Advertisement
ಈ ಕುರಿತಂತೆ ವಿವರಣೆ ನೀಡಿರುವ ಮದ್ರಾಸ್ ಐಐಟಿ ಪ್ರಾಧ್ಯಾಪಕರಾದ ಜಿತೇಂದ್ರ ಸಂಗವಾಯ್, ಸದ್ಯದ ಮಟ್ಟಿಗೆ ಭಾರತದಲ್ಲಿ ರುವ ಕಚ್ಚಾ ತೈಲೋತ್ಪನ್ನ ತಂತ್ರಜ್ಞಾನವು ದೇಶದ ತೈಲ ಬೇಡಿಕೆಯನ್ನು ಸಮರ್ಥವಾಗಿ ಪೂರೈಸುತ್ತಿಲ್ಲ. ಹಾಗಾಗಿ, ತೈಲ ನಿಕ್ಷೇಪಗಳಿಂದ ತೈಲ ಹೊರತಗೆಯುವಂಥ ಹೊಸ ಹೊಸ ದೇಶೀಯ ತಂತ್ರಜ್ಞಾನಗಳು ಅಭಿವೃದ್ಧಿಗೊಳ್ಳ ಬೇಕಿದೆ. ಈ ನಿಟ್ಟಿನಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಷನ್ (ಒಎನ್‌ಜಿಸಿ) ಸಹ ಹಲವಾರು ಅನ್ವೇಷಣೆಗಳತ್ತ ಕೈ ಹಾಕಿದೆ. ನಾವು ಅಭಿವೃದ್ಧಿಪಡಿಸುತ್ತಿರುವ ಎಲ್‌ಎಸ್‌ಇಒಆರ್ ತಂತ್ರಜ್ಞಾನವು, ಒಎನ್‌ಜಿಸಿಯ ಅನ್ವೇಷಣೆಗಳಿಗೆ ಪೂರಕವಾಗಬಲ್ಲದು ಎಂದಿದ್ದಾರೆ. ಭೂಮಿಯೊಳಗೆ ಸುಣ್ಣದ ಕಲ್ಲು ಹಾಗೂ ಮರಳಿನ ಕಲ್ಲುಗಳಲ್ಲಿ ಇರುವ ತೈಲವನ್ನು ಹೊರತಗೆಯಲು ಸದ್ಯಕ್ಕೆ ವಾಟರ್ ಇಂಜೆಕ್ಷನ್ ಮಾದರಿಯ ತಂತ್ರಜ್ಞಾನವನ್ನು ಬಳಸಲಾ ಗುತ್ತಿದೆ. ಆದರೆ, ಕೆಲವೊಮ್ಮೆ ಈ ತಂತ್ರಜ್ಞಾನದಲ್ಲಿ ಆಗುವ ಹಿನ್ನಡೆಗಳನ್ನು ಎಲ್‌ಎಸ್‌ಇಒಆರ್ ತಂತ್ರಜ್ಞಾನ ಮೆಟ್ಟಿ ನಿಲ್ಲುತ್ತದೆ ಎಂದು ಅವರು ತಿಳಿಸಿದ್ದಾರೆ. Advertisement
ಕಚ್ಚಾ ತೈಲ: ಸ್ವದೇಶಿ ತಂತ್ರಜ್ಞಾನ
10:46 PM May 27, 2019 | mahesh |
Advertisement
Udayavani is now on Telegram. Click here to join our channel and stay updated with the latest news.