ದಾಂಡೇಲಿ: ಹಳೆ ದಾಂಡೇಲಿ ಸಮೀಪದ ಪಟೇಲನಗರದ ಸರ್ವೇ ನಂ. 3 ರಲ್ಲಿ ಹಿಂದೂಗಳ ರುದ್ರಭೂಮಿಯನ್ನು ಅಕ್ರಮವಾಗಿ ಪ್ರವೇಶಿಸಿ, ಅಲ್ಲಿದ್ದ ಸಮಾಧಿಗಳನ್ನು ಅಗೆದು ಅಸ್ತಿಗಳನ್ನು ಕಾಳಿ ನದಿಯಲ್ಲಿ ಎಸೆದಿದ್ದಾರೆ ಎಂಬ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನಗರದ ವಿಶ್ವ ಹಿಂದೂ ಪರಿಷತ್ತಿನ ಘಟಕದ ಪದಾಧಿಕಾರಿಗಳು ಮಾಜಿ ಶಾಸಕ ಬಿಜೆಪಿ ಮುಖಂಡ ಸುನೀಲ್ ಹೆಗಡೆ ನೇತೃತ್ವದಲ್ಲಿ ತಹಶೀಲ್ದಾರ್ ಚಾಮರಾಜ ಪಾಟೀಲ್ರಿಗೆ ಮನವಿ ಸಲ್ಲಿಸಿದರು.
ಅಕ್ರಮ ಪವೇಶ ಮಾಡಿ ರುದ್ರ ಭೂಮಿಯನ್ನು, ಅಲ್ಲಿನ ಪರಿಸರವನ್ನು ಹಾಳು ಮಾಡಿದವರ ಬೆಂಬಲಕ್ಕೆ ನಿಂತ ಪೌರಾಯುಕ್ತ ಡಾ| ಸಯ್ಯದ ಜಾಹೇದ ಅಲಿ ಮತ್ತು ನಗರದ ಪೊಲೀಸ್ ವೃತ್ತ ಉಪ ನೀರಿಕ್ಷ ಅನಿಸ್ ಮುಜಾವರ ಮೇಲೆ ಸೂಕ್ತ ಕ್ರಮ ಕ್ಯೆಕೊಳ್ಳಲು ಮನವಿಯಲ್ಲಿ ಆಗ್ರಹಿಸಲಾಗಿದೆ.
ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಶಂಕರ ಗಣಾಚಾರಿ, ಪ್ರಧಾನ ಕಾರ್ಯದರ್ಶಿ ಚಂದ್ರು ಮಾಳಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪ್ರಧಾನ ಕಾರ್ಯದರ್ಶಿ ನರೇಂದ್ರ ಚವ್ಹಾಣ, ನಗರಸಭಾ ಸದಸ್ಯ ದಶರಥ ಬಂಡಿವಡ್ಡರ, ರಮಾ ರವಿಂದ್ರ, ಅನ್ನಪೂರ್ಣ ಬಾಗಲಕೋಟೆ, ಬಿಜೆಪಿ ಹಿಂದುಳಿದ ಘಟಕದ ಅಧ್ಯಕ್ಷ ಗುರು ಮಠಪತಿ, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪಾಟೀಲ, ಜಿಲ್ಲಾ ಸಮಿತಿ ಸದಸ್ಯ ಅಶೋಕ ಪಾಟೀಲ, ರಾಜ್ಯ ಮಹಿಳಾ ಘಟಕದ ಸದಸ್ಯೆ ಶಾರದಾ ಪರಶುರಾಮ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ರಫೀಕ ಹುದ್ದಾರ, ಆದಿ ಜಾಂಬವಂತ ಸಂಘದ ಅಧ್ಯಕ್ಷ ಚಂದ್ರಕಾಂತ ನಡಿಗೇರ, ಶಿರಸಿ ಅರ್ಬನ್ ಬ್ಯಾಂಕ್ ನಿರ್ದೇಶಕ ಬಾಲಮಣಿ ಇತರರು ಉಪಸ್ಥಿತರಿದ್ದರು.
Advertisement
ಈ ಕೃತ್ಯವೆಸಗಿದ ಸ್ಥಳೀಯ ಕೆನರಾ ಅಡ್ವೆಂಚರ ಅಕಾಡೆಮಿ ಅಧ್ಯಕ್ಷ ಸಯ್ಯದ್ ತಂಗಳ ಮತ್ತು ಇಬ್ಬರು ಹಾಲಿ ನಗರಸಭಾ ಸದಸ್ಯರಾದ ಆಸೀಪ ಮುಜಾವರ, ಸಂಜಯ ನಂದ್ಯಾಳಕರ ಸುಮಾರು 2 ಎಕರೆ 20 ಗುಂಟೆ ಪ್ರದೇಶದಲ್ಲಿ ಹಿಂದೂ ರುದ್ರಭೂಮಿಯನ್ನು ಅಕ್ರಮವಾಗಿ ಪ್ರವೇಶಿಸಿ ಹಾಳು ಮಾಡಿದ್ದು, ಈ ಕುರಿತು ಅರಣ್ಯ ಇಲಾಖೆಯವರು ಈ ಮೂವರ ಮೇಲೆ ಪ್ರಕರಣ ದಾಖಲಿಸಿದರೂ ನಗರಸಭೆ ಪೌರಾಯುಕ್ತರು ಹಾಗೂ ಪೊಲೀಸ್ ವೃತ್ತ ಉಪ ನೀರಿಕ್ಷಕರು ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಲಾಗಿದೆ.