ಬಂಗಾರಪೇಟೆ: ತಾಲೂಕಿನಲ್ಲಿ ಕಟ್ಟಡ ಕಾರ್ಮಿಕರಿಗೆ ವಿತರಿಸಲು ಸರ್ಕಾರದಿಂದ ಬಿಡುಗಡೆಯಾಗಿದ್ದ ಸಲಕರಣೆಗಳು ಖಾಸಗಿ ವ್ಯಕ್ತಿಯ ಗೋದಾಮಿನಲ್ಲಿ ಪತ್ತೆಯಾಗಿದೆ.
ಪಟ್ಟಣದ ಕಾರ್ಮಿಕ ಇಲಾಖೆಯಲ್ಲಿ ಸುಮಾರು 800ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ನೀಡಲು ಸಲಕರಣೆಗಳ ಕಿಟ್‌ಗಳು ಕಾರ್ಮಿಕರಿಗೆ ವಿತರಣೆ ಮಾಡದೆ ಅಕ್ರಮವಾಗಿ ಕಾಂಗ್ರೆಸ್ ಮುಖಂಡರಿಗೆ ಸೇರಿದ ಗೋದಾಮಿನಲ್ಲಿ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ.
ಕಾರ್ಮಿಕ ಇಲಾಖೆಯಲ್ಲಿ ಹೊಂಬೆಳಕು ಕಟ್ಟಡ ಕಾರ್ಮಿಕರ ಸಂಘದ ಮಾಲೀಕರ ಭರತ್ ಎಂಬುವವರಿಗೆ ಸೇರಿದ ಗೋದಾ ಮಿನಲ್ಲಿ ಕಾರ್ಮಿಕರ ಸಲಕರಣೆಗಳ ಬಚ್ಚಿಟ್ಟದ್ದನ್ನು ಪತ್ತೆ ಹಚ್ಚಲಾಗಿದೆ.
ಕಾರ್ಮಿಕ ಇಲಾಖೆಗೆ ಸೇರಿದ ಸಲಕರಣಿ ಗಳನ್ನು ಬಚ್ಚಿಟ್ಟಿರುವುದು ವಿವಾದಕ್ಕೆ ಕಾರಣ ವಾಗಿದ್ದು, ಭರತ್ ಎಂಬುವವರು ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಮುಖಂಡರಾಗಿದ್ದು, ಕಳೆದ ವರ್ಷ ಕಟ್ಟಡ ಕಾರ್ಮಿಕರಿಗೆ ಕೊರೊನಾದಿಂದ ಮುಕ್ತರಾ ಗಲು ಬೂಸ್ಟರ್ ಪೌಡರ್ ಸೇರಿದಂತೆ ಕಿಟ್ ಗಳು, ತಾಲೂಕಿನಲ್ಲಿ ನೋಂದಾಯಿತ ವಿವಿಧ ಕಸಬುಗಳ ಕಾರ್ಮಿಕರಿಗೆ ಸಲಕರಣಿಗಳನ್ನು ವಿತರಣೆ ಮಾಡಲು ಬಂದಿರುವ ಕಿಟ್ ಗಳನ್ನು ಗೌಪ್ಯವಾಗಿ ಇಡಲಾಗಿದ್ದು, ಭರತ್ ಎಂಬುವವರು ಪ್ರತಿ ಕಿಟ್ 500 ರೂ.ಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಬಂಗಾರಪೇಟೆ ಪೊಲೀಸರು ಭರತ್ ಎಂಬವನನ್ನು ವಿಚಾರಣೆ ನಡೆಸಿದ್ದಾರೆ. ನಂತರ ತಾ. ಕಾರ್ಮಿಕ ಇಲಾಖೆ ಅಧಿಕಾರಿ ರೇಣುಕಾ ಪ್ರಸನ್ನ ಪೊಲೀಸ್ ಠಾಣೆಗೆ ಭೇಟಿ ನೀಡಿ ವರದಿ ನೀಡಿದ್ದಾರೆ. ಕಾರ್ಮಿಕ ಇಲಾಖೆ ಗಮನಕ್ಕೆ ತಂದು ಭರತ್ ಎಂಬುವವರಿಗೆ ಸೇರಿದ ಗೋದಾಮಿನಲ್ಲಿ ಇಡಲಾಗಿದೆ ಎಂದು ಸಮಜಾಯಿಸಿ ನೀಡಲಾಗಿದೆ ಎನ್ನಲಾಗಿದೆ.
2021-22ನೇ ಸಾಲಿನಲ್ಲಿ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ತಮ್ಮ ಕಸಬು ನಿರ್ವಹಣೆಗೆ ಸಹಾಯವಾಗಿ ಕಿಟ್‌ಗಳು ಬಂದಿದ್ದು, ಪಟ್ಟಣದ ಎಪಿ ಎಂಸಿಯಲ್ಲಿ ಕಟ್ಟಡದ ಅಭಾವ ಇರುವುದರಿಂದ ವಿಧಿಯಿಲ್ಲದೇ ಹೊಂಬೆಳಕು ಕಟ್ಟಡ ಕಾರ್ಮಿಕರ ಸಂಘದ ವಶಕ್ಕೆ ನೀಡಿದ್ದು, ತಾಲೂಕಿನಲ್ಲಿ ಅರ್ಜಿ ಸಲ್ಲಿಸಿದ ಕೂಲಿ ಕಾರ್ಮಿಕ ರಿಗೆ ಸೀನಿಯಾರಿಟಿ ಪ್ರಕಾರ ವಿತರಣೆಗೆ ಅವಕಾಶ ನೀಡಲಾಗಿದೆ. ಅಕ್ರಮ ವಾಗಿ 500 ರೂ.ಗೆ ಮಾರಾಟ ಮಾಡಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು.
-ರೇಣುಕಾ ಪ್ರಸನ್ನ, ತಾಲೂಕು ಕಾರ್ಮಿಕ ಅಧಿಕಾರಿಗಳು, ಬಂಗಾರಪೇಟೆ