Advertisement

ವೇತನದಲ್ಲಿ ಅಕ್ರಮ: ತನಿಖೆಗೆ ಆದೇಶ

11:39 AM Dec 22, 2019 | Suhan S |

ಜಮಖಂಡಿ: ನಗರದ ಎಪಿಎಂಸಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಆಶ್ರಯದ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕಾ ಕೇಂದ್ರಕ್ಕೆ ತಾಪಂ ಅಧ್ಯಕ್ಷೆ ಸವಿತಾ ಕಲ್ಯಾಣಿ ನೇತೃತ್ವದ ಜನಪ್ರತಿನಿಧಿಗಳು ಹಾಗೂ ಸಿಡಿಪಿಒ ಸಾಹೇಬಗೌಡ ಜಂಝರವಾಡ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಹಮಾಲರಿಗೆ ಸಮರ್ಪಕವಾಗಿ ವೇತನ ನೀಡದಿರುವಿಕೆ ಹಾಗೂ ಆಹಾರ ಪದಾರ್ಥಗಳ ಗುಣಮಟ್ಟತೆ ಪರೀಕ್ಷಿಸಿ ಎನ್‌ಜಿಒ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಇಲಾಖೆ ತನಿಖೆ ಹಾಗೂ ಮೇಲಧಿಕಾರಿಕಾರಿಗಳಿಗೆ ದೂರು ನೀಡಲು ಆದೇಶಿಸಲಾಯಿತು.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಧೀನದಲ್ಲಿರುವ ಎನ್‌ಜಿಒ ಸಂಸ್ಥೆ ಸಿಬ್ಬಂದಿ ಅಕ್ರಮ, ಹಮಾಲರಿಗೆ ಸಮರ್ಪಕವಾಗಿ ವೇತನ ನೀಡದೇ ಸತಾಯಿಸುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಂಡ ಭೇಟಿ ಪರಿಶೀಲನೆ ನಡೆಸಿತು. ಎನ್‌ಜಿಒ ನೀಡುವ ಆಹಾರ ಪದಾರ್ಥಗಳನ್ನು ಅಂಗನವಾಡಿ ಕೇಂದ್ರಕ್ಕೆ ಆಹಾರ ಧಾನ್ಯ ಪೂರೈಕೆ ಮಾಡುವ ವಾಹನದ ಬಾಡಿಗೆ ಮತ್ತು ಹಮಾಲರ

ವೇತನದಲ್ಲಿ ಅಕ್ರಮ ನಡೆದಿದ್ದು, ಪ್ರಸ್ತಾವನೆ ಮಾಡಿದ ತಾಪಂ ಇಒ ಸಂಜಯ ಹಿಪ್ಪರಗಿ ಕೂಡಲೇ ಇಲಾಖೆ ತನಿಖೆ ಹಾಗೂ ಪ್ರಸಂಗ ಬಂದರೆ ಪೊಲೀಸರಿಗೆ ದೂರು ನೀಡಲಾಗುವುದು. ಅಲ್ಲದೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಆದೇಶಿಸುವುದಾಗಿ ಹೇಳಿದರು.

ಎನ್‌ಜಿಒ ಸಂಸ್ಥೆ ಸರ್ಕಾರದ ಲಕ್ಷಾಂತರ ಹಣವನ್ನು ಅಕ್ರಮ ಮಾಡಿ, ಭ್ರಷ್ಟಾಚಾರ ನಡೆಸಿದ್ದನ್ನು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರ ಗಮನಕ್ಕೆ ತಂದು ಅಕ್ರಮದಲ್ಲಿ ಭಾಗಿಯಾದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಎಂದು ತಾಪಂ ಅಧ್ಯಕ್ಷೆ ಸವಿತಾ ಕಲ್ಯಾಣಿ ಹೇಳಿದರು.

ಎನ್‌ಜಿಒದಿಂದ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುತ್ತಿರುವ ಬೆಲ್ಲ ಪೂರೈಕೆ ಮಾಡದೇ 36ಲಕ್ಷ ರೂ. ಗಳನ್ನು ಇಲ್ಲಿನ ಸಿಬ್ಬಂದಿ ಲಪಟಾಯಿಸಿದ್ದಾರೆ ಎಂದು ಹಮಾಲರ ಸಂಘದ ಶ್ರೀಶೈಲ ಹಿರೇಮಠ, ಹಣಮಂತ ಸರಪಳಿ, ಗಣಪತಿ ಮಾಳಿ, ಶ್ರೀಶೈಲ ಕಡಪಟ್ಟಿ, ಲಕ್ಷ್ಮಣ ಸರಪಳಿ ಹಲವರು ಅಧಿಕಾರಿಗಳಿಗೆ ದೂರು ನೀಡಿದರು. ಜಿಪಂ ಸದಸ್ಯ ಬಸವರಾಜ ಬಿರಾದಾರ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next