Advertisement

ಅಕ್ರಮ ಗೋ ಸಾಗಾಟ: ತುರ್ತು ಕ್ರಮಕ್ಕೆ ಆಗ್ರಹ

11:28 AM May 13, 2020 | mahesh |

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಅವ್ಯಾಹತವಾಗಿ ಅಕ್ರಮ ಗೋಸಾಗಾಟ ಹಾಗೂ ಗೋಹತ್ಯೆ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದ್ದು, ಸರಕಾರ, ಜಿಲ್ಲಾಡಳಿತಗಳು, ಜನಪ್ರತಿನಿಧಿಗಳು ಗೋಕಳ್ಳರು, ಗೋ ಹಂತಕರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಗ್ರಹಿಸಿದ್ದಾರೆ.

Advertisement

ಕರಾವಳಿ ಜಿಲ್ಲೆಗಳಲ್ಲಿರುವ ಗೋಶಾಲೆಗಳಿಂದ ಗೋವುಗಳನ್ನು ಹೊತ್ತೂಯ್ಯುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ಈ ಬಗ್ಗೆ ಹಿಂದೂ ಸಂಘಟನೆಗಳು ಹಾಗೂ ಅನೇಕ ರೈತರು ತಮ್ಮಲ್ಲಿ ನೋವು ದುಃಖ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ತುರ್ತು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪೇಜಾವರ ಶ್ರೀಗಳ ಆಗ್ರಹಕ್ಕೆ ಸಂಪೂರ್ಣ ಬೆಂಬಲ ಪೇಜಾವರ ಶ್ರೀಗಳ ಆಗ್ರಹಕ್ಕೆ ಮೂಡುಬಿದಿರೆ ಜೈನ ಕಾಶಿ ಶ್ರೀ ದಿಗಂಬರ ಜೈನ ಮಠದ ಜಗದ್ಗುರು ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೋವಿಡ್  ದಿಂದ ದೇಶ ಲಾಕ್‌ ಡೌನ್‌ಗೆ ಒಳಗಾಗಿರುವುದನ್ನು ಗಮನಿಸಿ ಕೆಲವರು ಮಾಡುತ್ತಿರುವ ಗೋ ಅಪಹರಣ ಹಾಗೂ ಹತ್ಯೆ, ನದಿಗೆ ಸ್ಫೋಟಕ ಬಳಸಿ ಮೀನಿನ ಸಾಮೂಹಿಕ ಹತ್ಯೆಯನ್ನು ಕೊಡಲೇ ಪತ್ತೆ ಹಚ್ಚಿ ಶಿಕ್ಷೆ ನೀಡಲಿ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next