Advertisement
ವಿರೂಪಾಪೂರ ಗಡ್ಡಿಯಲ್ಲಿದ್ದ ರೆಸಾರ್ಟ್ಗಳನ್ನು ಸ್ಮಾರಕ ಸಂರಕ್ಷಣೆಗಾಗಿ ಸುಪ್ರೀಂಕೋರ್ಟ್ ನಿರ್ದೇಶನದಂತೆ 2018ರಲ್ಲಿ ತೆರವುಗೊಳಿಸಿದ ನಂತರ ಸಾಣಾಪೂರ, ಆನೆಗೊಂದಿ, ಹನುಮನಹಳ್ಳಿ , ಅಂಜಿನಳ್ಳಿ, ಜಂಗ್ಲಿ, ಕಡೆಬಾಗಿಲು ಗ್ರಾಮಗಳಲ್ಲಿ ಅನಧಿಕೃತವಾಗಿ ರೈತರ ಹೊಲ-ಗದ್ದೆಗಳಲ್ಲಿ ಕೆಲವಡೆ ರೈತರು ಇನ್ನೂ ಕೆಲವೆಡೆ ಭೂಮಿ ಲೀಜ್ ಪಡೆದು ಹೊಟೇಲ್‌ಗಳನ್ನು ಆರಂಭಿಸಲಾಗಿತ್ತು. ಇದನ್ನು ಖಂಡಿಸಿ ಕೆಲ ಕರವೇ ಸಂಘಟನೆಗಳು ಸೇರಿ ಸಂಘ ಸಂಸ್ಥೆಯವರು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿ ಕೂಡಲೇ ಅನಧಿಕೃತ ಹೊಟೇಲ್‌ಗಳನ್ನು ಬಂದ್ ಮಾಡಿಸುವಂತೆ ಆಗ್ರಹಿಸಿದ್ದವು. ನಂತರ ಜಿಲ್ಲಾಡಳಿತ ಎಲ್ಲಾ ಅನಧಿಕೃತ(ಭೂಮಿಯನ್ನು ಕೃಷಿಯೇತರವಾಗಿ ಪರಿವರ್ತಿಸಿಕೊಳ್ಳದೇ ವಾಣಿಜ್ಯವಾಗಿ ಬಳಕೆ ಮಾಡುವುದು) ಹೊಟೇಲ್‌ಗಳನ್ನು ಬೀಜ ಜಡಿದು ಸೀಜ್ ಮಾಡಿದ್ದರು. ಆನೆಗೊಂದಿ ಭಾಗದ ಗ್ರಾಮಸ್ಥರು ಮತ್ತು ಹೊಟೇಲ್ ಮಾಲೀಕರು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ ಸಲ್ಲಿಸಿ ಈಗಿರುವ ನಿಯಮಗಳಲ್ಲಿ ಬದಲಿಸಿ ಆನೆಗೊಂದಿ ಭಾಗದಲ್ಲಿ ನಿಯಮಬದ್ಧವಾಗಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರಿಂದ ಫಾರ್ಮಾಹೌಸ್ ಮಾದರಿಯಲ್ಲಿ ಕೃಷಿಕರು ತಮ್ಮ ಭೂಮಿಯ ಒಂದಿಷ್ಟು ಜಾಗದಲ್ಲಿ ವ್ಯಾಪಾರ ನಡೆಸಲು ಅವಕಾಶಗಳಿರುವ ಕುರಿತು ಜಿಲ್ಲಾಡಳಿತದ ಮೂಲಕ ಸರಕಾರ ವರದಿ ಪಡೆಯುವ ಕುರಿತು ವರದಿಯನ್ನು ಕೇಳಿತ್ತು.
ವಹಿಸಿದ್ದರಿಂದ ಗುರುವಾರ ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಪ್ರತಿ ಹೊಟೇಲ್‌ಗೂ ತೆರಳಿ ಸ್ವಯಂ ತೆರವುಗೊಳಿಸಿಕೊಳ್ಳುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಮೀಷನರ್ ಸಿದ್ದರಾಮೇಶ, ಕೊಪ್ಪಳ ಎಸಿ ಬಸವಣೆಪ್ಪ ಕಳಶೆಟ್ಟಿ, ತಹಸೀಲ್ದಾರ್ ಯು.ನಾಗರಾಜ, ಅರಣ್ಯಾಧಿಕಾರಿ ಶಿವರಾಜ್ ಮೇಟಿ, ಸಿಪಿಐ ಮಂಜುನಾಥ , ಪಿಡಿಒಗಳಾದ ಬಸವನಗೌಡ, ಕೆ.ಕೃಷ್ಣಪ್ಪ, ಅಬಕಾರಿ, ಪ್ರವಾಸೋದ್ಯಮ,ಜೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿಗಳು, ಕಂದಾಯ ನಿರೀಕ್ಷಕರು,ಗ್ರಾಮಲೆಕ್ಕಾಧಿಕಾರಿಗಳಿದ್ದರು.
Related Articles
-ಸಿದ್ದರಾಮೇಶ ಆಯುಕ್ತರು ಹಂಪಿ ಅಭಿವೃದ್ಧಿ ಪ್ರಾಧಿಕಾರ.
Advertisement
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಂಪಿ ಭಾಗದ 14 ಗ್ರಾಮಗಳು ಬರುತ್ತಿದ್ದು ಅಲ್ಲಿಯ ಜನಪ್ರತಿನಿಧಿಗಳ ಆಶೀರ್ವಾದಿಂದ ಅನಧಿಕೃತವಾಗಿ ನೂರಕ್ಕೂ ಹೆಚ್ಚು ರೆಸಾರ್ಟ್ ಹೊಟೇಲ್‌ಗಳು ನಡೆಯುತ್ತಿವೆ. ನಿತ್ಯವೂ ಆನ್‌ಲೈನ್ ಮೂಲಕ ರೂಂಗಳು ಬುಕ್ ಮಾಡಿಕೊಂಡು ಅಲ್ಲಿಯ ವ್ಯಾಪಾರಸ್ಥರು ದುಡಿಯುತ್ತಿದ್ದಾರೆ. ಆನೆಗೊಂದಿ ಭಾಗದ ಹೊಟೇಲ್‌ಗಳು ಮಾತ್ರ ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೊಪ್ಪಳ ಜಿಲ್ಲಾಡಳಿತಕ್ಕೆ ಕಾಣುತ್ತಿದ್ದು ಪದೇ ಪದೇ ಜೆಸಿಬಿ ಮೂಲಕ ತೆರವುಗೊಳಿಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಸರಕಾರ ಮತ್ತು ಸ್ವತಹ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಆನೆಗೊಂದಿ ಭಾಗದಲ್ಲಿ ಫಾರ್ಮಾಹೌಸ್ ಮೂಲಕ ವ್ಯಾಪಾರಕ್ಕೆ ರೈತರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹಲವು ಭಾರಿ ಹೇಳಿಕೆ ನೀಡಿದರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ಹಂಪಿ-ಆನೆಗೊಂದಿ ಭಾಗಗಳ ಮಧ್ಯೆ ಸಚಿವ ಆನಂದಸಿಂಗ್ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಆನೆಗೊಂದಿ ಭಾಗಕ್ಕೆ ಆಗಮಿಸುವ ಪ್ರವಾಸಿಗರನ್ನು ಹಂಪಿ ಭಾಗದ ಹೊಟೇಲ್,ರೆಸಾರ್ಟ್ಗಳಲ್ಲಿ ಉಳಿಸಿಕೊಳ್ಳಲು ಅನಧಿಕೃತ ನೆಪದಲ್ಲಿ ನಮ್ಮ ಭಾಗದ ಪ್ರವಾಸೋದ್ಯಮವನ್ನು ನಾಶ ಮಾಡಲಾಗುತ್ತಿದ್ದು ಇದು ಖಂಡನೀಯವಾಗಿದೆ.-ಎ.ಸಿ.ಎಂ. ರೆಡ್ಡಿ ಹೊಟೇಲ್ ಮಾಲೀಕ.