Advertisement
ಸರ್ಕಾರಿ ಜಾಗದಲ್ಲಿ ಮನೆಕಟ್ಟಿ ಕೊಳ್ಳಬಾರದು, ಒಂದು ವೇಳೆ ಕಟ್ಟಿದರೆ ನೆಲಸಮಗೊಳಿಸುವುದಾಗಿ ಹೇಳಿದ್ದರು. ಆದರೂ ಕೆಲವರು ಅಧಿಕಾರಿಗಳ ಮಾತಿಗೆ ಬೆಲೆ ಕೊಡದೆ, ರಾತ್ರೋರಾತ್ರಿ ಮನೆ ಕಟ್ಟಲು ಪ್ರಾರಂಭಿಸಿದ್ದರು. ಹೀಗಾಗಿ ಮಂಗಳವಾರ ಉಪವಿಭಾಗಾಧಿಕಾರಿಗಳ ಸಮ್ಮುಖದಲ್ಲಿ, ತಹಶೀಲ್ದಾರ್ ನಾಗವೇಣಿ ನೇತೃತ್ವದಲ್ಲಿ ತೆರವು ಮಾಡಲಾಯಿತು.
Related Articles
Advertisement
ಅನುಮಾನ: ಇಒ ಕೃಷ್ಣಪ್ಪನವರು ಇದಕ್ಕೂ ಮುಂಚೆ ಕೆ.ಜಿ.ಹಳ್ಳಿ ಗ್ರಾ.ಪಂ. ಕಚೇರಿಯಲ್ಲಿ ಕೆ.ಜಿ.ಹಳ್ಳಿ ಗ್ರಾಮದ ಖಾತೆ ಪುಸ್ತಕಗಳನ್ನು ಪರಿಶೀಲಿಸಿದಾಗ ಬಹುತೇಕ ಲೋಪದೋಷಗಳು ಕಂಡು ಬಂದಿವೆ. ಕ್ರಮ ಸಂಖ್ಯೆಗಳಲ್ಲಿ ಅನೇಕ ವ್ಯತ್ಯಾಸವಾಗಿದೆ. ಸ್ವತ್ತಿನ ಬಾಬಿನಲ್ಲಿ ಕೆಲವು ಕಡೆ ಕ್ರಮ ಸಂಖ್ಯೆಗಳ ಹೆಸರಿಗೂ ತಾಳೆಯಾಗುತ್ತಿಲ್ಲ ಮತ್ತು ಮನೆ ನಿರ್ಮಿ ಸಿದ ಜಾಗದಲ್ಲಿ ಫಲಾನು ಭವಿಗಳು ಹಾಜರು ಪಡಿಸಿದ ನಮೂನೆ 9, 10 ದಾಖಲೆಗಳು ಪಂಚಾಯ್ತಿ ಖಾತೆ ಪುಸ್ತಕ ದಲ್ಲಿ ಕೈಬಿಟ್ಟಿರುತ್ತದೆ. ಇದರಿಂದ ಅಕ್ರಮ ವಾಗಿದೆ ಎಂಬುದು ಅನುಮಾನಕ್ಕೆ ಎಡೆಮಾಡಿದೆ. ಈ ಸ್ವತ್ತು ಮಾಡಿರುವುದು ಸಹ ಅವುಗಳಲ್ಲಿ ಅಕ್ರಮವಾಗಿದೆ ಎಂದು ವಿವರಿಸಿದರು.
ತಹಶೀಲ್ದಾರ್ ನಾಗವೇಣಿ ಮಾತನಾಡಿ, ಈ ಸರ್ವೆ ನಂಬರಿನಲ್ಲಿ ಸರ್ಕಾರಿಇಲಾಖೆಗಳ ಕೆಲವು ಕಚೇರಿಗಳಿಗೆ ಜಾಗಮೀಸಲಾಗಿದ್ದು, ಅವುಗಳಿಗೆ ಸರ್ವೆ ಕಾರ್ಯದಲ್ಲಿ ಹದ್ದುಬಸ್ತು ಪೂರ್ಣಗೊಂಡ ನಂತರ ಖಾಲಿಜಾಗ ಉಳಿದರೆ ಅರ್ಹ ಕಡುಬಡವರಿಗೆ ಗ್ರಾ.ಪಂ. ಶಿಫಾರಸು ಮಾಡಿದ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ನಿವೇಶನ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ನೆರೆದಿದ್ದವರಿಗೆ ತಿಳಿಸಿದರು.
ಕಾರ್ಯಾ ಚರಣೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ನಾಗರಾಜ್, ಮಾಸ್ತಿ ಪಿಎಸ್‌ಐ ವಸಂತಕುಮಾರ್, ತಾಪಂ ಸದಸ್ಯೆ ಕಾಂತಮ್ಮ, ಆರ್.ಐ ಮುನಿಸ್ವಾಮಿಶೆಟ್ಟಿ, ವಿಎಗಳಾದ ಸುಧಾ ಮಣಿ, ರಘು, ಪವನ್, ಗುರುದತ್, ವಿನಯ್, ಉಮೇಶ್, ರಾಹುಲ್ ಜೊತೆಗಿದ್ದರು.