ಬೆಂಗಳೂರು: ಜಾಮೀನು ರಹಿತ ಕೋರ್ಟ್ ವಾರೆಂಟ್ ಹಿನ್ನೆಲೆಯಲ್ಲಿ ಬಂಧಿ ಸಿದ ವ್ಯಕ್ತಿಯನ್ನು 9 ದಿನಗಳ ಕಾಲ ಠಾಣೆ ಯಲ್ಲಿ ಅಕ್ರಮ ಬಂಧನದಲ್ಲಿರಿಸಿ ಕರ್ತವ್ಯ ಲೋಪ ಎಸಗಿದ ಅಮೃತಹಳ್ಳಿ ಠಾಣಾಧಿ ಕಾರಿ ಸೇರಿ 6 ಜನ ಸಿಬ್ಬಂದಿ ಮಂಗಳವಾರ ರಾಜ್ಯ ಮಾನವ ಹಕ್ಕುಗಳ ಆಯೋಗದ ಎದುರು ವಿಚಾರಣೆಗೆ ಹಾಜರಾಗಿದ್ದರು.
ಠಾಣಾಧಿಕಾರಿ ಅಂಬರೀಶ್, ಪಿಎಸ್‌ಐ ಹಾಗೂ ಇತರೆ ಸಿಬ್ಬಂದಿ ಆಯೋಗದ ಡಿವೈಎಸ್ಪಿ ಸುಧೀರ್ ಎಂ.ಹೆಗ್ಡೆ ನೇತೃತ್ವದ ತಂಡದ ಎದುರು ವಿಚಾರಣೆ ಹಾಜರಾಗಿ ದ್ದರು. ವಿಚಾರಣೆಯಲ್ಲಿ ಕರ್ತವ್ಯಲೋಪ ಆಗಿದೆ ಎಂದು ಅಧಿಕಾರಿ-ಸಿಬ್ಬಂದಿ ತಪ್ಪೊ ಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾ ಗಿದೆ. ಆದರೆ, ಕೆಲ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡಿಲ್ಲ. ಹೀಗಾಗಿ ಮತ್ತೂಮ್ಮೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟು ಕಳುಹಿಸಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನೆಲೆ?: ಆರೋಪಿ ಯಾಸಿನ್ ಮಕುºಲ್ ಖಾನ್ 2022ರಲ್ಲಿ ಕಳ್ಳನತ ಪ್ರಕರ ಣದಲ್ಲಿ ಜೈಲು ಸೇರಿದ್ದ. ಕೆಲ ತಿಂಗಳ ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಆ ನಂತರ ಮುಂಬೈಗೆ ತೆರಳಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಇತ್ತ ಕೋರ್ಟ್, ಆರೋಪಿ ಪ್ರಕರಣದ ವಿಚಾರ ಣೆಗೆ ಗೈರಾಗಿರುವುದನ್ನು ಪ್ರಶ್ನಿಸಿ ಬಂಧನ ರಹಿತ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಲೆ ಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ ಅಮೃತಹಳ್ಳಿ ಠಾಣೆ ಪೊಲೀಸರು, ಮುಂಬೈಗೆ ತೆರಳಿ ಯಾಸಿನ್‌ನನ್ನು ಬಂಧಿಸಿ ದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಾಗಲಿ ಹಾಗೂ ವಿಮಾನದಲ್ಲಿ ಆರೋಪಿಯೊಬ್ಬನನ್ನು ಕರೆದೊಯ್ಯುವಾಗ ಏರ್‌ಪೋರ್ಟ್ ಅಥಾರಿಟಿಗಾಗಲಿ ಮಾಹಿತಿ ನೀಡಿಲ್ಲ. ಮತ್ತೂಂದೆಡೆ ಮಹಾ ರಾಷ್ಟ್ರಕ್ಕೆ ತೆರಳುವ ಮೊದಲು ಸಂಬಂಧಿಸಿದ ಡಿಸಿಪಿಗೆ ಮಾಹಿತಿ ನೀಡಬೇಕೆಂಬ ನಿಯಮವಿದೆ.
ಈ ನಿಯಮವನ್ನು ಠಾಣಾಧಿಕಾರಿ ಗಳು ಉಲ್ಲಂಘಿಸಿದ್ದಾರೆ. ಅಲ್ಲದೆ, ಫೆ.1 ರಂದು ಬೆಂಗಳೂರಿಗೆ ಕರೆತಂದರೂ ಕೋರ್ಟ್‌ಗೆ ಹಾಜರು ಪಡಿಸದೆ 9 ದಿನಗಳ ಕಾಲ ಠಾಣೆಯಲ್ಲೇ ಇರಿಸಿಕೊಂಡಿದ್ದರು. ಈ ಬಗ್ಗೆ ಅಬ್ದುಲ್ ಮಜೀದ್ ಎಂಬ ವಕೀಲರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಫೆ.10ರಂದು ಆಯೋಗದ ಡಿವೈಎಸ್ಪಿ ಸುಧೀರ್ ಎಂ.ಹೆಗ್ಡೆ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.