Advertisement

ಎಂಬೆಸ್ಸಿ ಸಂಸ್ಥೆಯಿಂದ ಅಕ‹ಮ ಒತ್ತುವರಿ: ಆರೋಪ

05:24 PM Dec 08, 2017 | |

ಬೆಂಗಳೂರು: ಸಚಿವ ಕೆ.ಜೆ.ಜಾರ್ಜ್‌ ಪಾಲುದಾರಿಕೆಯ ಎಂಬೆಸ್ಸಿ ಗಾಲ್ಫ್ ಲಿಂಕ್‌ ಟೆಕ್‌ಪಾರ್ಕ್‌ ಸರ್ಕಾರಿ ಜಮೀನು ಒತ್ತುವರಿ ಮಾಡಿರುವುದಲ್ಲದೆ, ವಾರ್ಷಿಕ ಬಿಬಿಎಂಪಿಗೆ 9 ಕೋಟಿಗೂ ಹೆಚ್ಚಿನ ಆಸ್ತಿ ತೆರಿಗೆ ವಂಚಿಸುತ್ತಿದೆ ಎಂದು ಬಿಜೆಪಿ ನಗರ ವಕ್ತಾರ ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬೆಂಗಳೂರು ಪೂರ್ವ ತಾಲೂಕಿನಲ್ಲಿ ಜಾರ್ಜ್‌ ಪಾಲುದಾರಿಕೆಯ ಎಂಬೆಸ್ಸಿ ಗಾಲ್ಫ್ ಲಿಂಕ್‌ ಟೆಕ್‌ಪಾರ್ಕ್‌ ನಿರ್ಮಾಣಕ್ಕಾಗಿ 18 ಸರ್ವೆ ನಂಬರ್‌ಗಳಲ್ಲಿ ಒಟ್ಟು 52.03 ಎಕರೆ ಕ್ರಯಕ್ಕೆ ಪಡೆದಿದೆ. ಆದರೆ, ಅದರೊಂದಿಗೆ 850 ಕೋಟಿ ಮೌಲ್ಯದ 13 ಎಕರೆ
ಸರ್ಕಾರಿ ಜಮೀನು ಒತ್ತುವರಿ ಮಾಡಿ ಟೆಕ್‌ಪಾರ್ಕ್‌ ನಿರ್ಮಿಸಲಾಗಿದೆ ಎಂದು ದೂರಿದರು.

ಸಿಬಿಐ ತಿನಿಖೆಗೆ ಒತ್ತಾಯ: ಈ ಹಿಂದೆ ಕೆ.ಜೆ. ಜಾರ್ಜ್‌ ವಸತಿ ಸಚಿವರಾಗಿದ್ದಾಗ ಸರ್ಕಾರಿ ಜಮೀನನ್ನು ರೈತರಿಗೆ ಮ್ಯುಟೇಷನ್‌ ರಿಜಿಸ್ಟರ್‌ ಮಾಡಿಕೊಡಲಾಗಿದೆ. ನಂತರದಲ್ಲಿ ಅವರಿಂದ 52.03 ಎಕರೆಯನ್ನು ಟೆಕ್‌ಪಾರ್ಕ್‌ಗಾಗಿ ಕ್ರಯಕ್ಕೆ ಪಡೆಯಲಾಗಿದೆ. ಒಟ್ಟು 52.03 ಎಕರೆ ಪೈಕಿ ಶಾಂತಿನಗರ ಶಾಸಕ ಎನ್‌.ಎ.ಹ್ಯಾರೀಸ್‌ ಕುಟುಂಬದವರಿಂದ 4.01 ಎಕರೆ ಜಮೀನು ಕ್ರಯಕ್ಕೆ ಪಡೆಯಲಾಗಿದ್ದು, ಹ್ಯಾರೀಸ್‌ ಕುಟುಂಬದವರಿಗೆ ಈ ಜಮೀನು ಹೇಗೆ ಬಂತು ಎಂಬ ದಾಖಲೆಗಳಿಲ್ಲ. ಆ ಮೂಲಕ ಒಟ್ಟು 65 ಎಕರೆಗೆ ಮ್ಯುಟೇಷನ್‌ ರಿಜಿಸ್ಟರ್‌ನಲ್ಲಿಯೂ ಅವ್ಯವಹಾರ ನಡೆದಿರುವ ಅನುಮಾನವಿದ್ದು, ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ತಪ್ಪು ಮಾಹಿತಿ: ಒಟ್ಟು 65 ಎಕರೆ ಪ್ರದೇಶದಲ್ಲಿ ಹಿಲ್ಟನ್‌ ಪಂಚತಾರಾ ಹೋಟೆಲ್‌ ಸೇರಿದಂತೆ 23 ಕಟ್ಟಡ ಗಳನ್ನು ನಿರ್ಮಿಸಲಾಗಿದೆ. ಟೆಕ್‌ಪಾರ್ಕ್‌ನ ನಿರ್ಮಿತ ಪ್ರದೇಶ (ಬಿಲ್ಟ್ಅಪ್‌ ಏರಿಯಾ) 45 ಲಕ್ಷ ಚದರ ಅಡಿಗಳಿದ್ದರೂ, ಸ್ವಯಂ ಘೋಷಿತ ಆಸ್ತಿ ವ್ಯವಸ್ಥೆಯಡಿ ಟೆಕ್‌ಪಾರ್ಕ್‌ ಪಾಲಿಕೆಗೆ ನಿರ್ಮಿತ ಪ್ರದೇಶ 4,79,729 ಚದರ ಅಡಿ ಎಂದು ತಪ್ಪು
ಮಾಹಿತಿ ನೀಡಿದೆ. ಅದರಂತೆ ವಾರ್ಷಿಕ ಕೇವಲ 1.24 ಕೋಟಿ ರೂ. ತೆರಿಗೆ ಪಾವತಿಸುತ್ತಿದ್ದು, 9 ಕೋಟಿ ರೂ. ಗೂ ಅಧಿಕ ಆಸ್ತಿ ತೆರಿಗೆ ವಂಚಿಸುತ್ತಿದೆ ಎಂದು ದೂರಿದರು.

ಆ ಹಿನ್ನೆಲೆಯಲ್ಲಿ ಸಚಿವ ಕೆ.ಜೆ.ಜಾರ್ಜ್‌ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ, ಸರ್ಕಾರಿ ಜಮೀನಿಗೆ ಮ್ಯುಟೇ ಷನ್‌ ನೀಡಿದ ಹಿಂದಿನ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌, ಕಾನೂನು ಬಾಹಿರವಾಗಿ ನಕ್ಷೆ ಹಾಗೂ ಸ್ವಾಧೀನಾನುಭವ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ, ಎಸಿಬಿ, ಬಿಎಂಟಿಎಫ್, ನಗರದ ಎಸಿಎಂಎಂ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು.

Advertisement

ಯಾರಾದರೂ ಜವಾಬ್ದಾರಿ ಯುತವಾಗಿ ಮಾಡಿದ ಆರೋಪಗಳಿಗೆ ಉತ್ತರಿಸುತ್ತೇನೆ. ಆದರೆ, ನಿಮ್ಹಾನ್ಸ್‌ನಲ್ಲಿರ
ಬೇಕಾದವರು ಬೀದಿಯಲ್ಲಿ ನಿಂತು ಮಾಡುವ ಆರೋಪಗಳಿಗೆ ಉತ್ತರ ಕೊಡುವುದಿಲ್ಲ. ಏನು ಅವ್ಯವಹಾರ ಎಂಬುದಕ್ಕೆ ದಾಖಲೆ ಇದ್ದರೆ ಮಾಧ್ಯಮದವರು ಆ ವಿಚಾರದಲ್ಲಿ ನನ್ನನ್ನು ಪ್ರಶ್ನಿಸಿ. ನನ್ನ ವಿರುದ್ಧ ಆರೋಪ ಮಾಡಿರುವ ಎನ್‌.ಆರ್‌.ರಮೇಶ್‌ಗೆ ಮೆಂಟಲ್‌ ಆಸ್ಪತ್ರೆಗೆ ಹೋಗಲು ಹೇಳಿ. ಕೆ.ಜೆ.ಜಾರ್ಜ್‌, ಬೆಂಗಳೂರು ನಗರಾಭಿವೃದ್ಧಿ ಸಚಿವ

ಕಾನೂನು ಉಲ್ಲಂಘನೆ: ಎಂಬೆಸ್ಸಿ ಸಂಸ್ಥೆಯು ರೈತರಿಂದ ಕ್ರಯಕ್ಕೆ ಪಡೆವಾಗ “ವಾಸದ ಉದ್ದೇಶ’ಕ್ಕಾಗಿ ಭೂ ಪರಿವರ್ತನೆ ಮಾಡಲಾಗಿದೆ. ಪರಿವರ್ತನೆ ಬಳಿಕ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಮತ್ತು ನಗರ ಯೋಜನೆ ಎಂಜಿನಿಯರ್‌ ಕಾನೂನು ಬಾಹಿರವಾಗಿ ನಕ್ಷೆ ಮಂಜೂರಾತಿ ನೀಡಿದ್ದರಿಂದ ಒಟ್ಟು ಜಮೀನಿನ ಶೇ.90ರಷ್ಟು ಭಾಗದಲ್ಲಿ ವಾಣಿಜ್ಯ ಉದ್ದೇಶಿತ ಕಟ್ಟಡಗಳನ್ನು ನಿರ್ಮಿಸಿ ಕಾನೂನು ಉಲ್ಲಂ ಸಲಾಗಿದೆ ಎಂದು ರಮೇಶ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next