Advertisement

ಐಐಟಿ: 3 ವರ್ಷದ ಹೊಸ ಕೋರ್ಸ್‌

11:31 PM Sep 27, 2019 | Team Udayavani |

ಹೊಸದಿಲ್ಲಿ: ಐಐಟಿಗಳಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮೂರು ವರ್ಷದ ಬಿಎಸ್‌ಸಿ ಪದವಿಯ ಆಯ್ಕೆಯನ್ನು ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಖ್ರಿಯಾಲ್‌ ನೇತೃತ್ವದ ಸಮಿತಿ ಅನುಮೋ ದಿಸಿದೆ. ಬಿಟೆಕ್‌ ಪೂರ್ಣಗೊಳಿ ಸಲಾಗದೇ ಹೊರಹೋಗುವ ವಿದ್ಯಾರ್ಥಿಗಳು ಮೂರು ವರ್ಷದ ಬಿಎಸ್‌ಸಿ ಪದವಿ ಪಡೆಯಬಹುದು. ಆದರೆ ಈ ಕುರಿತಂತೆ ಪ್ರತಿ ಐಐಟಿಗಳೂ ತಮ್ಮದೇ ಪಠ್ಯಕ್ರಮವನ್ನು ಅಳವಡಿಸಿಕೊಳ್ಳ ಬಹುದಾಗಿದೆ. ಸದ್ಯ ನಾಲ್ಕು ವರ್ಷಗಳ ಬಿಟೆಕ್‌ ಅನ್ನು ಐಐಟಿಗಳು ಒದಗಿಸುತ್ತಿದ್ದು, ವಿದ್ಯಾರ್ಥಿ ಗಳು ಎರಡನೇ ಸೆಮಿಸ್ಟರ್‌ನಿಂದಲೇ ಬಿಎಸ್‌ಸಿಗೆ ಸೇರಿಕೊಳ್ಳಬಹುದು. ಕಳೆದ ಎರಡು ವರ್ಷ ಗಳಲ್ಲಿ 23 ಸಂಸ್ಥೆಗಳಿಂದ 2461 ವಿದ್ಯಾರ್ಥಿಗಳು ಹೊರಹೋಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next