ಬೆಳಗಾವಿ: ನಿಯಮಗಳನ್ನು ಉಲಂಘಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 4 ಲಕ್ಷ ರೂ. ಮೌಲ್ಯದ 6.675 ಟನ್ ಬಾರಿ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಲಾಗಿದೆ.
ಚಿಕ್ಕೋಡಿ ತಾಲೂಕಿನ ಬೊಬಲವಾಡ ಗ್ರಾಮದ ರಮೇಶ ರಾಯಪ್ಪ ಲಕ್ಕೊಟಿ, ರಾಜು ಈಶ್ವರ ಶಿರಗಾಂವಿ, ಮುಗಳಿ ಗ್ರಾಮದ ಅರುಣ ಶ್ರೀಶೈಲ ಮಠದ, ಸ್ಫೋಟಕ ವಸ್ತುಗಳ ಮ್ಯಾಗಜಿನ್ ಹೋಲ್ಡರ್ ವಿನಯ ಟ್ರೇಡರ್ಸ್ ನ ವಿನಯ ಸುಭಾಷ ಕಿನ್ನವರ ಎಂಬಾತರನ್ನು ಬಂಧಿಸಲಾಗಿದೆ. ತಾಲೂಕಿನ ಹೊನಗಾ ಗ್ರಾಮದ ಸ್ಪೂರ್ತಿ ಧಾಬಾ ಬಳಿ ಟ್ಯಾಂಕರ್ ಹಾಗೂ ಬೋಲೆರೋ ವಾಹನ ತಪಾಸಣೆ ನಡೆಸಿದಾಗ 4 ಲಕ್ಷ ಮೌಲ್ಯದ 6.675 ಟನ್ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮೆಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಕತಿ ಪೊಲೀಸ್ ಇನ್ಸಪೆಕ್ಟರ್ ಹಳ್ಳೂರ ನೇತ್ರತ್ವದ ತಂಡವು ಸ್ಪೋಟಕ ನಿಯಮಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯ ವಾಗಿ ಹಾಗೂ ಮಾನವ ಪ್ರಾಣಕ್ಕೆ ಅಪಾಯವಾಗುವಂತೆ ಸಾಗಿಸುತ್ತಿದ್ದಾಗ ದಾಳಿ ನಡೆಸಲಾಗಿದೆ. ವಶಕ್ಕೆ ಪಡೆದ ಸ್ಪೋಟಕ ವಸ್ತುಗಳನ್ನು ಕಾಕತಿ ವ್ಯಾಪ್ತಿಯ ನಿಂಗ್ಯಾನಟ್ಟಿಯ ಸ್ಪೋಟಕ ಮ್ಯಾಗಜೀನ್‌ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಈ ಕುರಿತು ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಳ್ಳೂಟಿ ಗೇಟ್ ಬಳಿ ನೀಲಗಿರಿ ತೋಪಿನಲ್ಲಿ ಬೆಂಕಿ ಅವಘಡ : ಬೆಂಕಿ ನಂದಿಸಲು ಹರಸಾಹಸ