Advertisement
ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಬೀನಾ ಅವರನ್ನು ಕರೆಸಿದ ಇಡಿ ಅಧಿಕಾರಿಗಳು, ಅವರಿಂದ ಯೋಜನೆಗೆ ಸಂಬಂಧಿಸಿದ ಲೆಕ್ಕದ ದಾಖಲೆ ಕೆದಕಿದ್ದಾರೆ. ಬಿಬಿಎಂಪಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ಗಳು ಹಾಗೂ 8 ವಲಯಗಳ ಮುಖ್ಯ ಅಭಿಯಂತರರನ್ನು ಬಿಬಿಎಂಪಿ ಕೇಂದ್ರ ಕಚೇರಿಗೆ ಕರೆಯಿಸಿ ಪ್ರಕರಣದ ಕುರಿತು ಕೂಲಂಕಷವಾಗಿ ಮಾಹಿತಿ ಕಲೆ ಹಾಕಲು ಇ.ಡಿ. ಮುಂದಾಗಿದೆ ಎಂದು ತಿಳಿದುಬಂದಿದೆ.
2016-19ರ ಅವಧಿಯಲ್ಲಿ ಬೊಮ್ಮನಹಳ್ಳಿ, ಆರ್.ಆರ್.ನಗರ, ಮಹದೇವಪುರ, ಯಲಹಂಕ, ದಾಸರಹಳ್ಳಿಯಲ್ಲಿರುವ 9 ವಿಧಾನಸಭಾ ಕ್ಷೇತ್ರದ 68 ವಾರ್ಡ್ಗಳಲ್ಲಿ 9,558 ಬೋರ್ವೆಲ್ ಕೊರೆಸಲಾಗಿದೆ. ಇದರ ಜತೆಗೆ 976 ನೀರು ಸಂಸ್ಕರಣ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಅಂದು ಲೆಕ್ಕ ತೋರಿಸಿದ್ದರು. ಆದರೆ 1 ಸಾವಿರಕ್ಕೂ ಕಡಿಮೆ ಕೊಳವೆಬಾವಿ ಕೊರೆಸಿ ಬಿಬಿಎಂಪಿ ಅಧಿಕಾರಿಗಳು ತಪ್ಪು ಲೆಕ್ಕ ಕೊಟ್ಟು ಕೋಟ್ಯಂತರ ರೂ. ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿತ್ತು. 2019ರಲ್ಲಿ ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದೂರು ನೀಡಿದ್ದರು. 10 ಕೋಟಿ ರೂ.ಗಿಂತ ಅಧಿಕ ಹಣ ವರ್ಗಾವಣೆ ವಹಿವಾಟು ನಡೆದರೆ ಆ ಪ್ರಕರಣದಲ್ಲಿ ಇಡಿ ತನಿಖೆ ಮಾಡುತ್ತದೆ. ಈ ಯೋಜನೆಯಲ್ಲಿ ಒಟ್ಟು 400 ಕೋಟಿ ರೂ.ಗೂ ಅಧಿಕ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಈ ಬಗ್ಗೆ ಇಸಿಐಆರ್ (ಪ್ರಕರಣ) ದಾಖಲಿಸಿಕೊಂಡು ಪ್ರಕರಣದ ತನಿಖೆ ಕೈಗೊಂಡಿದ್ದರು.