Advertisement

IT ಫ್ರೆಂಡ್ಸ್ ಎಚ್ಚರ ಇರಲಿ! 8ಪುಟಗಳ ಸೂಸೈಡ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

09:52 AM Jul 06, 2019 | Nagendra Trasi |

ಹೈದರಾಬಾದ್:ಐಐಟಿ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ಬರೋಬ್ಬರಿ 8 ಪುಟಗಳ ಸೂಸೈಡ್ ನೋಟ್ ಬರೆದಿಟ್ಟು ಹಾಸ್ಟೆಲ್ ನಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಅಷ್ಟೇ ಅಲ್ಲ ಐಟಿಯಲ್ಲಿ ಕೆಲಸ ಮಾಡುವ ಗೆಳೆಯರಿಗೆ ಎಚ್ಚರಿಕೆಯೊಂದನ್ನು ಕೊಟ್ಟಿದ್ದಾರೆ!

Advertisement

ನೇಣಿಗೆ ಶರಣಾಗುವ ಮುನ್ನ ಐಐಟಿ ವಿದ್ಯಾರ್ಥಿ ಮಾರ್ಕ್ ಆ್ಯಂಡ್ರ್ಯೂ ಚಾರ್ಲ್ಸ್, “ ಐಟಿಯಲ್ಲಿ ಕೆಲಸ ಮಾಡುತ್ತಾ, ಮಾಡುತ್ತಾ ನಿಮ್ಮ ಜೀವನವನ್ನೇ ಮರೆತು ಬಿಡಬೇಡಿ. ಇರುವುದು ಒಂದೇ ಒಂದು ಜೀವನ! ಎಂದು ಸುಮಾರು 8 ಪುಟಗಳ ಸೂಸೈಡ್ ನೋಟ್ ನಲ್ಲಿ ಬರೆದಿರುವುದಾಗಿ ದ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ವಾರಣಾಸಿ ಮೂಲದ ಪೋಷಕರನ್ನು ಹೆಸರಿಸಿ ಪತ್ರದಲ್ಲಿ, ಕ್ಷಮಿಸಿ..ನನ್ನಂತಹ ಪ್ರಯೋಜನವಿಲ್ಲದವನಿಂದ ಏನು ಉಪಯೋಗವಿಲ್ಲ. ಹೀಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಬರೆದಿದ್ದಾನೆ. ನನಗೆ ಯಾವುದೇ ಕೆಲಸ ಇಲ್ಲ, ಬಹುಶ ಬೇರೆ ಕೆಲಸ ಸಿಗುವುದು ಇಲ್ಲ. ಇಂತಹ ಕಡಿಮೆ ಅಂಕ ಗಳಿಸಿದವನನ್ನು ಯಾರು ಕೆಲಸ ಸೇರಿಸಿಕೊಳ್ಳುತ್ತಾರೆ. ನನ್ನ ಅಂಕಪಟ್ಟಿ ನೋಡುವಾಗ ನನಗೇ ಅಚ್ಚರಿಯಾಗುತ್ತೆ ಎಂಬುದಾಗಿಯೂ ಪತ್ರದಲ್ಲಿ ಬರೆದಿಟ್ಟಿದ್ದಾನೆ!

ಈ ಇನ್ಸ್ ಟಿಟ್ಯೂಟ್ ನಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಫೆಬ್ರುವರಿ ತಿಂಗಳಲ್ಲಿ ಐಐಟಿ ತೃತೀಯ ವರ್ಷದ ವಿದ್ಯಾರ್ಥಿ ಅನಿರುದ್ಯಾ ಮುಮ್ಮನೇನಿ ಹಾಸ್ಟೆಲ್ ನ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅಂತಿಮ ಪ್ರಸೆಂಟೇಶನ್ ಕೊಡುವುದು ಬಾಕಿ ಇರುವುದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next