Advertisement

ಅಕ್ರಮ ಬಾಂಗ್ಲಾ ವಲಸಿಗರಿಂದ ಮಿಜೋರಾಂ ನಲ್ಲಿ 16 ಗ್ರಾಮ ಸೃಷ್ಟಿ

09:52 AM Mar 15, 2019 | Team Udayavani |

ಐಜಾಲ್‌ : ನೆರೆಯ ಬಾಂಗ್ಲಾದೇಶದ ಅಕ್ರಮ ವಲಸಿಗರು ದಕ್ಷಿಣ ಮಿಜೋರಾಂ ನ ಲುಂಗ್ಲೆಯಿ ಜಿಲ್ಲೆಯಲ್ಲಿ 16 ಗ್ರಾಮಗಳನ್ನು ಸೃಷ್ಟಿಸಿಕೊಂಡಿದ್ದಾರೆ ಎಂಬ ವಿಷಯವನ್ನು ಇಂದು ಶುಕ್ರವಾರ ರಾಜ್ಯ ವಿಧಾನಸಭೆಗೆ ತಿಳಿಸಲಾಯಿತು. 

Advertisement

ಯಾವುದೇ ಕಾನೂನು ಸಮ್ಮತ ದಾಖಲೆ ಪತ್ರಗಳಿಲ್ಲದೆ ಅಕ್ರಮವಾಗಿ ರಾಜ್ಯಕ್ಕೆ ವಲಸೆ ಬಂದವರು ಈ ರೀತಿಯ ಇನ್ನೂ ಒಂಬತ್ತು ಗ್ರಾಮಗಳನ್ನು ಸೃಷ್ಟಿಸಿಕೊಂಡಿದ್ದಾರೆ ಸ್ಥಳೀಯಾಡಳಿತೆ ಸಚಿವ ಕೆ ಲಾಲ್‌ರಿಂಗ್ಲಿಯಾನಾ ಸದನಕ್ಕೆ ತಿಳಿಸಿದರು .

ಈ ಒಂಬತ್ತು ಗ್ರಾಮಗಳ ಪೈಕಿ ನಾಲ್ಕನ್ನು ಐಜಾಲ್‌ ಜಿಲ್ಲೆಯಲ್ಲೂ , ಮೂರನ್ನು  ಮ್ಯಾನ್‌ಮಾರ್‌ ಗಡಿಗೆ ತಾಗಿಕೊಂಡಿರುವ ಚಂಫಾಯಿಯಲ್ಲಿ ಮತ್ತು ಎರಡನ್ನು ತ್ರಿಪುರ ಗಡಿಯೊಂದಿಗಿನ ಮಾಮಿತ್‌ ನಲ್ಲಿ ಅಕ್ರಮ ವಲಸಿಗರು ಸೃಷ್ಟಿಸಿಕೊಂಡಿದ್ದಾರೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next