Advertisement
ಎಲ್ಲೆಲ್ಲಿ ಅಕ್ರಮ: ನಗರದ ಹೊಸ ಭರಂಪುರ, ಮೆಟ್ಟಿಲು ಹೊಳೆ ರಸ್ತೆ, ದಾವಣಗೆರೆ ವಾಟರ್ ವಕ್ಸì ಹಿಂಭಾಗ, ನಾರಾಯಣಾಶ್ರಮ ಮುಂತಾದ ನದಿ ದಡದಲ್ಲಿ ರಾತ್ರಿಯಾಗುತ್ತಿದ್ದಂತೆ ಸೀಮೆಂಟ್ ಚೀಲಗಳಲ್ಲಿ ಮರಳು ತುಂಬಿ ಸಾಗಿಸಲಾಗುತ್ತಿದೆ. ಕೆಲ ಪ್ರಭಾವಿಗಳು ಕೈಲಾಸ ನಗರದ ನದಿ ಪಾತ್ರದಲ್ಲೆ ಟ್ರ್ಯಾಕ್ಟರ್, ಮಜಾಡಾಲಾರಿ ನಿಲ್ಲಿಸಿಕೊಂಡು ಮರಳು ತುಂಬುತ್ತಾರೆ ಎಂದು ಸ್ಥಳೀಯರು ದೂರುತ್ತಾರೆ. ಗ್ರಾಮೀಣ ಭಾಗದ ಹಳೇಹರ್ಲಾಪುರ, ಗುತ್ತೂರು, ಮಾದಾಪುರಹಳ್ಳ, ದೀಟೂರು
ಮುಂತಾದ ಹಲವು ಗ್ರಾಮಗಳಲ್ಲಿ ಸಂಜೆಯಾಗುತ್ತಲೆ ತೆಪ್ಪ ಮತ್ತು ರಬ್ಬರ್ ಟೂಬ್ ಗಳ ಸಹಾಯದಿಂದ ಮರಳು ತಂಬಲಾಗುತ್ತಿದೆ. ನೀರು ಕಡಿಮೆ ಇರುವುದರಿಂದ ನದಿ ಆಚೆಯ ರಾಣಿಬೆನ್ನೂರು ತಾಲೂಕಿನ ನಲವಾಗಲು, ಹಿರೇಬಿದರಿ, ಐರಣಿ, ಮಾಕನೂರು ಗ್ರಾಮ ವ್ಯಾಪ್ತಿಗೆ ಸೇರಿರುವ ಮರಳನ್ನೂ ಸಹ ಇತ್ತ ತಂದು ಸಾಗಿಸಲಾಗುತ್ತಿದೆ.
ಪ್ರಭಾವಿಗಳು ಮಾತ್ರ ಅಕ್ಕಪಕ್ಕದ ಜಿಲ್ಲೆಗಳಿಗೆ ಹಗಲಿರುಳು ಮರಳು ಸಾಗಿಸಿ, ದುರ್ಲಾಭ ಪಡೆಯುತ್ತಿದ್ದಾರೆ. ಮೇಲಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಂದ ವರದಿ ಸಂಗ್ರಹಿಸದೇ, ಖುದ್ದಾಗಿ ನದಿಪಾತ್ರಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಗಮನಿಸಬೇಕು. ಅಕ್ರಮ ಮರಳುಗಾರಿಕೆ ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ರಾತ್ರಿ ವೇಳೆ ಲಾರಿಗಳಲ್ಲಿ ಸಾಗಾಟ
ತಾಲೂಕಿನಲ್ಲಿ ರಾತ್ರಿಯಿಡಿ ಬೃಹತ್ ಲಾರಿಗಳಲ್ಲಿ ಮರಳು ಸಾಗಿಸಲಾಗುತ್ತಿದೆ. ಪ್ರಸ್ತುತ ಲಾಕ್‌ಡೌನ್ ನಿಯಮಗಳಲ್ಲೂ ರಾತ್ರಿ ವೇಳೆ ಇಂತಹ ಚಟುವಟಿಕೆ ನಿಷೇಧಿಸಲ್ಪಟ್ಟಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾತ್ರಿಯಿಡೀ ಪೈಪೋಟಿಗೆ ಬಿದ್ದರಂತೆ ಓಡುವ ಲಾರಿಗಳ ಸದ್ದಿಗೆ ಗ್ರಾಮಸ್ಥರು ನಿದ್ದೆಯಿಲ್ಲದೆ ಜಾಗರಣೆ ಮಾಡಬೇಕಾಗಿದೆ. ರಸ್ತೆ ಅಕ್ಕಪಕ್ಕದ ವಾಸದ ಮನೆಗಳು, ಜಮೀನಿನ ಬೆಳೆಗಳು ಧೂಳುಮಯವಾಗಿವೆ.