ಕೋಲ್ಕತ : IIM ಕಲ್ಕತ್ತಾ 2016-2018ರ ತನ್ನ ಬ್ಯಾಚಿಗೆ ಕೇವಲ ಎರಡೇ ದಿನಗಳಲ್ಲಿ ಶೇ.100 ಪ್ಲೇಸ್ ಮೆಂಟ್ ಸಾಧಿಸಿದೆ. ಅತ್ಯಧಿಕ ಸಂಖ್ಯೆಯ ಪ್ಲೇಸ್ ಮೆಂಟ್ ನಡೆದಿರುವುದು ಕನ್ಸಲ್ಟಿಂಗ್ ಸೆಕ್ಟರ್‌ನಿಂದ ಎಂಬುದು ಗಮನಾರ್ಹವಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಒಟ್ಟು 131 ಸಂಸ್ಥೆಗಳಿಂದ 481 ಜಾಬ್ ಆಫರ್‌ಗಳು ಬಂದಿದ್ದವು; ಇದರಲ್ಲಿ ಶೇ.50ರಷ್ಟು ಆಫರ್‌ಗಳು ಕನ್ಸಲ್ಟಿಂಗ್ ಮತ್ತು ಫಿನಾನ್ಸ್ ಸೆಕ್ಟರ್‌ನಿಂದಲೇ ಬಂದಿದ್ದವು ಎಂದು ಪ್ರಕಟನೆ ಹೇಳಿದೆ.
ಶೇ.23ರಷ್ಟು ಜಾಬ್‌ಆಫರ್‌ಗಳು ಹಣಕಾಸು ಸಂಸ್ಥೆಗಳಿಂದ ಬಂದಿದ್ದವು. ಇವುಗಳಲ್ಲಿ ಜೆಪಿ ಮಾರ್ಗನ್, ಬ್ಯಾಂಕ್ ಆಫ್ ಅಮೆರಿಕ, ಮೆರಿಲ್ ಲಿಂಚ್, ಮಾರ್ಗನ್ ಸ್ಟಾನ್‌ಲೀ, ಬೆಸಮರ್ ವೆಂಚೂರ್ ಪಾರ್ಟ್‌ನರ್ಸ್, ಗೋಲ್ಡ್ ಮನ್ ಸ್ಯಾಕ್ಸ್ ಮತ್ತು ಸಿಟಿ ಬ್ಯಾಂಕ್ ಪ್ರಮುಖವಾಗಿದ್ದವು.