- ಎಚ್.ಶಿವರಾಜು
Advertisement
ಮಂಡ್ಯ: ಜಿಲ್ಲೆಯಲ್ಲಿ ಬಹುತೇಕ ಕಲ್ಲು ಗಣಿಗಾರಿಕೆಗೆ ಸ್ಫೋಟಕ ಬಳಕೆಗೆ ಅನುಮತಿಯೇ ನೀಡಿಲ್ಲ. ಆದರೂ ಅಕ್ರಮವಾಗಿ ಸ್ಫೋಟ ನಡೆಸಲಾಗುತ್ತಿದೆ. ಕೆಆರ್‌ಎಸ್ ಜಲಾಶಯದ 20 ಕಿ.ಮೀ. ವ್ಯಾಪ್ತಿಯಲ್ಲಿ ಸ್ಫೋಟಕ ಬಳಸದಂತೆ ಸರ್ಕಾರ, ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಕೆಲವರು ಅಕ್ರಮವಾಗಿ ಸ್ಫೋಟ ನಡೆಸುತ್ತಿದ್ದಾರೆ.
Related Articles
Advertisement
ಸ್ಫೋಟಕ್ಕೆ ಅನುಮತಿಗೆ 50ಕ್ಕೂ ಹೆಚ್ಚು ಅರ್ಜಿ: ಕಲ್ಲು ಹೊಡೆಯಲು ಸ್ಫೋಟಕ ಬಳಸಲು ಅನುಮತಿ ಕಡ್ಡಾ ಯವಾಗಿದೆ. ಕೇಂದ್ರದ ಗಣಿ ಸುರಕ್ಷತೆಯ ಪ್ರಧಾನ ನಿರ್ದೇಶಕರಿಂದ(ಡಿಜಿಎಂಎಸ್) ಅನುಮತಿ ಪಡೆಯಬೇಕಾಗಿದೆ. ಆದರೆ ಇದುವರೆಗೂ ಜಿಲ್ಲೆಯ ಯಾವುದೇ ಗಣಿ, ಕ್ವಾರೆಗಳಲ್ಲಿ ಸ್ಫೋಟ ನಡೆಸಲು ಅನುಮತಿ ನೀಡಿಲ್ಲ. ಹಿಂದೆ ಜಿಲ್ಲಾಧಿಕಾರಿಗಳು ನೀಡುತ್ತಿದ್ದರು. ಆಗ 2 ಗಣಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಮೆಗ್ಗರ್ ಸ್ಫೋಟ ನಡೆಸಲು ಅನುಮತಿ ನೀಡುವಂತೆ ಸುಮಾರು 50ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೆ ಯಾವುದಕ್ಕೂ ಇನ್ನೂ ಅನುಮತಿ ಸಿಕ್ಕಿಲ್ಲ. ಸ್ಫೋಟಕಗಳ ವಶ: ಅಕ್ರಮವಾಗಿ ಸ್ಫೋಟ ಮಾಡಲಾಗುತ್ತಿದೆ ಎಂಬ ಗ್ರಾಮಸ್ಥರು, ರೈತರ ದೂರಿನ ಆಧಾರದ ಮೇಲೆ ಗಣಿ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗಾಗ್ಗೆ ದಾಳಿ ನಡೆಸಿ ಮೆಗ್ಗರ್ ಬ್ಲಾಸ್ಟ್‌ಗೆ ಬಳಸುವ ಕಂಪ್ರಸರ್ ಯಂತ್ರಗಳು, ಬೋರ್ ಬ್ಲಾಸ್ಟ್‌ಗೆ ಬಳಸುವ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ಹಂಗರಹಳ್ಳಿ ಕಲ್ಲು ಗಣಿ ಮೇಲೆ ದಾಳಿ ನಡೆಸಿ ಬೋರ್ ಬ್ಲಾಸ್ಟ್‌ಗೆ ಬಳಸುತ್ತಿದ್ದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿತ್ತು.
ಪೊಲೀಸರ ಕಾರ್ಯಾಚರಣೆ: ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಕಲ್ಲುಗಣಿಗಳಲ್ಲಿ ಸ್ಫೋಟ ನಡೆದ ಘಟನೆಯಿಂದ ಎಚ್ಚೆತ್ತ ಜಿಲ್ಲಾ ಪೊಲೀಸ್ ಇಲಾಖೆ ಆಗ ಕಲ್ಲುಗಣಿಗಳ ಮೇಲೆ ದಾಳಿ ನಡೆಸಿ, ಜಿಲೆಟಿನ್, ಸ್ಫೋಟ ನಡೆಸಲು ಬಳಸುತ್ತಿದ್ದ ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ, ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಡಿಟೋನೇಟರ್, ಜಿಲೆಟಿನ್‌ಗಳನ್ನು ಸಾಗಿಸುತ್ತಿದ್ದವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು. ಕೆಆರ್‌ಎಸ್ ಜಲಾಶಯಕ್ಕೆ ಸಮೀಪ ಸ್ಫೋಟಕ ನಡೆಸದಂತೆ ಜಿಲ್ಲಾಡಳಿತಹೇಳುತ್ತೆ. ನಂತರ ಬನ್ನಂಗಾಡಿ ಹಾಗೂ ಹೊನಗಾನಹಳ್ಳಿ ಎರಡು ಗಣಿಗಳಿಗೆ ಸ್ಫೋಟಕ ನಡೆಸಲು ಅನುಮತಿ ನೀಡಲಾಗಿದೆ.
ಇವು ಕೇವಲ ಕೆಆರ್‌ಎಸ್ ಜಲಾಶಯಕ್ಕೆ 5 ಕಿ.ಮೀ ದೂರದಲ್ಲಿವೆ. ಅಧಿಕಾರಿಗಳು ನಾಮ್‌ಕಾವಸ್ಥೆಗೆ ಹೋಗಿ ದಾಳಿ ನಡೆಸುತ್ತಾರೆ. ಮೆಗ್ಗರ್ ಹಾಗೂ ಬೋರ್ ಬ್ಲಾಸ್ಟ್‌ನ ಯಂತ್ರಗಳನ್ನು ವಶಪಡಿಸಿಕೊಳ್ಳುತ್ತಾರೆ. ನಂತರ ದಂಡ ವಿಧಿಸಿ ಬಿಟ್ಟು ಕಳುಹಿಸುತ್ತಾರೆ. ಮತ್ತೆ ಅವರು ಬ್ಲಾಸ್ಟ್‌ಗೆ ಬಳಸುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ ಹೇಳುತ್ತಾರೆ.