Advertisement

Illegal; ಪರಿಹಾರಕ್ಕೆಂದೇ ಹೆದ್ದಾರಿ ಮಾರ್ಗದಲ್ಲಿ ನಕಲಿ ಮನೆ!

12:58 AM Jul 16, 2024 | Team Udayavani |

ಇಂದೋರ್‌: ಮಧ್ಯಪ್ರದೇಶದ ಸಿಂಗ್ರೌಲಿ-ಪ್ರಯಾಗ್‌ರಾಜ್‌ ನಡುವೆ ನಿರ್ಮಿಸಲುದ್ದೇಶಿಸಿರುವ 70 ಕಿ.ಮೀ. ಹೆದ್ದಾರಿ ಕಾಮಗಾರಿಯಲ್ಲಿ, ಪರಿಹಾರ ಪಡೆಯಲೆಂದೇ 2 ತಿಂಗಳಲ್ಲಿ 3000 ನಕಲಿ ಮನೆಗಳು ನಿರ್ಮಾಣವಾಗಿವೆ.
ಎನ್‌ಎಚ್‌ಎಐ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ಜಮೀನು ವಶ ಪಡಿಸಿಕೊಂಡಿದೆ.

Advertisement

ಸಿಂಗ್ರೌಲಿ-ಪ್ರಯಾಗ್‌ರಾಜ್‌ ಮಾರ್ಗದಲ್ಲಿ ಹೆದ್ದಾರಿ ನಿರ್ಮಿ ಸಲು ಈ ಮಾರ್ಚ್‌ನಲ್ಲಿ ಎನ್‌ಎಚ್‌ಎಐ ಅಧಿಸೂಚನೆ ಹೊರಡಿ
ಸಿತ್ತು. ಚಿತ್ರಾಂಗಿ, ದೂಧ್‌ಮಾನಿಯಾ ತಾಲೂಕುಗಳಲ್ಲಿನ ಒಟ್ಟು 33 ಹಳ್ಳಿ
ಗಳಲ್ಲಿ ರಸ್ತೆ ನಿರ್ಮಾಣವಾಗಲಿದೆ. ಅಧಿಸೂಚನೆ ವ್ಯಾಪ್ತಿಗೆ ಬಂದಿರುವ ಸ್ಥಳಗಳನ್ನು ಮಾರುವಂತಿಲ್ಲ ಎಂದೂ ಆದೇಶಿಸಲಾಗಿದೆ.

ಏನಿದು ಸಂಚು?: ಭೂಮಿಯ ಒಡೆಯರಾದ ಬಡರೈತರು ಮತ್ತು ಬ್ರೋಕರ್‌ಗಳ ನಡುವೆ ಸ್ಟಾಂಪ್‌ ಪೇಪರ್‌ನಲ್ಲಿ ಒಪ್ಪಂದವಾಗಿದೆ. ಮನೆಗಳನ್ನು ಬ್ರೋಕರ್‌ಗಳು ನಿರ್ಮಿಸುತ್ತಾರೆ. ಇದಕ್ಕೆ ಪರಿಹಾರ ಸಿಕ್ಕರೆ ಅದರಲ್ಲಿ ಶೇ.80 ಕಟ್ಟಿದವರಿಗೆ, ಬಾಕಿ ಶೇ.20 ಭೂಮಾಲಕರಿಗೆ! ಎಂದಿನಂತೆ ಜಾಗದ ಮಾಲಕರಿಗೆ ಸರಕಾರ ನೀಡುವ ಪರಿಹಾರವೂ ಸಿಕ್ಕುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next