Advertisement

ಐಐಟಿ ಮದ್ರಾಸ್‌ ವಿದ್ಯಾರ್ಥಿಗಳಿಗೆ ಆಫ‌ರ್‌ ಸುರಿಮಳೆ!

06:53 PM Aug 08, 2022 | Team Udayavani |

ಚೆನ್ನೈ: ಐಐಟಿ ಮದ್ರಾಸ್‌ನಿಂದ ದಾಖಲೆ ಪ್ರಮಾಣದ ವಿದ್ಯಾರ್ಥಿಗಳು ಕ್ಯಾಂಪಸ್‌ ಮೂಲಕ ಆಯ್ಕೆಯಾಗಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ ಅತಿ ಹೆಚ್ಚು ಪ್ಲೇಸ್‌ಮೆಂಟ್‌ ಕಂಡು ದಾಖಲೆ ಬರೆದಿದೆ.

Advertisement

2021-22ನೇ ಶೈಕ್ಷಣಿಕ ವರ್ಷದಲ್ಲಿ ಐಐಟಿ ಮದ್ರಾಸ್‌ನ ವಿದ್ಯಾರ್ಥಿಗಳಿಗೆ ಒಟ್ಟು 380 ಕಂಪನಿಗಳಿಂದ 1,199 ಕೆಲಸದ ಆಫ‌ರ್‌ಗಳು ಸಿಕ್ಕಿವೆ. ಅಲ್ಲಿ ಬೇಸಿಗೆಯ ಇಂಟರ್ನ್ಶಿಪ್‌ ಮಾಡಿದ ವಿದ್ಯಾರ್ಥಿಗಳಿಗೆ 231 ಕೆಲಸದ ಆಫ‌ರ್‌ ಸಿಕ್ಕಿದೆ. ಒಟ್ಟಾರೆ ಕೆಲಸದ ಆಫ‌ರ್‌ಗಳ ಸಂಖ್ಯೆ 1,430 ಆಗಿದೆ. ಇದರ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಇದೇ ಕಾಲೇಜಿನ ವಿದ್ಯಾರ್ಥಿಗಳಿಗೆ ಒಟ್ಟು 1,151 ಕೆಲಸದ ಆಫ‌ರ್‌ಗಳು ಸಿಕ್ಕಿದ್ದವು.

ವಿಶೇಷವೆಂದರೆ 14 ಅಂತಾರಾಷ್ಟ್ರೀಯ ಕಂಪನಿಗಳಿಂದ 45 ಅಂತಾರಾಷ್ಟ್ರೀಯ ಕೆಲಸಗಳ ಆಫ‌ರ್‌ ಅಭ್ಯರ್ಥಿಗಳಿಗೆ ಸಿಕ್ಕಿದೆ. ಎಂಬಿಎ ವಿಭಾಗದಲ್ಲಿ 61 ವಿದ್ಯಾರ್ಥಿಗಳಿದ್ದು, ಅವರೆಲ್ಲರಿಗೂ ಕೆಲಸದ ಆಫ‌ರ್‌ ಸಿಕ್ಕಿದೆ. ಒಟ್ಟಾರೆಯಾಗಿ ಪ್ಲೇಸ್‌ಮೆಂಟ್‌ಗೆ ನೋಂದಣಿ ಮಾಡಿಕೊಂಡಿದ್ದ ಅಭ್ಯರ್ಥಿಗಳ ಪೈಕಿ ಶೇ.80 ಅಭ್ಯರ್ಥಿಗಳಿಗೆ ಕೆಲಸದ ಆಫ‌ರ್‌ ಸಿಕ್ಕಿದೆ ಎಂದು ಸಂತಸದಿಂದ ಮಾಹಿತಿ ಹಂಚಿಕೊಂಡಿದೆ ಕಾಲೇಜು.

ಇದನ್ನೂ ಓದಿ:ಜೆಇಇ ಮೈನ್ಸ್‌ ಪರೀಕ್ಷಾ ಫ‌ಲಿತಾಂಶ ಪ್ರಕಟ; ಹೊಸ ದಾಖಲೆ

ಸಂಬಳವೆಷ್ಟು?
ಈ ವರ್ಷ ಐಐಟಿ ಮದ್ರಾಸ್‌ನಲ್ಲಿ ಕೆಲಸದ ಆಫ‌ರ್‌ ಸಿಕ್ಕಿರುವ ಅಭ್ಯರ್ಥಿಗಳ ಸಂಬಳದ ಸರಾಸರಿ ವರ್ಷಕ್ಕೆ 21.48 ಲಕ್ಷ ರೂ. ಇದೆ. ಓರ್ವ ಅಭ್ಯರ್ಥಿಗೆ ವರ್ಷಕ್ಕೆ 1.98 ಕೋಟಿ ರೂ. ವೇತನದ ಆಫ‌ರ್‌ ಇದ್ದು, ಅದೇ ಗರಿಷ್ಠ ಆಫ‌ರ್‌ ಮೊತ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next