Advertisement

ಅಕ್ರಮ ಗ್ಯಾಸ್‌ ರೀ ಫಿಲ್ಲಿಂಗ್‌: ಆರೋಪಿ ಬಂಧನ

11:47 AM Nov 04, 2018 | |

ಬೆಂಗಳೂರು: ಅಕ್ರಮವಾಗಿ ಗ್ಯಾಸ್‌ ರೀ ಫಿಲ್ಲಿಂಗ್‌ ಮಾಡುತ್ತಿದ್ದ ಆರೋಪಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಹೆಬ್ಟಾಳದ ಕನಕನಗರ ನಿವಾಸಿ ವಿನೋದ್‌ (21) ಬಂಧಿತ. ಆರೋಪಿ ಚಿಕ್ಕಜಾಲದ ಕೋಡಗಲಹಟ್ಟಿಯ ನೀಲಗಿರಿ ತೋಪಿನಲ್ಲಿನ ಶೆಡ್‌ವೊಂದರಲ್ಲಿ ಗೃಹಬಳಕೆಯ ಸಿಲಿಂಡರ್‌ಗಳಿಂದ ಸಣ್ಣ -ಸಣ್ಣ ಸಿಲಿಂಡರ್‌ಗಳಿಗೆ ಅನಿಲ ತುಂಬಿಸಿ ಅವುಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ.

Advertisement

ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಈತನಿಂದ ಗ್ಯಾಸ್‌ ರೀ ಫಿಲ್ಲಿಂಗ್‌ಗೆ ಬಳಸುವ ಮೋಟಾರ್‌ ಪಂಪ್‌, ಪೈಪ್‌, ತೂಕದ ಯಂತ್ರ, 14.5 ಕೆ.ಜಿ. ತೂಕದ 12 ಸಿಲಿಂಡರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next