Advertisement

ತಾವರಗೇರಾ ಶಾಮೀದ ಅಲಿ ದರ್ಗಾದ ಆವರಣದಲ್ಲಿ ಅಕ್ರಮ ಕಟ್ಟಡ ನಿರ್ಮಾಣ: ಡಿ.31 ಕ್ಕೆ ವಿಶೇಷ ಸಭೆ

08:37 PM Dec 29, 2022 | Team Udayavani |

ಕುಷ್ಟಗಿ: ತಾಲೂಕಿನ ತಾವರಗೇರಾ ಶಾಮೀದ ಅಲಿ ದರ್ಗಾದ ಜಾಗದಲ್ಲಿ ಮಾಹಿತಿ ನೀಡದೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ವಿವಾದಿತ‌ ಸ್ಥಳಕ್ಕೆ ಕುಷ್ಟಗಿ ತಹಶೀಲ್ದಾರ್ ಗುರುರಾಜ ಚಲವಾದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

ತಾವರಗೇರಾದಲ್ಲಿರುವ ಶಾಮೀದ ಅಲಿ ದರ್ಗಾದ ಮುಂದೆ ಮಾಹಿತಿ ನೀಡದೆ‌ ಮಸೀದಿ‌ ನಿರ್ಮಾಣಕ್ಕೆ ಮುಂದಾಗಿದ್ದ ಪ್ರಕರಣ ನಡೆದಿತ್ತು ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಸೋಮವಾರ ನಿರ್ಮಾಣ ಕೆಲಸ ಸ್ಥಗಿತಗೊಳಿಸಲಾಗಿತ್ತು.

ಇದೇ ವೇಳೆ ವಿಷಯ ಪ್ರಸ್ತಾಪಿಸಿದ ಸ್ಥಳೀಯರು, ಪಟ್ಟಣದ ಪ್ರಮುಖರು ಹಾಗೂ ಭಕ್ತರಿಗೆ ಮಾಹಿತಿ ನೀಡದೇ ಅಥವಾ ಸಂಬಂಧಿಸಿದ ಇಲಾಖೆಗಳಿಂದ ಪರವಾನಗಿ ಪಡೆಯದೇ ದರ್ಗಾದ ಬಳಿ ರಾತ್ರೋರಾತ್ರಿ ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಶ್ನಿಸಿದರು. ಈ ಹಿನ್ನೆಲೆಯಲ್ಲಿ ವಿರೋಧಿಸಿ ತಮಗೆ ದೂರು ನೀಡಿದ್ದೇವೆ. ಇದರ ನೈಜ ಸ್ಥಿತಿ ಪರಿಶೀಲಿಸಿದ ಬಳಿಕವೇ ಕ್ರಮಕೈಗೊಳ್ಳಬೇಕು ಎಂದು ತಹಶೀಲ್ದಾರ್ ರಲ್ಲಿ ಮನವಿ ಮಾಡಿದರು.

ದರ್ಗಾ ಸಮಿತಿ ಸದಸ್ಯರುಗಳು ಪ್ರತಿಕ್ರಿಯಿಸಿ, ದರ್ಗಾದ ದರ್ಶನಕ್ಕೆ ನಿತ್ಯ ನೂರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಉರುಸು ಸಂದರ್ಭದಲ್ಲಿ ದಿನಗಳಲ್ಲಿ ಸಾವಿರಾರು ಜನ ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ ಅವರಿಗೆ ಅಗತ್ಯ ವಿಶ್ರಾಂತಿ, ಸ್ನಾನ ಹಾಗೂ ಶೌಚಾಲಯ ಗೃಹಗಳ ಸೌಲಭ್ಯಗಳಿರಲಿಲ್ಲ. ಹೀಗಾಗಿ ತ್ವರಿತಗತಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಇದರ ಹಿಂದೆ ಯಾವುದೇ ರೀತಿಯ ದುರುದ್ದೇಶ ಇಲ್ಲ. ಕಟ್ಟಡ ನಿರ್ಮಾಣಕ್ಕೆ ಅಗತ್ಯ ಪರವಾನಗಿ ಪಡೆಯಲು ಶೀಘ್ರದಲ್ಲೇ ಅರ್ಜಿ ಸಲ್ಲಿಸಲಾಗುವುದು ಎಂದರು.

ಶಾಮೀದ ಅಲಿ ದರ್ಗಾ‌ ಎಲ್ಲಾ ಸಮುದಾಯದ ಮುಖಂಡರು ಡಿಸೆಂಬರ್ 31 ರಂದು ತಹಶೀಲ್ದಾರ್ ಕಚೇರಿಗೆ ಬರುವಂತೆ ಮನವಿ ಮಾಡಿದ್ದಾರೆ. ಸದ್ಯ ಸಭೆಯಲ್ಲಿ ಈ ಕುರಿತು ಚರ್ಚಿಸುವುದಾಗಿ ಹೇಳಿದ ತಹಶೀಲ್ದಾರ್ ಗುರುರಾಜ ಚಲವಾದಿ ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಹಾವೇರಿ ಪೊಲೀಸರು ಮಂಗಳೂರಿಗೆ

Advertisement

Udayavani is now on Telegram. Click here to join our channel and stay updated with the latest news.

Next