತಿಸುತ್ತಿದೆ. ಈ ಬಗ್ಗೆ ಮುಜರಾಯಿ ಸಚಿವರು ಹಿರಿಯ ಅಧಿಕಾರಿಗಳು ಇಲ್ಲಿನ ನಡೆಯುತ್ತಿರುವ ದುರಾಡಳಿತದ ವಿರುದ್ದ ಕ್ರಮಕ್ಕೆ ಮುಂದಾಗ ಬೇಕೆಂದು ಆಗ್ರಸಿಹಿದರು.