Advertisement

Vijayapura: ಅಕ್ರಮ ಗೋವುಗಳ ಸಾಕಾಣಿಕೆ; 11 ಕರುಗಳ ಸಾವು, 110 ಗೋವುಗಳ ರಕ್ಷಣೆ

02:32 PM Feb 14, 2024 | Team Udayavani |

ವಿಜಯಪುರ: ಗೋವುಗಳ ಬಾಯಿಗೆ ಪ್ಲಾಸ್ಟರ್ ಸುತ್ತಿ ಮೂರು ಬುಲೆರೋ ಪಿಕಪ್ ಸರಕು ಸಾಗಾಟ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ 1 ಆಕಳು ಸೇರಿ 10 ಕರುಗಳು ಸಾವಿಗೀಡಾಗಿವೆ. ಗೋವುಗಳ ಆರ್ತನಾದ ಕೇಳಿ ರೈತರು ವಾಹನ ತಡೆದು ಗೋವುಗಳನ್ನು ರಕ್ಷಿಸಿರುವ ಘಟನೆ ಇಂಡಿ ತಾಲೂಕಿನಿಂದ ವರದಿಯಾಗಿದೆ.

Advertisement

ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೇವನೂರು ಗ್ರಾಮದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದಿಂದ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿತ್ತು.

ಮಂಗಳವಾರ ಮಧ್ಯರಾತ್ರಿ ಹಿರೇಬೇವನೂರು ಗ್ರಾಮದ ಮಾರ್ಗವಾಗಿ ಮೂರು ಬುಲೆರೋ ಪಿಕಪ್ ಸರಕು ಸಾಗಟ ವಾಹನಗಳಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿತ್ತು. ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳಲ್ಲಿ ಬಹುತೇಕ ಕರುಗಳೇ ಇದ್ದು, ಎಲ್ಲ ಆಕಳು-ಕರುಗಳ ಬಾಯಿಗೆ ಬ್ಲಾಸ್ಟರ್ ಸುತ್ತಿ, ಕಾಲುಗಳನ್ನು ಕಟ್ಟಿ ಹಾಕಿ ಸಾಗಿಸಲಾಗುತ್ತಿತ್ತು.

ತಮ್ಮ ಗ್ರಾಮದ ಮಾರ್ಗವಾಗಿ ಮಧ್ಯರಾತ್ರಿ ಅಕ್ರಮವಾಗಿ ಗೋವುಗಳ ಸಾಗಾಟ ನಡೆಸಿರುವ ಕುರಿತು ಖಚಿತ ಮಾಹಿತಿ ಅರಿತ ಹಿರೇವನೂರು ಗ್ರಾಮದ ರೈತರು ಪಿಕಪ್ ವಾಹನಗಳು ಗ್ರಾಮಕ್ಕೆ ಬರುತ್ತಲೇ ಅಡ್ಡಗಟ್ಟಿ ತಡೆದಿದ್ದಾರೆ. ಆಗ ಎರಡು ವಾಹನಗಳ ಚಾಲಕರು ಪರಾರಿಯಾಗಿದ್ದು, ಓರ್ವ ಗ್ರಾಮಸ್ಥರಿಗೆ ಸೆರೆ ಸಿಕ್ಕಿದ್ದಾನೆ.

ಕೂಡಲೇ ವಾಹನಗಳನ್ನು ಪರಿಶೀಲನೆಗೆ ಮುಂದಾದ ಗ್ರಾಮಸ್ಥರಿಗೆ ಆಘಾತವಾಗಿದೆ. ಏಕೆಂದರೆ ಗೋವುಗಳು ಸಾಗಾಟದ ಸಂದಭದಲ್ಲಿ ಕೂಗದಂತೆ ಎಲ್ಲ ಗೋವುಗಳು ಹಾಗೂ ಕರುಗಳ ಬಾಯಿಗೆ ಪ್ಲಾಸ್ಟರ್ ಸುತ್ತಿದ್ದಾರೆ. ಸಣ್ಣ ವಾಹದನಲ್ಲಿ ಹೆಚ್ಚು ಆಕಳುಗಳ ಕಾಲಿಗೆ ಹಗ್ಗ ಕಟ್ಟಿ, ಆಹಾರ ಧಾನ್ಯಗಳ ಚೀಲಗಳಂತೆ ಒಂದರ ಮೇಲೆ ಒಂದರಂತೆ ಗೋವುಗಳನ್ನು ಹಾಕಿರುವುದನ್ನು ಕಂಡು ರೈತರು ದಂಗಾಗಿದ್ದಾರೆ.

Advertisement

ಈ ವಿಕೃತ ವರ್ತನೆಯಿಂದ ಉಸಿರಾಟದ ಸಮಸ್ಯೆಯಾಗಿ 1 ಆಕಳು ಹಾಗೂ 10 ಕರುಗಳು ವಾಹನದಲ್ಲೇ ಜೀವ ಕಳೆದುಕೊಂಡಿದ್ದನ್ನು ಕಂಡು ಕಂಡಿದ್ದಾರೆ. ಕೂಡಲೇ ಎಲ್ಲ ಗೋವುಗಳ ಬಾಯಿಗೆ ಸುತ್ತಿದ್ದ ಪ್ಲಾಸ್ಟರ್ ಹಾಗೂ ಕಾಲುಗಳಿಗೆ ಕಟ್ಟಿದ್ದ ಹಗ್ಗ ಬಿಚ್ಚಿ ಗೋವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೋವುಗಳ ರಕ್ಷಣೆ ಬಳಿಕ ಗ್ರಾಮಸ್ಥರು ಇಂಡಿ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಗ್ರಾಮಸ್ಥರಿಂದ ರಕ್ಷಿಸಲ್ಪಟ್ಟಿರುವ 110ಕ್ಕೂ ಹೆಚ್ಚು ಗೋವುಗಳನ್ನು ಪೊಲೀಸರು ವಿಜಯಪುರ ಗೋಶಾಲೆಗಳಿಗೆ ಸಾಗಿಸಿದ್ದಾರೆ. ಮೃತ 11 ಗೋವುಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ನಡೆಸಿದ್ದಾರೆ.

ಘಟನೆಯ ಕುರಿತು ಗ್ರಾಮಸ್ಥರಿಗೆ ಸೆರೆ ಸಿಕ್ಕಿರುವ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ನಡೆಸಿದ್ದಾರೆ.

ಇಷ್ಟೊಂದು ಪ್ರಮಾಣದ ಗೋವುಗಳನ್ನು ಅಕ್ರಮವಾಗಿ ಸಾಗಿಸಲು ಮುಂದಾಗಿರುವ ಕೃತ್ಯದ ಹಿಂದಿರುವ ಮೂಲ ವ್ಯಕ್ತಿಯಾರು, ಯಾರಿಗೆ ಈ ಗೋವುಗಳನ್ನು ತಲುಪಿಸಲಾಗುತ್ತಿತ್ತು. ಎಲ್ಲಿಂದ, ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯ ಬಳಿಕ ಉತ್ತರ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next