ಮoಡ್ಯ: ಅಕ್ರಮವಾಗಿ ಜಿಲೆಟಿನ್ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಡ್ಯ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿರುವ ಘಟನೆ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ನಡೆದಿದೆ.
ಹಲಗೂರಿನ ಮುಸ್ಲಿಂ ಬ್ಲಾಕ್‌ನ ನಿವಾಸಿ ಮುಬಾರಕ್ ಪಾಷ ಬಂಧಿತ ಆರೋಪಿ. ಈತ ಫರ್ನಿಚರ್ ಅಂಗಡಿ ನಡೆಸುತ್ತಿದ್ದು, ಅಕ್ರಮವಾಗಿ ಸ್ಫೋಟಕಗಳನ್ನು ಸಾಗಾಟ ಮಾಡಲು ಯತ್ನಿಸಿದ್ದಾನೆ. ಇದರ ಖಚಿತ ಮಾಹಿತಿ ಮೇರೆಗೆ ಮಂಡ್ಯ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಬoಧಿತನಿoದ 125 ಗ್ರಾಂ ತೂಕದ 400 ಜಿಲೆಟಿನ್ ಕಡ್ಡಿಗಳು, 500 ಪೀಸ್ ಎಲೆಕ್ಟ್ರಿಕ್ ಡಿಟೋನೇಟರ್‌ಗಳು, 50 ಕೆಜಿ ಅಮೋನಿಯಂ ನೈಟ್ರೇಟ್ ಹಾಗೂ ಒಂದು ಬೈಕ್‌ನಲ್ಲಿ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮಂದಿರ ದೇಣಿಗೆ: ಬೆಳ್ಳಿ ಇಟ್ಟಿಗೆ ಬೇಡ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮನವಿ
ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಇನ್ಸ್ ಪೆಕ್ಟರ್ ಹೇಮಂತ್‌ಕುಮಾರ್, ಎಚ್.ಕೆ.ರುದ್ರಪ್ಪ, ಕೆ.ಎಸ್.ಮಹೇಂದ್ರ, ವಿನಯ್‌ಕುಮಾರ್, ಅಭಿಲಾಷ್ ಇದ್ದರು.