Advertisement

ED; ಅಕ್ರಮವಾಗಿ ಒಳನುಸುಳಿದ ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿ ಮೂವರ ಬಂಧನ

12:29 PM Nov 13, 2024 | Team Udayavani |

ಹೊಸದಿಲ್ಲಿ: ಬಾಂಗ್ಲಾದೇಶದಿಂದ ಜಾರ್ಖಂಡ್‌ಗೆ ಅಕ್ರಮ ಒಳನುಸುಳುವಿಕೆ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಶೋಧದ ವೇಳೆ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ ಮೂವರನ್ನು ಇಡಿ ಬಂಧಿಸಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.

Advertisement

ರೋನಿ ಮೊಂಡಲ್ ಮತ್ತು ಸಮೀರ್ ಚೌಧರಿ ಬಾಂಗ್ಲಾ ಪ್ರಜೆಗಳಾಗಿದ್ದರೆ, ಪಿಂಟು ಹಲ್ದಾರ್ ಭಾರತೀಯನಾಗಿದ್ದಾನೆ. ಭಾರತದಲ್ಲಿ ಅಕ್ರಮ ಮಾನವ ಕಳ್ಳಸಾಗಣೆಗೆ ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಬಾಂಗ್ಲಾದೇಶದ ಒಳನುಸುಳುವಿಕೆ ಪ್ರಕರಣದಲ್ಲಿ ಮೂವರನ್ನು ಮಂಗಳವಾರ ರಾತ್ರಿ ಪಶ್ಚಿಮ ಬಂಗಾಳದಲ್ಲಿ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಜಾರ್ಖಂಡ್‌ನ ಚುನಾವಣೆಗೆ ಒಳಪಟ್ಟಿರುವ 17 ಸ್ಥಳಗಳಲ್ಲಿ ಹುಡುಕಾಟ ನಡೆಸಿದೆ. ನಕಲಿ ಆಧಾರ್ ಕಾರ್ಡ್‌ಗಳು, ನಕಲಿ ಪಾಸ್‌ಪೋರ್ಟ್‌ಗಳು, ಅಕ್ರಮ ಶಸ್ತ್ರಾಸ್ತ್ರಗಳು, ಸ್ಥಿರ ಆಸ್ತಿ ದಾಖಲೆಗಳು, ನಗದು, ಆಭರಣಗಳು, ಪ್ರಿಂಟಿಂಗ್ ಪೇಪರ್ ಮತ್ತು ಯಂತ್ರಗಳು ಮತ್ತು ಆಧಾರ್ ಐಡಿ ನಕಲಿ ಮಾಡಲು ಬಳಸಲಾದ ಖಾಲಿ ಪ್ರೊಫಾರ್ಮಾಗಳಂತಹ ವಸ್ತುಗಳನ್ನು ದಾಳಿಯ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಫೆಡರಲ್ ಏಜೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next