Advertisement

ಶೈಕ್ಷಣಿಕ ಪ್ರಗತಿಗೆ ಐಜಿಎಸ್‌ ಸಹಕಾರಿ

05:00 PM May 18, 2018 | Team Udayavani |

ಹುಬ್ಬಳ್ಳಿ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಜ್ಞಾನ ವೃದ್ಧಿಗೆ ಐಜಿಎಸ್‌ ತುಂಬಾ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಐಜಿಎಸ್‌ನ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸದುಪಯೋಗ ಪಡೆಯಬೇಕು ಎಂದು ಬೆಂಗಳೂರಿನ ಐಜಿಎಸ್‌ ಚಾಪ್ಟರ್‌ನ ಕಾರ್ಯಾಧ್ಯಕ್ಷ ಡಾ| ಎಚ್‌.ಎನ್‌. ರಮೇಶ ಹೇಳಿದರು.

Advertisement

ಕೆಎಲ್‌ಇ ಸಂಸ್ಥೆಯ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಇಂಡಿಯನ್‌ ಜಿಯೋಟೆಕ್ನಿನಲ್‌ ಸೊಸೈಟಿ(ಐಜಿಎಸ್‌)ಯ ಚಾಪ್ಟರ್‌ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಪ್ರಥಮ ಚಾಪ್ಟರ್‌ ಅನ್ನು ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆರಂಭಿಸಲಾಗಿದೆ. ಇದರ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದರು.

ಸಿವಿಲ್‌ ವಿಭಾಗದ ಸಹಕಾರದೊಂದಿಗೆ ರಿಸೆಂಟ್‌ ಟ್ರೆಂಡ್‌ ಇನ್‌ ಜಿಯೋಟೆಕ್ನಿನಲ್‌ ಇಂಜಿನಿಯರಿಂಗ್‌ ವಿಷಯ ಮೇಲೆ ಮೂರು ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಸಿವಿಲ್‌ ವಿಭಾಗದ ಮುಖ್ಯಸ್ಥ ಡಾ| ಶರದ ಜೋಶಿ, ಡಾ| ಎಸ್‌.ಎಸ್‌. ಖಾದ್ರಿ, ಡಾ| ವಿ.ಎಸ್‌. ಹೆಗಡೆ, ಇಂಜಿನಿಯರ್‌ ಪ್ರವೀಣ ಸಫಾರೆ, ಪ್ರೊ. ರಜತ್‌ ವೈದ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು.

ಪ್ರಾಚಾರ್ಯ ಡಾ| ಬಸವರಾಜ ಎಸ್‌. ಅನಾಮಿ, ಡೀನ್‌ ಡಾ| ಆರ್‌.ಆರ್‌. ಬುರಬುರೆ, ಜಲವಾಹಿನಿ ಸಂಸ್ಥೆ ಮುಖ್ಯಸ್ಥ ಜಗದೀಶ ನಂದಿ, ಹು-ಧಾ ಇಂಡಿಯನ್‌ ಜಿಯೋಟೆಕ್ನಿಕಲ್‌ ಸೊಸೈಟಿ (ಐಜಿಎಸ್‌) ಕಾರ್ಯಾಧ್ಯಕ್ಷ ಡಾ| ಎಸ್‌.ಎಸ್‌. ಖಾದ್ರಿ, ಗೌರವ ಕಾರ್ಯದರ್ಶಿ ಡಾ| ಶರದ ಜಿ. ಜೋಶಿ, ಸಿವಿಲ್‌ ವಿಭಾಗದ ಪ್ರೊ| ರಜತ್‌ ವೈದ್ಯ, ಪ್ರೊ| ಶಬರೀಶ ಪಾಟೀಲ, ಐಜಿಎಸ್‌ನ ವಿದ್ಯಾರ್ಥಿ ಚಾಪ್ಟರ್‌ನ ಅಧ್ಯಕ್ಷ ಫಜಲ್‌ ಅಂಕಲಗಿ, ನಗರದ ವೃತ್ತಿನಿರತ ಇಂಜಿನಿಯರ್, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next