ಬೆಳಗಾವಿ: ಕರ್ನಾಟಕ ಆಚರಣೆ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮತ್ತೆ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಕರಾಳ ದಿನಾಚರಣೆ ಮಾಡಿದೆ.
ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡದಿದ್ದರೂ ಎಂಇಎಸ್ ನಾಯಕರು ಕರಾಳ ದಿನಾಚರಣೆ ಮಾಡಿದ್ದಾರೆ.
ಕರಾಳ ದಿನಾಚರಣೆ ಮಾಡಿರುವ ಎಂಇಎಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸುವ ಅಗತ್ಯ ಇಲ್ಲ. ಅದು ಹೆಸರಿಗಷ್ಟೇ ಇದೆ. ವರ್ಷದಲ್ಲೊಮ್ಮೆ ಅದಕ್ಕೆ ಕರಾಳ ದಿನ ನೆನಪಾಗುತ್ತದೆ. ಆದ್ದರಿಂದ ಅದನ್ನು ನಿಷೇಧಿಸುವುದಕ್ಕಿಂತ ನಿರ್ಲಕ್ಷ ಮಾಡುವುದು ಒಳಿತು.
ಎಂಇಎಸ್ ಸಂಘಟನೆ ನಿಷೇಧಿಸಿದರೆ, ಮತ್ತೆ ಅದರ ಕಡೆಗೆ ಹೆಚ್ಚಿನ ಒಲವು ಹೊಂದುವ ಸಾಧ್ಯತೆಯಿದೆ. ಹಾಗಾಗಿ ಅದನ್ನು ನಿಷೇಧಿಸುವುದಿಲ್ಲ ಎಂದು ಜಾರಕಿಹೊಳಿ ಹೇಳಿದರು.